ಹಿದಾಯ ಪಬ್ಲಿಕ್ ಸ್ಕೂಲ್ – ಬೆಳ್ಳಾರೆ | ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವ ಅಬಾಕಸ್ ತರಗತಿಗಳು ಪ್ರಾರಂಭ – ವೃತ್ತಿ ನ್ಯೂಸ್.

ಬೆಳ್ಳಾರೆ: Hidaya Public School Bellare ಇಲ್ಲಿ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಪ್ರಫುಲ್ಲ ಗಣೇಶ್ ಇವರಿಂದ ಅಬಾಕಸ್ ತರಗತಿಗಳು ಪ್ರಾರಂಭಗೊಂಡಿತು. ಗಣಿತದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವ ಅಬಾಕಸ್ ಮತ್ತು ವೇದ ಗಣಿತ ಅತಿ ಮುಖ್ಯ ಎಂದು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಅಬಾಕಸ್ ಅಂದರೆ ಏನು? ಅಬಾಕಸ್ ಯಾತಕ್ಕಾಗಿ? ಅಬಾಕಸ್‌ನಿಂದ ಆಗುವ ಪ್ರಯೋಜನ?ಹೆಚ್ಚಿನ ಪೋಷಕರಿಗೆ ಅಬಾಕಸ್ ಅಂದರೆ ಏನು?, ಅಬಾಕಸ್ ಯಾತಕ್ಕಾಗಿ?, ಅಬಾಕಸ್‌ನಿಂದ ಆಗುವ ಪ್ರಯೋಜನದ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಮಕ್ಕಳಿಗೆ ಗಣಿತದಲ್ಲಿ ಆಸಕ್ತಿಯನ್ನು ಉಂಟು ಮಾಡುವ ಏಕೈಕ ತರಬೇತಿಯೇ ಅಬಾಕಸ್. ಅಬಾಕಸ್ ಕಲಿತ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ 6 ಪಟ್ಟು ಹೆಚ್ಚು ವೇಗದಲ್ಲಿ ಸಂಖ್ಯೆಗಳನ್ನು ಗುರುತಿಸುತ್ತಾರೆ. ಜೊತೆಗೆ ಫೋಟಾಗ್ರಾಫಿಕ್ ಮೆಮೊರಿಯನ್ನು ಕೂಡ ಅಳವಡಿಸಿಕೊಂಡಿರುತ್ತಾರೆ. ಅಬಾಕಸ್ ಕೇವಲ ಗಣಿತಕ್ಕೆ ಸಂಬಂಧಿಸಿದ ಕಲಿಕೆಯಲ್ಲ ಇದೊಂದು ರೈಟ್ ಬ್ರಾಂಡ್…

Read More