ನವೋದಯ ಶಾಲೆಗಳಲ್ಲಿ 2027-28ನೇ ಸಾಲಿಗೆ 6ನೇ ಕ್ಲಾಸ್ಗೆ ಪ್ರವೇಶ | ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ | ಸಂಪೂರ್ಣ ವಿವರ, ಅರ್ಜಿ ಲಿಂಕ್ ಇಲ್ಲಿದೆ – ವೃತ್ತಿ ನ್ಯೂಸ್.
Navodaya Vidyalaya Samiti Class VI JNVST (2027-28): ಜವಾಹರ ನವೋದಯ ವಿದ್ಯಾಲಯಗಳಲ್ಲಿ 2027-28ನೇ ಸಾಲಿಗೆ 6ನೇ ಕ್ಲಾಸ್ಗೆ ಪ್ರವೇಶ ನೀಡುವ ಸಂಬಂಧ, ಅರ್ಹತಾ ಪರೀಕ್ಷೆ ನಡೆಸಲು ಇದೀಗ ಅರ್ಜಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಪರೀಕ್ಷೆಯನ್ನು ಪ್ರಸ್ತುತ 5 ತರಗತಿ ಓದುತ್ತಿರುವ ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದು. ಕೆಳಗಿನ ಮಾಹಿತಿಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ.


ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
ಜವಾಹರ ನವೋದಯ ವಿದ್ಯಾಲಯಗಳಲ್ಲಿ 2027-28ನೇ ಸಾಲಿನಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಗೆ ಸಂಬಂಧ ಇದೀಗ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು, ಗುಣಮಟ್ಟಣದ ಶಿಕ್ಷಣ ಕೊಡಿಸಲು, ಆಧುನಿಕ ವ್ಯವಸ್ಥೆಯಲ್ಲಿ ಪರಿಸರ / ಅಡ್ವೆಂಚರ್ ಆಕ್ಟಿವಿಟಿಗಳು ಮತ್ತು ಉತ್ತಮ ದೈಹಿಕ ಶಿಕ್ಷಣದೊಂದಿಗೆ ಅಧ್ಯಯನ ಮಾಡಿಸಲು ಬಯಸಿದಲ್ಲಿ ಈ ಪರೀಕ್ಷೆಗೆ ತಮ್ಮ ಮಕ್ಕಳ ಪರವಾಗಿ ಈಗಲೇ ಅರ್ಜಿ ಸಲ್ಲಿಸಲು ಆರಂಭಿಸಿ. ಕೊನೆ ಕ್ಷಣದಲ್ಲಿ ಎದುರಾಗುವ ಸಮಸ್ಯೆಯಿಂದ ದೂರ ಉಳಿಯಿರಿ.
VI JNVST (2027-28) ಪರೀಕ್ಷೆ ಕುರಿತು:
ಈ ಪರೀಕ್ಷೆ 2 ಗಂಟೆಗಳ ಕಾಲ ನಡೆಯಲಿದೆ. 3 ಸೆಕ್ಷನ್ಗಳಿಂದ ಆಬ್ಜೆಕ್ಟಿವ್ ವಿಧದ ಪ್ರಶ್ನೆಗಳು ಇರಲಿವೆ. 100 ಅಂಕಗಳಿಗೆ 80 ಪ್ರಶ್ನೆಗಳು ಇರಲಿವೆ.
i) ಮಾನಸಿಕ ಸಾಮರ್ಥ್ಯ ಪರೀಕ್ಷೆ
ii) ಅಂಕಗಣಿತ ಪರೀಕ್ಷೆ
iii) ಭಾಷಾ ಪರೀಕ್ಷೆ.
ಪ್ರವೇಶ ಕಾರ್ಯವಿಧಾನ
ಆಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ಭಾರತದಲ್ಲಿನ ಪ್ರತೀ ಜಿಲ್ಲೆಯಲ್ಲಿನ ೫ನೆ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಿ ಜವಾಹರ್ ನವೋದಯ ವಿದ್ಯಾಲಯಗಳಿಗೆ ಪ್ರವೇಶಾವಕಾಶ ಕೊಡಲಾಗುವುದು. ಪ್ರವೇಶ ಪರೀಕ್ಷೆಯ ಪ್ರಶ್ನೆಗಳು ಆಯ್ಕೆ ಆಧಾರಿತ ಹಾಗೂ ಸಾಂಕೇತಿಕವಾಗಿರುತ್ತವೆ. ಇತ್ತೀಚೆಗೆ ೯ನೇ ಮತ್ತು ೧೧ನೇ ತರಗತಿಯ ವಿದ್ಯಾರ್ಥಿಗಳಿಗೆ ಕೂಡ ಪ್ರವೇಶಾವಕಾಶ ಕಲ್ಪಿಸಿಕೊಡಲಾಗುತ್ತಿದೆ. ೯ನೇ ಮತ್ತು ೧೧ನೇ ತರಗತಿ ವಿದ್ಯಾರ್ಥಿಗಳಿಗೆ ಆಂಗ್ಲ, ಗಣಿತ, ವಿಜ್ಞಾನ ಹಾಗು ಸಮಾಜಜ್ಞಾನ ಆಧರಿತವಾಗಿರುತ್ತದೆ. ವಿದ್ಯಾರ್ಥಿಗಳು ಶಾಲೆ ಬಿಟ್ಟುಹೋದುದರಿಂದ ತೆರವಾದ ಸ್ಥಾನಗಳಿಗೆ ೯ನೇ ಮತ್ತು ೧೧ನೇ ತರಗತಿಯ ಪ್ರವೇಶ ಅವಕಾಶಗಳು ನೀಡಲಾಗುತ್ತದೆ.
ಹೆಚ್ಚಿನ ವಿವರಗಳಿಗೆ ಹಾಗೂ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE:- Click here
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473
