ಅಬಾಕಸ್ ಅಂದರೆ ಏನು? ಅಬಾಕಸ್ ಯಾತಕ್ಕಾಗಿ? ಅಬಾಕಸ್‌ನಿಂದ ಆಗುವ ಪ್ರಯೋಜನ?
ಹೆಚ್ಚಿನ ಪೋಷಕರಿಗೆ ಅಬಾಕಸ್ ಅಂದರೆ ಏನು?, ಅಬಾಕಸ್ ಯಾತಕ್ಕಾಗಿ?, ಅಬಾಕಸ್‌ನಿಂದ ಆಗುವ ಪ್ರಯೋಜನದ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಮಕ್ಕಳಿಗೆ ಗಣಿತದಲ್ಲಿ ಆಸಕ್ತಿಯನ್ನು ಉಂಟು ಮಾಡುವ ಏಕೈಕ ತರಬೇತಿಯೇ ಅಬಾಕಸ್. ಅಬಾಕಸ್ ಕಲಿತ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ 6 ಪಟ್ಟು ಹೆಚ್ಚು ವೇಗದಲ್ಲಿ ಸಂಖ್ಯೆಗಳನ್ನು ಗುರುತಿಸುತ್ತಾರೆ. ಜೊತೆಗೆ ಫೋಟಾಗ್ರಾಫಿಕ್ ಮೆಮೊರಿಯನ್ನು ಕೂಡ ಅಳವಡಿಸಿಕೊಂಡಿರುತ್ತಾರೆ.
ಅಬಾಕಸ್ ಕೇವಲ ಗಣಿತಕ್ಕೆ ಸಂಬಂಧಿಸಿದ ಕಲಿಕೆಯಲ್ಲ ಇದೊಂದು ರೈಟ್ ಬ್ರಾಂಡ್ ಡೆವಲಪ್ಮೆಂಟ್ ಪ್ರೋಗ್ರಾಮ್. ಇದರಲ್ಲಿರುವ ಬೀಡ್‌ನಲ್ಲಿ ವಾಲ್ಯೂ ಇರುತ್ತದೆ. ಮಕ್ಕಳು ಎರಡೂ ಕೈಗಳನ್ನು ಬಳಸಿ ಬೀಡ್ಸ್ ಮೂವ್ ಮಾಡಿ Addition, Substraction, Multiplication, Division ಮಾಡುತ್ತಾರೆ.
ಪ್ರಯೋಜನಗಳು (ನೈಸರ್ಗಿಕ ಸಾಮರ್ಥ್ಯ)
• ಮಗುವಿನ ನೈಸರ್ಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
• ಚಿಕ್ಕ ಮಕ್ಕಳು ತುಂಬಾ ಖುಷಿಯಿಂದ ನಂಬರ್ ಗಳನ್ನೂ ಕಲಿಯುತ್ತಾರೆ.
• ಇದು ಮಗುವಿಗೆ ಏಕಾಗ್ರತೆ (Concentration), ಆಲಿಸುವಿಕೆ(Listening), ನಿಖರತೆ (Accuracy), ಗ್ರಹಿಕೆ ಛಾಯಾಗ್ರಹಣ (Peruption photography) ಇತ್ಯಾದಿಗಳಿಗೆ ಅನುವು ಮಾಡಿಕೊಡುತ್ತದೆ.
• ಇವಾಗಿನ ಮಕ್ಕಳು ಬೆರಳ ತುದಿಯಲ್ಲಿ ಮೊಬೈಲ್ ಸ್ಕ್ರೀನ್ ಟಚ್ ಮಾಡ್ತಾ ಇರುವಾಗ, ಅಬಾಕಸ್ ಕಲಿತ ಮಕ್ಕಳ ಬೆರಳ ತುದಿಯಲ್ಲಿ ಅನುಕ್ರಮ ಸಂಖ್ಯೆಗಳ Addition, Substraction ಒಟ್ಟೊಟ್ಟಿಗೆ ಮಾಡ್ತಾ ಹೋಗ್ತಾರೆ.
• ಇಲ್ಲಿ ಮುಖ್ಯವಾಗಿ ಮಗುವಿನ ಬ್ರೈನ್ ಡೆವಲಪ್ಮೆಂಟ್ ಆಗ್ತದೆ. ಲೆಫ್ಟ್ ಬ್ರೈನ್ ನಂಬರ್ಸ್ ತಗೊಂಡು ಹೋದ ಹಾಗೆ, ರೈಟ್ ಹ್ಯಾಂಡ್ ಬೀಡ್ಸ್ ವ್ಯಾಲ್ಯೂ ಮಾಡ್ತಾ ಹೋಗುತ್ತಾರೆ.
• ಲೆಫ್ಟ್ ಬ್ರೈನ್ – ಡಿಜಿಟಲ್ ಬ್ರೈನ್.
• ರೈಟ್ ಬ್ರೈನ್ – ಅನಲಾಗ್ ಬ್ರೈನ್.
ಲೆಫ್ಟ್ ಬ್ರೈನ್ – ರೀಡಿಂಗ್ , ರೈಟಿಂಗ್ , ಕ್ಯಾಲ್ಕ್ಯುಲೇಷನ್.
ರೈಟ್ ಬ್ರೈನ್ – ಸೃಜನಶೀಲತೆ , ಸುಸ್ಥಿರತೆ, ಸಮರ್ಥತೆ.
ಹಾಗಾಗಿ ಅಬಾಕಸ್‌ನಿಂದ ಒಂದು ಮಗುವಿನ ಸಂಪೂರ್ಣ ಮೆದುಳಿನ ಬೆಳವಣಿಗೆಯು ಜೊತೆಗೆ, ಆತ್ಮವಿಶ್ವಾಸ, ಇತರರೊಂದಿಗೆ ಸವಾಲು ಹಾಕುವ ಧೈರ್ಯ ಮತ್ತು ಸ್ವತಃ ಆಲ್‌ರೌಂಡರ್ ಆಗಿ ಯೋಚಿಸುತ್ತಾರೆ.
ಲೇಖನ
ಶ್ರೀಮತಿ ಪ್ರಫುಲ್ಲ ಗಣೇಶ್
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಪುತ್ತೂರಿನ ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ