State Level Abacus Competition 2024: ಪುತ್ತೂರಿನ IRCMD ಶಿಕ್ಷಣ ಸಂಸ್ಥೆ ಮತ್ತು ಬೆಂಗಳೂರಿನ TRS ಶಿಕ್ಷಣ ಸಂಸ್ಥೆ ಜಂಟಿಯಾಗಿ ಕರ್ನಾಟಕ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯನ್ನು ಪುತ್ತೂರು, ಬೆಂಗಳೂರು, ತುಮಕೂರು ಮತ್ತು ಕುಶಾಲನಗರದಲ್ಲಿ ನಡೆಸಲಾಯಿತು. ಡಿಸೆಂಬರ್ 8, 2024 ರಂದು ಪುತ್ತೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಪುತ್ತೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ 250 ಕ್ಕೂ ಮಿಕ್ಕಿ ಪ್ರತಿಭಾವಂತ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.
IRCMD ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀ ಮತಿ ಪ್ರಫುಲ್ಲ ಗಣೇಶ್ ರವರು ಈ ಸ್ಪರ್ಧೆಯ ಬಗ್ಗೆ ತಮ್ಮ ಸಂತೃಪ್ತಿಯನ್ನು ವ್ಯಕ್ತಪಡಿಸಿ, ಪುತ್ತೂರಿನಲ್ಲಿಈ ನಡೆದ ಸ್ಪರ್ಧೆಗೆ ರಾಜ್ಯದಾದ್ಯಂತ ಸುಮಾರು 26ಕ್ಕೂ ಮಿಕ್ಕಿ ಶಾಲೆಯ 264 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಗಣಿತಶಾಸ್ತ್ರಕ್ಕೆ ಅವರ ಅಸಾಧಾರಣ ಕೌಶಲ್ಯ ಮತ್ತು ಸಮರ್ಪಣೆ ನಿರೀಕ್ಷೆಗೂ ಮೀರಿದ್ದು, ಅವರ ಕಲಿಕೆಗೆ ಪ್ರೀತಿಯನ್ನು ತುಂಬಿ ವೇದಿಕೆಯನ್ನು ಒದಗಿಸಿದ್ದು ಸಂಸ್ಥೆಗೆ ಹೆಮ್ಮೆಯನ್ನು ತಂದಿದೆ ಎಂದು ತಿಳಿಸಿದರು. ಈ ಸ್ಪರ್ಧೆಯು ಅಚ್ಚುಕಟ್ಟಾಗಿ ನಡೆದಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರು ಸ್ವಲ್ಪವೂ ವಿಚಲಿತರಾಗದಂತೆ ಸ್ಪರ್ಧೆಯ ಪ್ರಾರಂಭದಿಂದ ಕೊನೆಯ ತನಕ ಎಲ್ಲವನ್ನೂ ನಿಭಾಯಿಸಿದ್ದು, ವಿದ್ಯಾರ್ಥಿಗಳಿಗೆ ಗಣಿತ ಎಂದರೆ ಕಬ್ಬಿಣದ ಕಡಲೆಯಲ್ಲ ಎನ್ನುವುದನ್ನು ನಿರೂಪಿಸುವಲ್ಲಿ ಸಾಕ್ಷಿಯಾಗಿದ್ದಾರೆ.
ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸುವವರ ವೇಗ, ನಿಖರತೆ ಮತ್ತು ಮಾನಸಿಕ ಚುರುಕುತನವನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾದ 6 ನಿಮಿಸದ ಪರೀಕ್ಷೆಯನ್ನು ಇದು ಒಳಗೊಂಡಿತ್ತು. ವಿಜೇತರಿಗೆ ಇದೇ ಡಿಸೆಂಬರ್ 15ರಂದು ನಡೆಯುವ ಭವ್ಯ ಸಮಾರಂಭದ ವೇದಿಕೆಯಲ್ಲಿ ಗಣ್ಯ ಅತಿಥಿಗಳ ಮೂಲಕ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು.
IRCMD ಶಿಕ್ಷಣ ಸಂಸ್ಥೆ ಬಗ್ಗೆ.
ಪುತ್ತೂರಿಗೆ ಮೊದಲ ಬಾರಿಗೆ ಅಬಾಕಸ್ ಶಿಕ್ಷಣವನ್ನು ಬಹಳ ಸೃಜನಶೀಲ ಮತ್ತು ವಿಶಿಷ್ಟ ಕೌಶಲ್ಯಗಳೊಂದಿಗೆ (Visualization) ಕೇವಲ ಆಫ್ ಲೈನ್ ಮೂಲಕ ಮಾತ್ರವೇ ಪರಿಚಯಿಸಿದ ಕೀರ್ತಿ ಈ ಸಂಸ್ಥಗೆ ಸಲ್ಲುತ್ತದೆ. ಕೆಲವೇ ಕೆಲವು ಸೆಕೆಂಡುಗಳಲ್ಲಿ 20 ಕ್ಕೂ ಅಧಿಕ ಕೂಡುವಿಕೆ ಮತ್ತು ಕಳೆಯುವಿಕೆ ಪ್ರಶ್ನೆಗಳನ್ನು ಕೇಳಿ ಮಕ್ಕಳಿಂದ ತ್ವರಿತ ಉತ್ತರವನ್ನು ಹೇಳಿಸುವ ವಿಡಿಯೋಗಳನ್ನು ಮೊದಲ ಬಾರಿಗೆ ಪುತ್ತೂರಿಗೆ ಪರಿಚಯಿಸಿದ್ದು IRCMD ಶಿಕ್ಷಣ ಸಂಸ್ಥೆ. ಈ ವಿಡಿಯೋ ತುಣುಕನ್ನು ಕೆಳಗೆ ನೀಡಲಾಗಿದ್ದು ನೀವು ಕೂಡ ವೀಕ್ಷಿಸಬಹುದು. 2021ರಲ್ಲಿ ಇಂಟರ್ನ್ಯಾಷನಲ್ ಅವಾರ್ಡ್, 2022ರಲ್ಲಿ 2 ಸಲ ನ್ಯಾಷನಲ್ ಅವಾರ್ಡ್, 2023ರಲ್ಲಿ ತಿಪಟೂರಿನಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ 15ಕ್ಕೂ ಹೆಚ್ಚು ಪ್ರಶಸ್ತಿಯನ್ನು ಗಳಿಸಿದ ಗೌರವ ಈ ಸಂಸ್ಥೆಗೆ ಸಲ್ಲುತ್ತದೆ.
ಐಆರ್ಸಿಎಂಡಿ ಶಿಕ್ಷಣ ಸಂಸ್ಥೆಯು ಅಬಾಕಸ್ನ ಜೊತೆಗೆ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತಿ, ವೇದ ಗಣಿತ, ಬ್ಯಾಂಕಿಂಗ್ ಬ್ಯಾಂಕಿಗ್ ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ತರಬೇತುದಾರರಿಂದ ಸಮಗ್ರ ತರಬೇತಿಯನ್ನು ಪುತ್ತೂರು ಮತ್ತು ಸುಳ್ಯದಲ್ಲಿ ನೀಡುತ್ತಿದೆ. ಈ ಸಂಸ್ಥೆಯಲ್ಲಿ ದಾಖಲಾತಿಯನ್ನು ಬಯಸುವವರು 9945988118 ನಂಬರಿಗೆ ನೇರವಾಗಿ ಸಂಪರ್ಕಿಸಬಹುದು ಎಂದು ಐಆರ್ಸಿಎಂಡಿ ಶಿಕ್ಷಣ ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದ್ದಾರೆ.