ಉಚಿತ ತರಬೇತಿ ಕಾರ್ಯಗಾರಕ್ಕೆ ನೋಂದಾವಣೆ ಪ್ರಾರಂಭ । ಶ್ರೀ ಕೆ ಡಿ ಸಿಂಧೆ ವಿಜಯಪುರ ಇವರಿಂದ VAO/PDO/FDA/PSI/PC ಇತ್ಯಾದಿ ಪ್ರವೇಶ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಗಾರ – ವೃತ್ತಿ ನ್ಯೂಸ್ .

ಶೇರ್ ಮಾಡಿ

ಶ್ರೀ ಕೆ ಡಿ ಸಿಂಧೆ ಯವರ ಕಿರು ಪರಿಚಯ
ವಿಜಯಪುರ ಜಿಲ್ಲೆ, ಬಸವನ ಬಾಗೇವಾಡಿಯಲ್ಲಿ ಜನಿಸಿದ, ಇವರ ಶೈಕ್ಷಣಿಕ ಜೀವನ ಎಲ್ಲರಂತೆ 1 ನೇ ತರಗತಿಯಿಂದ ಆರಂಭವಾಗಿರುವುದಿಲ್ಲ. ಬದಲಾಗಿ ತನ್ನ 11 ನೇ ವಯಸ್ಸಿನಲ್ಲಿ “ಚಿನ್ನರಂಗಳ” ಯೋಜನೆಯ ಮೂಲಕ ನೇರವಾಗಿ 5 ನೇ ತರಗತಿಗೆ ಪ್ರವೇಶ ಪಡೆದು, ಪದವಿ ಶಿಕ್ಷಣವನ್ನು ಜಿಲ್ಲೆಗೆ ಪ್ರಥಮ ರ‍್ಯಾಂಕ್ ಮೂಲಕ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪಡೆದು , ಬಿ.ಎಡ್ ಅನ್ನು ದ್ವಿತೀಯ ರ‍್ಯಾಂಕ್‌ ಮೂಲಕ ಬಾಗಲಕೋಟೆ ಜಿಲ್ಲೆಯಲ್ಲಿ ಪೂರೈಸಿ, ಎಂ.ಎ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಲ್ಲಿ ಪಡೆದರು. ಜಿಲ್ಲಾಮಟ್ಟದ ಮತ್ತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ, ಗಾಯನ ಸ್ಪರ್ಧೆ ಯಲ್ಲಿ ಅನೇಕ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದ್ದು
2012 ರಲ್ಲಿ KAS ಪೂರ್ವಭಾವಿ ಪರೀಕ್ಷೆ ಉತ್ತೀರ್ಣರಾಗಿ ಪರೀಕ್ಷೆಗೆ ಆಯ್ಕೆ, 2014 ವರೆಗೆ ಶಿಕ್ಷಣ ಇಲಾಖೆಯಲ್ಲಿ ಸೇವೆ.
2014 ರಿಂದ ರೈಲ್ವೇ ಇಲಾಖೆ ಯಲ್ಲಿ ಸೇವೆ ಸಲ್ಲಿಸುತ್ತಾ ಇದ್ದಾರೆ
ಉದ್ಯೋಗಾಕಾಂಕ್ಷಿಗಳಿಗೋಸ್ಕರ “ ರೈಲ್ವೇ ಜಾಬ್ ಗುರು ” ಪರೀಕ್ಷಾ ಕೈಪಿಡಿಯನ್ನು ಹೊರತಂದಿರುತ್ತಾರೆ. ವಿದ್ಯಾಕ್ರಾಂತಿ ಎಂಬ ಜಾಲವನ್ನು ಸ್ಥಾಪಿಸಿ ರಾಜ್ಯದ ವಿವಿಧ ಕಡೆಗಳಲ್ಲಿ ತನ್ನ ಬಿಡುವಿನ ವೇಳೆಯಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಜೊತೆಗೂಡಿ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರಿ ಉದ್ಯೋಗಳ ಬಗ್ಗೆ ಉಚಿತ ಮಾರ್ಗದರ್ಶನ ಮತ್ತು ತರಬೇತಿ ನೀಡಿರುತ್ತಾರೆ.

Related posts