IRCMD Education Center: 2010 ರಲ್ಲಿ ಆರಂಭಗೊಂಡ IRCMD ಶಿಕ್ಷಣ ಸಂಸ್ಥೆ ಇಂದು ಕಂಪ್ಯೂಟರ್ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, ಅಬಾಕಸ್, ವೇದಿಕ್ ಮ್ಯಾಥ್ಸ್ ತರಬೇತಿಯನ್ನು ನೀಡುವ ಪುತ್ತೂರಿನ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಪ್ರತಿ ವಿದ್ಯಾರ್ಥಿಯನ್ನು ಉದ್ಯೋಗದತ್ತ ಕೊಂಡೊಯ್ಯುವುದೇ IRCMD ಶಿಕ್ಷ ಸಂಸ್ಥೆಯ ಮುಖ್ಯ ಧ್ಯೇಯವಾಗಿದ್ದು, ಇದಕ್ಕೆ ಪೂರಕವಾಗಿ ಅನೇಕ ಉದ್ಯೋಗ ಮೇಳ, ನೇರ ನೇಮಕಾತಿಗಳನ್ನೂ ಎಲ್ಲರಿಗೂ ಉಚಿತವಾಗಿ ನೀಡುತ್ತಾ ಬಂದಿರುತ್ತಾರೆ. ಇಲ್ಲಿ ಕೇವಲ ದಕ್ಷಿಣ ಕನ್ನಡದ ವಿದ್ಯಾರ್ಥಿಗಳಲ್ಲದೆ, ದೂರದ ಬಿಜಾಪುರ, ಶಿವಮೊಗ್ಗ, ಹಾಸನ, ತುಮಕೂರು, ಕೊಡಗು ಹಾಗು ನೆರೆ ರಾಜ್ಯವಾದ ಕೇರಳ ಮತ್ತು ತಮಿಳುನಾಡಿನಿಂದ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದಿರುವುದು ಇವರ ಹೆಮ್ಮೆಯ ವಿಷಯ.ಅಲ್ಲದೇ ಪ್ರತಿಷ್ಠಿತ ಕರ್ನಾಟಕ ಎಜುಕೇಷನಲ್ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಕೂಡ ಈ ಸಂಸ್ಥೆಗಿದೆ. IRCMD ಶಿಕ್ಷ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ವಿಭಾಗಗಳಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ .…
Read More