ಪುತ್ತೂರು: ಅಬಾಕಸ್ ಮತ್ತು ವೇದ ಗಣಿತದಲ್ಲಿ ಸ್ಥಿರವಾದ ಉನ್ನತ ಸಾಧನೆಯನ್ನು ಗುರುತಿಸಿ ಜಾಗತಿಕ ಅತ್ಯುತ್ತಮ ಮಹಿಳಾ ಶಿಕ್ಷಕಿ ಅವಾರ್ಡ್ -2025 ಅನ್ನು IMRF ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ ಇಂಡಿಯಾ, ವಿಜಯವಾಡ ಇವರು ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಪ್ರಫುಲ್ಲ ಗಣೇಶ್ ಅವರಿಗೆ ನೀಡಿ ಗೌರವಿಸಲಾಯಿತು. 2021ರಲ್ಲಿ ಇಂಟರ್ನ್ಯಾಷನಲ್ ಅವಾರ್ಡ್, 2022ರಲ್ಲಿ 2 ಸಲ ನ್ಯಾಷನಲ್ ಅವಾರ್ಡ್, 2023ರಲ್ಲಿ ತಿಪಟೂರಿನಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ 15ಕ್ಕೂ ಹೆಚ್ಚು ಪ್ರಶಸ್ತಿ, 2023ರಲ್ಲಿ ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್. 2024ರಲ್ಲಿ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ 106 ಪ್ರಶಸ್ತಿಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಗಳಿಸಿದ ಗೌರವ ಐ.ಆರ್.ಸಿ.ಎಂ.ಡಿ ಸಂಸ್ಥೆಗೆ ಸಲ್ಲುತ್ತದೆ. ಪುತ್ತೂರಿಗೆ ಮೊದಲ ಬಾರಿಗೆ ಅಬಾಕಸ್ ಶಿಕ್ಷಣವನ್ನು ಬಹಳ ಸೃಜನಶೀಲ ಮತ್ತು ವಿಶಿಷ್ಟ ಕೌಶಲ್ಯಗಳೊಂದಿಗೆ (Visualization) ಕೇವಲ ಆಫ್ ಲೈನ್ ಮೂಲಕ ಮಾತ್ರವೇ ಪರಿಚಯಿಸಿದ ಕೀರ್ತಿ…
Read More