ಪುತ್ತೂರು : ಬೆಂಗಳೂರಿನ ಅಬಾಕಸ್ ಸಂಸ್ಥೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯನ್ನು ಡಿಸೆಂಬರ್ 8, 2024 ರಂದು ಪುತ್ತೂರಿನ ಐಆರ್ಸಿಎಂಡಿ ಶಿಕ್ಷಣ ಸಂಸ್ಥೆಯಲ್ಲಿ ನಡೆಸಿತ್ತು. ಈ ಸ್ಪರ್ಧೆಯಲ್ಲಿ 26ಕ್ಕೂ ಅಧಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಬೆಟ್ಟಂಪಾಡಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಗೆ 15 ಪ್ರಶಸ್ತಿಗಳು ಬಂದಿರುತ್ತವೆ.
ವಿಜೇತರ ಪಟ್ಟಿ.
ಮಾ.ಅಭಿನವ್ ರಾಜ್ ಎನ್, ಮಾ.ಪಿ ಎಂ ಹೃಷಿಕೇಶ್ ಮತ್ತು ಕು.ಧನುಶ್ರೀ ಬಿ ಇವರುಗಳು ಕೇವಲ 6 ನಿಮಿಷದ ಒಳಗೆ 100 ಗಣಿತ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಕು. ಸಾಯೀಜನ್ಯ ಬಿ, ಮಾ.ನಮನ್, ಕು.ಅರ್ನವಿ ಘಾಟ್ ಡಿ, ಮಾ.ಯಶಸ್ ರೈ , ಮಾ.ತರುಣ್ ಕೆ ಮತ್ತು ಕು.ಹಾನಿ ಎಸ್ ಶೆಟ್ಟಿ ಇವರುಗಳು ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಮಾ.ಅಜಿಂಕ್ಯಾ ವಿ ಪಿ ಮತ್ತು ಕು.ಧೃತಿ ರೈ ಇವರುಗಳು ಟಾಪರ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಮಾ. ಆರ್ಯ ಭಟ್ ಸಿ ಎಚ್, ಕು.ದಿಯಪ್ರಕಾಶ್ ಎಂ, ಮಾ.ಆಶ್ಲೇಷ್ ರವಿರಾಜ್ ರೈ ಮತ್ತು ಕು. ಧನ್ವಿ ರೈ ಪಿ ಇವರುಗಳು ವಿನ್ನರ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇದರ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ ಡಿಸೆಂಬರ್ 15 ರಂದು ಬೊಳುವಾರಿನ ಮಹಾವೀರ ಹವಾನಿಯಂತ್ರಿತ ಕನ್ವೆನ್ಶನ್ ಹಾಲ್ ನಲ್ಲಿ ಜರಗಿತು.
ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ 15 ವಿದ್ಯಾರ್ಥಿಗಳಿಗೆ ಚಾಂಪಿಯನ್ ಆಫ್ ಚಾಂಪಿಯನ್, ಚಾಂಪಿಯನ್, ಟಾಪರ್ ಮತ್ತು ವಿನ್ನರ್ ಟ್ರೋಫಿಗಳು ಲಭಿಸಿದ್ದು, ಭಾಗ ವಹಿಸಿದ್ದ ಮಕ್ಕಳೆಲ್ಲರೂ ಪದಕ ವಿಜೇತರಾಗಿರುವುದು ವಿಶೇಷವಾಗಿದೆ. ಮೆದುಳಿನ ಕ್ರಿಯಾಶೀಲತೆಗೆ ಹಾಗೂ ಗಣಿತದಲ್ಲಿ ಪರಿಣಿತಿ ಹೊಂದಲು ಶ್ರೇಷ್ಠ ಎಂದೇ ಗುರುತಿಸಿಕೊಂಡಿರುವ ಅಬಾಕಸ್ ಸ್ಪರ್ಧೆಯಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿ ಗೆದ್ದಿರುವ ಮಕ್ಕಳು ತಮ್ಮ ಶಾಲೆಗೆ ಹೆಮ್ಮೆಯನ್ನು ತಂದಿರುವರಲ್ಲದೇ ತಮ್ಮ ಮಕ್ಕಳಿಗೆ ಪುತ್ತೂರಿನ ಹೆಸರಾಂತ ಅಬಾಕಸ್ ತರಬೇತಿ ಕೇಂದ್ರವಾದ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು ತರಬೇತಿಯನ್ನು ನೀಡಿತ್ತು ಎಂದು ಶಾಲಾ ಮುಖ್ಯಗುರುಗಳಾದ ಶ್ರೀ ರಾಜೇಶ್ ಎನ್ ರವರು ತಿಳಿಸಿರುತ್ತಾರೆ.