ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಗೆ ಸಾಕ್ಷಿಯಾದ ಪುತ್ತೂರಿನ IRCMD ಶಿಕ್ಷಣ ಸಂಸ್ಥೆ | 250ಕ್ಕೂ ಮಿಕ್ಕಿ ಸ್ಪರ್ಧಾರ್ಥಿಗಳು | 26ಕ್ಕೂ ಅಧಿಕ ಶಾಲೆಯ ವಿದ್ಯಾರ್ಥಿಗಳು – ವೃತ್ತಿ ನ್ಯೂಸ್.

State Level Abacus Competition 2024: ಪುತ್ತೂರಿನ IRCMD ಶಿಕ್ಷಣ ಸಂಸ್ಥೆ ಮತ್ತು ಬೆಂಗಳೂರಿನ TRS ಶಿಕ್ಷಣ ಸಂಸ್ಥೆ ಜಂಟಿಯಾಗಿ ಕರ್ನಾಟಕ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯನ್ನು ಪುತ್ತೂರು, ಬೆಂಗಳೂರು, ತುಮಕೂರು ಮತ್ತು ಕುಶಾಲನಗರದಲ್ಲಿ ನಡೆಸಲಾಯಿತು. ಡಿಸೆಂಬರ್ 8, 2024 ರಂದು ಪುತ್ತೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಪುತ್ತೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ 250 ಕ್ಕೂ ಮಿಕ್ಕಿ ಪ್ರತಿಭಾವಂತ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. IRCMD ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀ ಮತಿ ಪ್ರಫುಲ್ಲ ಗಣೇಶ್ ರವರು ಈ ಸ್ಪರ್ಧೆಯ ಬಗ್ಗೆ ತಮ್ಮ ಸಂತೃಪ್ತಿಯನ್ನು ವ್ಯಕ್ತಪಡಿಸಿ, ಪುತ್ತೂರಿನಲ್ಲಿಈ ನಡೆದ ಸ್ಪರ್ಧೆಗೆ ರಾಜ್ಯದಾದ್ಯಂತ ಸುಮಾರು 26ಕ್ಕೂ ಮಿಕ್ಕಿ ಶಾಲೆಯ 264 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಗಣಿತಶಾಸ್ತ್ರಕ್ಕೆ ಅವರ ಅಸಾಧಾರಣ ಕೌಶಲ್ಯ ಮತ್ತು ಸಮರ್ಪಣೆ ನಿರೀಕ್ಷೆಗೂ ಮೀರಿದ್ದು, ಅವರ ಕಲಿಕೆಗೆ ಪ್ರೀತಿಯನ್ನು ತುಂಬಿ ವೇದಿಕೆಯನ್ನು ಒದಗಿಸಿದ್ದು ಸಂಸ್ಥೆಗೆ ಹೆಮ್ಮೆಯನ್ನು ತಂದಿದೆ ಎಂದು ತಿಳಿಸಿದರು.…

Read More