UGC NET: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು 2023ನೇ ಸಾಲಿನ ಡಿಸೆಂಬರ್ ಸೆಷನ್ ಎನ್ಇಟಿ ಪರೀಕ್ಷೆಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು, ಪರೀಕ್ಷೆ ವೇಳಾಪಟ್ಟಿ, ಇತರೆ ಮಾಹಿತಿಗಳನ್ನು ಇಲ್ಲಿ ತಿಳಿಯಿರಿ.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ಇದೇ ರೀತಿಯ ಎಲ್ಲಾ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ಪ್ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
Vritti News (JOB NEWS) channel on WhatsApp:
Advertisement
ಯುಜಿಸಿ ಎನ್ಇಟಿ ಡಿಸೆಂಬರ್ ಸೆಷನ್ ಪರೀಕ್ಷೆಯ ಪ್ರಮುಖ ದಿನಾಂಕಗಳು:-
i) ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 30-09-2023
ii) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-10-2023 ರ ಸಂಜೆ 05 ಗಂಟೆವರೆಗೆ.
iii) ಅಪ್ಲಿಕೇಶನ್ ತಿದ್ದುಪಡಿಗೆ ಅವಕಾಶ : ಅಕ್ಟೋಬರ್ 30, 31 ರ ರಾತ್ರಿ 11-50 ಗಂಟೆ ವರೆಗೆ.
iv) ಪರೀಕ್ಷೆ ಕೇಂದ್ರ ಪ್ರಕಟಿಸುವ ದಿನಾಂಕ : 2023 ನವೆಂಬರ್ ಕೊನೆ ವಾರ.
v) ಪ್ರವೇಶ ಪತ್ರ ಡೌನ್ಲೋಡ್ ದಿನಾಂಕ: ಡಿಸೆಂಬರ್ ಮೊದಲ ವಾರ 2023
vi) ಯುಜಿಸಿ ಎನ್ಇಟಿ ಪರೀಕ್ಷಾ ದಿನಾಂಕ : ಡಿಸೆಂಬರ್ 06-22 ರವರೆಗೆ.
ಯುಜಿಸಿ ಎನ್ಇಟಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆಗಳು:-
i) ಸಾಮಾನ್ಯ ವರ್ಗ/ ಮೀಸಲಾತಿಗೆ ಒಳಪಡದ ಅಭ್ಯರ್ಥಿಗಳು ಯಾವುದೇ ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ii) ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಎಸ್ಸಿ/ಎಸ್ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳು ಯಾವುದೇ ಸ್ನಾತಕೋತ್ತರ ಪದವಿಯಲ್ಲಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಯುಜಿಸಿ ಎನ್ಇಟಿ ಅಪ್ಲಿಕೇಶನ್ ಶುಲ್ಕ :-
i) ಸಾಮಾನ್ಯ ವರ್ಗ/ ಮೀಸಲಾತಿಗೆ ಒಳಪಡದ ಅಭ್ಯರ್ಥಿಗಳಿಗೆ ರೂ.1150.
ii) ಸಾಮಾನ್ಯ- EWS ಮತ್ತು ಹಿಂದುಳಿದ ವರ್ಗಗಳ (NCL) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.600
iii) ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ, ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.325.
ಯುಜಿಸಿ ಎನ್ಇಟಿ ಪರೀಕ್ಷಾ ಮಾದರಿ:-
ಯುಜಿಸಿ ಎನ್ಇಟಿ ಪರೀಕ್ಷೆಯನ್ನು 300 ಅಂಕಗಳಿಗೆ ನಡೆಸಲಾಗುತ್ತದೆ. ಸಾಮಾನ್ಯ ಪ್ರಶ್ನೆ ಪತ್ರಿಕೆ ಪೇಪರ್ 1 ಎಲ್ಲಾ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿದ್ದು, 100 ಅಂಕಗಳ 50 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ವಿಷಯ ಪತ್ರಿಕೆ 200 ಅಂಕಗಳ 100 ಪ್ರಶ್ನೆಗಳನ್ನು ಒಳಗೊಂಡಿದ್ದು ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಬೇಕು. ಒಟ್ಟು 3 ಗಂಟೆ ಸಮಯ ಸಿಬಿಟಿ ಪರೀಕ್ಷೆ ಇರುತ್ತದೆ. 3 ಗಂಟೆ ಅವಧಿಯಲ್ಲಿ ಅಭ್ಯರ್ಥಿಯು ಎರಡು ಪತ್ರಿಕೆಗಳಲ್ಲಿ ಯಾವ ಪ್ರಶ್ನೆ ಪತ್ರಿಕೆಯನ್ನು ಬೇಕಾದರೂ ಅಟೆಂಡ್ ಮಾಡಬಹುದು.
ಪರೀಕ್ಷಾ ಕೇಂದ್ರ ಆಯ್ಕೆ:-
ಅರ್ಜಿ ಸಲ್ಲಿಸುವಾಗ 4 ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ತಮ್ಮ ಆಧ್ಯತೆ ಮೇರೆಗೆ ಪರೀಕ್ಷಾ ಕೇಂದ್ರ ಆಯ್ಕೆ ಮಾಡಬಹುದು. ಎನ್ಇಟಿ ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಇದ್ದು, ಎರಡರಲ್ಲಿ ಒಂದು ಭಾಷೆಯನ್ನು ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳಬಹುದು(ಭಾಷಾ ವಿಷಯ ಹೊರಡುಪಡಿಸಿ).
ಆನ್ಲೈನ್ ಅರ್ಜಿ ಸಲ್ಲಿಸಲು ಮತ್ತು ಪ್ರವೇಶ ಪರೀಕ್ಷಾ ತರಬೇತಿಗಾಗಿ ಭೇಟಿ ಕೊಡಿ:
IRCMD Education Center.
Puttur / Sullia
Ph: 9632320477
ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
NOTIFICATION
UGC NET ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಲು ಕ್ಲಿಕ್ ಮಾಡಿ .
WEBSITE
UGC NET ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE
ನಿಮ್ಮ ಜವಾಬ್ದಾರಿಗಳು ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.