ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿಗೆ ಮೂಲಮಂತ್ರಗಳು- ಕೆ.ಡಿ.ಸಿಂಧೆ. ವಿಜಯಪುರ. (ಖ್ಯಾತ ತರಬೇತಿದಾರರು ಮತ್ತು ಲೇಖಕರು)

ಶೇರ್ ಮಾಡಿ

ಇದು ಸ್ಪರ್ಧಾತ್ಮಕ ಪ್ರಪಂಚ. ಇಲ್ಲಿ ಜ್ಞಾನವೇ ಹೆಚ್ಚು ಬೆಲೆ ಬಾಳುವಂತಹ ವಸ್ತು. ಎಲ್ಲಾ ಹುದ್ದೆಗಳಗೆ ನಿಮ್ಮ ಜ್ಞಾನವೇ ಅಳತೆಗೋಲು. ಪ್ರತಿವರ್ಷ ರೈಲ್ವೆ, ಬ್ಯಾಂಕಿಂಗ್ , ಎಸ್.ಎಸ್.ಸಿ, ಕೆ.ಪಿ.ಎಸ್.ಸಿ, ಯುಪಿ.ಎಸ್.ಸಿ, ಸೇನಾನೇಮಕಾತಿ , ಪೋಲಿಸ್, ಶಿಕ್ಷಕ ಹುದ್ದೆ ಸೇರಿದಂತೆ ಹಲವಾರು ನೇಮಕಾತಿಗಳು ಬರುತ್ತವೆ, ಎಲ್ಲದಕ್ಕೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲೇಬೇಕು. ಪ್ರತಿ ನೇಮಕಾತಿಗಾಗಿ ಲಕ್ಷ ಲಕ್ಷ ಅರ್ಜಿಗಳು ಬರುತ್ತವೆ ಏಕೆಂದರೆ ಸರಕಾರಿ ನೌಕರಿಯ ಸೆಳೆತವೇ ಹಾಗೆ ಎಲ್ಲರಿಗೂ ಸರಕಾರಿ ನೌಕರಿ ಪಡೆಯಬೇಕು. ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎನ್ನುವ ಕನಸ್ಸು ಇದ್ದೆ ಇರುತ್ತದೆ. ಹಾಗಾದರೆ ಆ ಪರೀಕ್ಷೆ ಪಾಸಾಗಲು ಇರುವ ಸರಳ ಸೂತ್ರಗಳನ್ನು ತಿಳಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.

i) ಪರೀಕ್ಷೆ ಬರೆಯಲು ತೀರ್ಮಾನ ಕೈಗೊಳ್ಳುವುದು:-
ನಮ್ಮ ವಿದ್ಯಾರ್ಹತೆಗೆ ಯಾವ ಯಾವ ನೇಮಕಾತಿ ಪರೀಕ್ಷೆ ಬರೆಯಬಹುದು ಎಂದು ತಿಳಿದು ಸಿದ್ದರಾಗುವುದು ಉತ್ತಮ. ಈ ಸಾರಿ ನಾನು ಪರೀಕ್ಷೆ ಪಾಸಾಗಲೇಬೇಕು ಎಂದು ತೀರ್ಮಾನ ಮಾಡುವುದು. ಅದು ನಮಗೆ ಸ್ಪೂರ್ತಿ ಉತ್ಸಾಹ ಉಂಟುಮಾಡುತ್ತದೆ. ಇದನ್ನ ನಾವು ಗೋಲ್ ಸೆಟ್ಟಿಂಗ್ ಎನ್ನುತೇವೆ. ಗುರಿ ಹಾಕಿಕೊಳ್ಳದೇ ನಾವು ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗಲೂ ಸಾಧ್ಯವಿಲ್ಲ. ಯಾವುದೇ ಕಾರ್ಯ ಪಕ್ಕಾ ಪ್ಲಾನ್ ಮಾಡಿ ಹೊಡಿಬೇಕು.

ii) ಅಧ್ಯಯನ ಬೇಗ ಪ್ರಾರಂಭಿಸಿ:-
ಪರೇಕ್ಷೆಯ ಪಠ್ಯಕ್ರಮವನ್ನು ಸಮಗ್ರವಾಗಿ ಅರ್ಥೈಸಿಕೊಂಡು ಅಧ್ಯಯನ ಎಷ್ಟು ಸಾಧ್ಯವೊ ಅಷ್ಟು ಬೇಗ ಪ್ರಾರಂಭಿಸಿದರೆ ಎಲ್ಲ ಸ್ಪರ್ಧಾರ್ಥಿಗಿಂತ ನಮಗೆ ಹೆಚ್ಚು ವಿಷಯ ಅರ್ಥವಾಗುವುದು. ಅದರಲ್ಲಿ ಪರಿಣಿತಿ ಪಡೆದರೆ ಮಾತ್ರ ಉತ್ತಮವಾಗಿ ಪರೀಕ್ಷೆ ಬರೆಯಬಹುದು ಮತ್ತು ಹೆಚ್ಚು ಅಂಕಗಳನ್ನು ಪಡೆಯಬಹುದು.

iii) ವೇಳಾಪಟ್ಟಿಯೊಂದಿಗೆ ಅಧ್ಯಯನ ಪ್ರಾರಂಭ ಮಾಡಿ.
ಜೀವನದಲ್ಲಿ ಶಿಸ್ತು ಇಲ್ಲದೇ ಯಾರು ಸಹ ಸಾಧನೆ ಮಾಡಿದವರ ಇತಿಹಾಸ ಇಲ್ಲ. ಬದುಕಿನಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಇದ್ದರೆ ಗೆಲುವು ನಿಶ್ಚಿತ. ನೀವು ದಿನದಲ್ಲಿ ಎಷ್ಟು ಗಂಟೆ ಅಧ್ಯಯನಕ್ಕೆ ಮೀಸಲಿಡುತ್ತಿರೋ ಅದೇ ನಿಮ್ಮ ಯಶಸ್ಸಿಗೆ ಮೂಲ ಮಂತ್ರ.

iv) ಪರೀಕ್ಷೆ ಸಂಬಂಧಪಟ್ಟ ಉತ್ತಮ ಪುಸ್ತಕಗಳು:-
ಕ್ವಾಲಿಟಿ ಪುಸ್ತಕಗಳನ್ನು ಗುಣಮಟ್ಟದ ಲೇಖಕರ ಪುಸ್ತಕಗಳನ್ನು ಓದುವುದು. ಲಕ್ಷ ಲಕ್ಷ ಸಂಬಳ ಕೊಡುವಂತಹ ಸರಕಾರಿ ಹುದ್ದೆಗಾಗಿ ಚಿಕ್ಕಮಕ್ಕಳ ಮಗ್ಗಿ ಪುಸ್ತಕದಂತಹ ಪುಸ್ತಕಗಳನ್ನು ಓದಿದರೆ ಹೇಗೆ ಸರಕಾರಿ ನೌಕರಿ ಸಿಗುವುದು ಹೇಳಿ. ಒಳ್ಳೆಯ ಕೊಚಿಂಗ್‌ನಲ್ಲಿ ತರಬೇತಿ ಪಡೆದರೆ ಮತ್ತಷ್ಟು ಸಹಾಯವಾಗುತ್ತದೆ.

v) ಹೆಚ್ಚೆಚ್ಚು ಪುನರಾವರ್ತನೆ ಮಾಡಿ:-
ಯಾವುದೇ ಪರೀಕ್ಷೆಗೆ ಸುಮ್ಮನೆ ಓದುವುದಕ್ಕಿಂತ. ಓದಿದನ್ನು ಪದೇ ಪದೇ ಪುನರಾವರ್ತನೆ ಮಾಡಿದರೆ ಚೆನ್ನಾಗಿ ವಿಷಯ ನೆನಪಿನಲ್ಲಿರುತ್ತದೆ. ಓದಿರುವ ಪಾಠದಲ್ಲಿ ಮುಖ್ಯಾಂಶಗಳನ್ನು ಪಟ್ಟಿ ಮಾಡಿಕೊಳ್ಳಿ ಅದರ ಜೊತೆಯಲ್ಲಿ ನೀವೆ ಕೆಲವು ಪ್ರಶ್ನೆಗಳನ್ನು ತಯಾರಿಸಿ ಉತ್ತರಿಸುವುದರಿಂದ ಇನ್ನು ಚೆನ್ನಾಗಿ ನೆನಪುನಲ್ಲಿ ಉಳಿಯುವುದು.

vi) ಹಳೆಯ ಪ್ರಶ್ನೆ ಪತ್ರಿಕೆ ಬಿಡಿಸಿ.
ಹಿಂದಿನ ವರ್ಷದ ಪ್ರಶ್ನೆಗಳನ್ನು ಹೆಚ್ಚಾಗಿ ಬಿಡಿಸುವುದರಿಂದ ಪ್ರಶ್ನೆ ಹೇಗೆ ಕೇಳುತ್ತಾರೆ ಎಂಬ ಪರಿಕಲ್ಪನೆ ನಿಮಗೆ ಗೊತ್ತಾಗುತ್ತದೆ. ಕೆಲವೊಮ್ಮೆ ಹಳೆಯ ಪ್ರಶ್ನೆ ಪತ್ರಿಕೆಯಿಂದ ನೇರವಾಗಿ ಪ್ರಶ್ನೆಗಳನ್ನು ಎತ್ತಿ ಇಟ್ಟಿರುತ್ತಾರೆ.

vii) ಉತ್ಸಾಹ ಕೊನೆಯವರೆಗೂ ಕಾಪಾಡುವುದು.
ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸ್ಪರ್ಧಾರ್ಥಿಗಳಲ್ಲಿ ಮೊದಲಿರುವ ಉತ್ಸಾಹ ಮತ್ತು ಸ್ಪರ್ಧಾಮನೋಭಾವ ಕಾಲಕ್ರಮೇಣ ಕಡಿಮೆಯಾಗುತ್ತದೆ. ಇದಕ್ಕೆ ಮುಖ್ಯಕಾರಣ ಕಲಿಕಾ ವಾತಾವರಣ, ಮಾಹಿತಿ ಕೊರತೆ, ಯೋಜನೆಗಳ ಸಿದ್ದತೆ ಇಲ್ಲದಿರುವುದು, ಕುಟುಂಬದ ಅಡೆತಡೆಗಳು ಮುಂತಾದವುಗಳು. ಆದರೆ ಈ ಪರೀಕ್ಷೆಗಳಿಗಾಗಿ ದಿನದಿಂದ ದಿನಕ್ಕೆ ಉತ್ಸಾಹದಿಂದ ಪುಟಿದೇಳಬೇಕು. ಅಂದಾಗ ಮಾತ್ರ ಯಶಸ್ಸು ಸಿಗುವುದು.

viii) ಮೋಕ್‌ಟೆಸ್ಟ್ ತೆಗೆದುಕೊಳ್ಳವುದು:-
ಲಭ್ಯವಿರುವ ತರಬೇತಿ ಸಂಸ್ಥೆಯಿಂದ ಮಾಕ್ ಟೆಸ್ಟ್ ತೆಗೆದುಕೊಳ್ಳುವುದು ಉತ್ತಮ. ಆದರಿಂದ ನಮ್ಮ ತಪ್ಪುಗಳ ಸಂಖ್ಯೆ ಕಡಿಮೆ ಆಗಿ ಉತ್ತಮ ಅಂಕ ಬರುತ್ತದೆ.

ix) ತಂತ್ರಜ್ಞಾನದ ಸದ್ಬಳಕೆ:-
ವಿಷಯ ಸಂಗ್ರಣೆಗಾಗಿ ಮಾತ್ರ ತಂತ್ರಜ್ಞಾನ ಬಳಸುವುದು.

x) ಮೊಬೈಲ್‌ನಿಂದ ದೂರವಿರಿ:-
ಮೊಬೈಲ್‌ನಲ್ಲಿ ಬರುವ ವಾಟ್ಸ್ಅಫ್ ಮೆಸೆಜ್‌ಗಳು ಬೇರೆ ಬೇರೆ ನೋಟಿಫಿಕೇಶನ್ಗಳ ಸದ್ದು ನಮ್ಮ ಏಕಾಗ್ರತೆಯನ್ನು ಹಾಳು ಮಾಡುತ್ತದೆ. ಎಷ್ಟು ಬೇಕು ಅಷ್ಟೇ ಬಳಸುವುದು ಉತ್ತಮ.

ಕೆ.ಡಿ.ಸಿಂಧೆ. ವಿಜಯಪುರ.
ರೈಲ್ವೆ ಇಲಾಖೆ

Related posts