ಪುತ್ತೂರು : ಬೆಂಗಳೂರಿನ ಅಬಾಕಸ್ ಸಂಸ್ಥೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯನ್ನು ಡಿಸೆಂಬರ್ 8, 2024 ರಂದು ಪುತ್ತೂರಿನ ಐಆರ್ಸಿಎಂಡಿ ಶಿಕ್ಷಣ ಸಂಸ್ಥೆಯಲ್ಲಿ ನಡೆಸಿತ್ತು. ಈ ಸ್ಪರ್ಧೆಯಲ್ಲಿ 26ಕ್ಕೂ ಅಧಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಗೆ 18 ಪ್ರಶಸ್ತಿಗಳು ಬಂದಿರುತ್ತವೆ.
ವಿಜೇತರ ಪಟ್ಟಿ
ಕು. ದೃತಿ ಎಸ್ ಎನ್, ಮಾ.ದಿಶಾಂತ್ ಕೆ ಎಸ್, ಕು. ಸಾನ್ವಿ ಗೌಡ ಎನ್ ವೈ, ಕು.ಚಾರ್ವಿ ಎಸ್ ಗೌಡ ಮತ್ತು ಮಾ. ಮುಹಮ್ಮದ್ ಶಮ್ಮಾಸ್ ಎಂ ಇವರುಗಳು ಕೇವಲ 6 ನಿಮಿಷದ ಒಳಗೆ 100 ಗಣಿತ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಮಾ.ಅನ್ವಿತ್ ಯು, ಮಾ.ಎಸ್ ಎನ್ ಕ್ಷಿತಿ ರಾಜ್, ಮಾ.ಚಿಂತನ್ ಎಸ್ ಕೆ ಮತ್ತು ಮಾ. ಅವಿಶ್ ಕೆ ಎಂ ಇವರುಗಳು ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಕು.ಸ್ತುತಿ ವಿ, ಕು.ಕೃತಿಕಾ ಯು, ಕು.ಅನ್ವಿ ಕೆ ಎಸ್ ಮತ್ತು ಮಾ.ಅನಗ್ ಎಚ್ ಗೌಡ ಇವರುಗಳು ಟಾಪರ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಮಾ. ಆಶಿತ್ ಕಿರಣ್, ಕು.ಹಿಮಾನಿ ಬಿ ಎಂ. ಕು.ಪೂರ್ವಿ ಜಿ ಕೆ, ಮಾ.ರಂಜಿತ್ ಆರ್ ಎಲ್ ಮತ್ತು ಮಾ. ವಿಖ್ಯಾತ್ ವೈ ಇವರುಗಳು ವಿನ್ನರ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇದರ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ ಡಿಸೆಂಬರ್ 15 ರಂದು ಬೊಳುವಾರಿನ ಮಹಾವೀರ ಹವಾನಿಯಂತ್ರಿತ ಕನ್ವೆನ್ಶನ್ ಹಾಲ್ ನಲ್ಲಿ ಜರಗಿತು.
ಸಂತ ಆನ್ಸ್ ಶಾಲೆಯ 18 ವಿದ್ಯಾರ್ಥಿಗಳಿಗೆ ಚಾಂಪಿಯನ್ ಆಫ್ ಚಾಂಪಿಯನ್, ಚಾಂಪಿಯನ್, ಟಾಪರ್ ಮತ್ತು ವಿನ್ನರ್ ಟ್ರೋಫಿಗಳು ಲಭಿಸಿದ್ದು, ಭಾಗ ವಹಿಸಿದ್ದ ಮಕ್ಕಳೆಲ್ಲರೂ ಪದಕ ವಿಜೇತರಾಗಿರುವುದು ವಿಶೇಷವಾಗಿದೆ. ಮೆದುಳಿನ ಕ್ರಿಯಾಶೀಲತೆಗೆ ಹಾಗೂ ಗಣಿತದಲ್ಲಿ ಪರಿಣಿತಿ ಹೊಂದಲು ಶ್ರೇಷ್ಠ ಎಂದೇ ಗುರುತಿಸಿಕೊಂಡಿರುವ ಅಬಾಕಸ್ ಸ್ಪರ್ಧೆಯಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿ ಗೆದ್ದಿರುವ ಮಕ್ಕಳು ತಮ್ಮ ಶಾಲೆಗೆ ಹೆಮ್ಮೆಯನ್ನು ತಂದಿರುವರಲ್ಲದೇ ತಮ್ಮ ಮಕ್ಕಳಿಗೆ ಪುತ್ತೂರಿನ ಹೆಸರಾಂತ ಅಬಾಕಸ್ ತರಬೇತಿ ಕೇಂದ್ರವಾದ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು ತರಬೇತಿಯನ್ನು ನೀಡಿತ್ತು ಎಂದು ಶಾಲಾ ಪ್ರಾಂಶುಪಾಲರಾದ ರೆ. ಫಾದರ್ ಅಮಿತ್ ಪ್ರಕಾಶ್ ರೊಡ್ರಿಗಸ್ ರವರು ತಿಳಿಸಿರುತ್ತಾರೆ.