ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿಗೆ ಮೂಲಮಂತ್ರಗಳು- ಕೆ.ಡಿ.ಸಿಂಧೆ. ವಿಜಯಪುರ. (ಖ್ಯಾತ ತರಬೇತಿದಾರರು ಮತ್ತು ಲೇಖಕರು)

ಇದು ಸ್ಪರ್ಧಾತ್ಮಕ ಪ್ರಪಂಚ. ಇಲ್ಲಿ ಜ್ಞಾನವೇ ಹೆಚ್ಚು ಬೆಲೆ ಬಾಳುವಂತಹ ವಸ್ತು. ಎಲ್ಲಾ ಹುದ್ದೆಗಳಗೆ ನಿಮ್ಮ ಜ್ಞಾನವೇ ಅಳತೆಗೋಲು. ಪ್ರತಿವರ್ಷ ರೈಲ್ವೆ, ಬ್ಯಾಂಕಿಂಗ್ , ಎಸ್.ಎಸ್.ಸಿ, ಕೆ.ಪಿ.ಎಸ್.ಸಿ, ಯುಪಿ.ಎಸ್.ಸಿ, ಸೇನಾನೇಮಕಾತಿ , ಪೋಲಿಸ್, ಶಿಕ್ಷಕ ಹುದ್ದೆ ಸೇರಿದಂತೆ ಹಲವಾರು ನೇಮಕಾತಿಗಳು ಬರುತ್ತವೆ, ಎಲ್ಲದಕ್ಕೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲೇಬೇಕು. ಪ್ರತಿ ನೇಮಕಾತಿಗಾಗಿ ಲಕ್ಷ ಲಕ್ಷ ಅರ್ಜಿಗಳು ಬರುತ್ತವೆ ಏಕೆಂದರೆ ಸರಕಾರಿ ನೌಕರಿಯ ಸೆಳೆತವೇ ಹಾಗೆ ಎಲ್ಲರಿಗೂ ಸರಕಾರಿ ನೌಕರಿ ಪಡೆಯಬೇಕು. ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎನ್ನುವ ಕನಸ್ಸು ಇದ್ದೆ ಇರುತ್ತದೆ. ಹಾಗಾದರೆ ಆ ಪರೀಕ್ಷೆ ಪಾಸಾಗಲು ಇರುವ ಸರಳ ಸೂತ್ರಗಳನ್ನು ತಿಳಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. i) ಪರೀಕ್ಷೆ ಬರೆಯಲು ತೀರ್ಮಾನ ಕೈಗೊಳ್ಳುವುದು:-ನಮ್ಮ ವಿದ್ಯಾರ್ಹತೆಗೆ ಯಾವ ಯಾವ ನೇಮಕಾತಿ ಪರೀಕ್ಷೆ ಬರೆಯಬಹುದು ಎಂದು ತಿಳಿದು ಸಿದ್ದರಾಗುವುದು ಉತ್ತಮ. ಈ ಸಾರಿ ನಾನು ಪರೀಕ್ಷೆ ಪಾಸಾಗಲೇಬೇಕು ಎಂದು ತೀರ್ಮಾನ ಮಾಡುವುದು.…

Read More

KMAT 2023 (MBA/MCA).ಕರ್ನಾಟಕ ಮ್ಯಾನೇಜ್ಮೆಂಟ್ ಆಪ್ಟಿಟ್ಯೂಡ್ ಟೆಸ್ಟ್ ಗೆ ಆನ್ಲೈನ್ ಅರ್ಜಿ ಪ್ರಕ್ರಿಯೆಯು ಪ್ರಾರಂಭಗೊಂಡಿದೆ.

ಕರ್ನಾಟಕ ಮ್ಯಾನೇಜ್ಮೆಂಟ್ ಆಪ್ಟಿಟ್ಯೂಡ್ ಟೆಸ್ಟ್ KMAT-2023.ಕರ್ನಾಟಕ ಖಾಸಗಿ ಸ್ನಾತಕೋತ್ತರ ಕಾಲೇಜುಗಳ ಸಂಘದಿಂದ (KPPGCA) 169 + AICTE-ಅನುಮೋದಿತ ವಿಶ್ವವಿದ್ಯಾಲಯ-ಸಂಯೋಜಿತ B-ಸ್ಕೂಲ್ ಗಳಿಗಾಗಿ ಕರ್ನಾಟಕದಲ್ಲಿ KMAT ಪರೀಕ್ಷೆ ನಡೆಯುತ್ತದೆ. KMAT 2023 ಅಖಿಲ ಭಾರತ ಪರೀಕ್ಷೆಯಾಗಿದ್ದು, ಇದು ಕರ್ನಾಟಕ ಮತ್ತು ದೇಶದಾದ್ಯಂತ 10 ಕ್ಕೂ ಹೆಚ್ಚು ನಗರಗಳಲ್ಲಿ ನಡೆಯಲಿದೆ. KMAT 2023 ಭಾರತ ಮತ್ತು ವಿದೇಶಗಳ ಎಲ್ಲಾ ಭಾಗಗಳ ಅಭ್ಯರ್ಥಿಗಳಿಗೆ ಮುಕ್ತವಾಗಿದೆ. KMAT 2023 ಕ್ಕೆ ಅರ್ಹತೆಗಳು:ಯಾವುದೇ ಮಾನ್ಯತೆ ಪಡೆದ ಪದವಿ/ ಸ್ನಾತಕೋತ್ತರ ಪದವಿ ಪರೀಕ್ಷೆ ಮತ್ತು ಒಟ್ಟಾರೆಯಾಗಿ ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು (SC/ST 45%). ಪದವಿಯ ಅಂತಿಮ ವರ್ಷದ ಅಭ್ಯರ್ಥಿಗಳು ಸಹ ಅರ್ಹರಾಗಿರುತ್ತಾರೆ. KMAT 2023 ಪರೀಕ್ಷೆಯು 2 ಗಂಟೆಗಳ ಅವಧಿಯನ್ನು ಹೊಂದಿರುತ್ತದೆ. ಇದು ಹೋಮ್ ಬೇಸ್ಡ್ ಆನ್‌ಲೈನ್ ರಿಮೋಟ್ ಪ್ರೊಕ್ಟರಡ್ ಟೆಸ್ಟ್ ಆಗಿರುತ್ತದೆ.KMAT ಪರೀಕ್ಷಾ ಪಠ್ಯಕ್ರಮ120 ಅಂಕಗಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ For MBA…

Read More

ಯುವ ಜನತೆ ಎತ್ತ ಸಾಗುತ್ತಿದೆ…!!

“ಶುದ್ಧತೆ, ತಾಳ್ಮೆ ಮತ್ತು ಪರಿಶ್ರಮ ಮಂತ್ರ ನಮ್ಮ ಯುವ ಜನತೆಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ” ಸ್ವಾಮಿ ವಿವೇಕಾನಂದರ ಈ ಮಾತು ಪ್ರಸ್ತುತ ದಿನಗಳಲ್ಲಿ ಅಗತ್ಯವೆನಿಸುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಬಹಳ ಪ್ರಾಮುಖ್ಯವಾದದ್ದು. ಯುವಶಕ್ತಿಯೇ ಅಭಿವೃದ್ಧಿಯ ಹರಿಕಾರರಾಗಿದ್ದು ಅವರಲ್ಲಿರುವ ಕೌಶಲ್ಯ ಮತ್ತು ಪ್ರತಿಭೆಗಳನ್ನು ಬೆಳೆಸುವ ಕೆಲಸವಿಂದು ಆಗಬೇಕಾಗಿದೆ. ಜಗತ್ತಿನಾದ್ಯಂತ ಸರಿ ಸುಮಾರು 18 ಬಿಲಿಯನ್ನಷ್ಟು ಯುವ ಜನರಿದ್ದು, ಭಾರತದಲ್ಲಿ 356 ಮಿಲಿಯನ್ ನಷ್ಟು ಯುವ ಜನರಿದ್ದಾರೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಅತೀ ಹೆಚ್ಚು ಯುವ ಜನರನ್ನು ಹೊಂದಿರುವ ದೇಶ ಭಾರತ ಎಂಬ ಕೀರ್ತಿಗೆ ನಮ್ಮ ದೇಶ ಭಾಜನವಾಗಿದೆ. ಈ ಕಾರಣದಿಂದ ಭಾರತವನ್ನು ಯುವ ಭಾರತ ಎಂದು ಕರೆದರೂ ಅತಿಶಯೋಕ್ತಿ ಎನಿಸಲಾರದು. ಕೇವಲ ಯುವಶಕ್ತಿ ದೇಶದಲ್ಲಿದ್ದ ಮಾತ್ರಕ್ಕೆ ಆ ದೇಶ ಮುಂದುವರಿಯುತ್ತಿದೆ ಎಂದು ಅರ್ಥವಲ್ಲ. ಯುವಶಕ್ತಿಯನ್ನು ಬೆಳವಣಿಗೆಯ ಅಸ್ತ್ರವನ್ನಾಗಿ ಹಾಗು ಸಂಪನ್ಮೂಲವನ್ನಾಗಿ ಯಶಸ್ವಿಯಾಗಿ ಬಳಸಿಕೊಂಡಾಗ ಮಾತ್ರ ದೇಶ ಮುಂದುವರಿಯುವುದು…

Read More

ಅಬಾಕಸ್ ಕಲಿಕೆಯಿಂದ ಮಕ್ಕಳಿಗೆ ಆಗುವ ಪ್ರಯೋಜನಗಳು

ಅಬಾಕಸ್ ಅಂದರೆ ಏನು? ಅಬಾಕಸ್ ಯಾತಕ್ಕಾಗಿ? ಅಬಾಕಸ್‌ನಿಂದ ಆಗುವ ಪ್ರಯೋಜನ? ಹೆಚ್ಚಿನ ಪೋಷಕರಿಗೆ ಅಬಾಕಸ್ ಅಂದರೆ ಏನು?, ಅಬಾಕಸ್ ಯಾತಕ್ಕಾಗಿ?, ಅಬಾಕಸ್‌ನಿಂದ ಆಗುವ ಪ್ರಯೋಜನದ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಮಕ್ಕಳಿಗೆ ಗಣಿತದಲ್ಲಿ ಆಸಕ್ತಿಯನ್ನು ಉಂಟು ಮಾಡುವ ಏಕೈಕ ತರಬೇತಿಯೇ ಅಬಾಕಸ್. ಅಬಾಕಸ್ ಕಲಿತ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ 6 ಪಟ್ಟು ಹೆಚ್ಚು ವೇಗದಲ್ಲಿ ಸಂಖ್ಯೆಗಳನ್ನು ಗುರುತಿಸುತ್ತಾರೆ. ಜೊತೆಗೆ ಫೋಟಾಗ್ರಾಫಿಕ್ ಮೆಮೊರಿಯನ್ನು ಕೂಡ ಅಳವಡಿಸಿಕೊಂಡಿರುತ್ತಾರೆ. ಅಬಾಕಸ್ ಕೇವಲ ಗಣಿತಕ್ಕೆ ಸಂಬಂಧಿಸಿದ ಕಲಿಕೆಯಲ್ಲ ಇದೊಂದು ರೈಟ್ ಬ್ರಾಂಡ್ ಡೆವಲಪ್ಮೆಂಟ್ ಪ್ರೋಗ್ರಾಮ್. ಇದರಲ್ಲಿರುವ ಬೀಡ್‌ನಲ್ಲಿ ವಾಲ್ಯೂ ಇರುತ್ತದೆ. ಮಕ್ಕಳು ಎರಡೂ ಕೈಗಳನ್ನು ಬಳಸಿ ಬೀಡ್ಸ್ ಮೂವ್ ಮಾಡಿ Addition, Substraction, Multiplication, Division ಮಾಡುತ್ತಾರೆ. ಪ್ರಯೋಜನಗಳು (ನೈಸರ್ಗಿಕ ಸಾಮರ್ಥ್ಯ) • ಮಗುವಿನ ನೈಸರ್ಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.• ಚಿಕ್ಕ ಮಕ್ಕಳು ತುಂಬಾ ಖುಷಿಯಿಂದ ನಂಬರ್ ಗಳನ್ನೂ ಕಲಿಯುತ್ತಾರೆ.• ಇದು ಮಗುವಿಗೆ ಏಕಾಗ್ರತೆ (Concentration),…

Read More