Railway Recruitment 2024: ಸರ್ಕಾರಿ ಹುದ್ದೆಗೆ ಅರ್ಜಿ ಹಾಕುವ ಆಸಕ್ತ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯು 9144 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಿದೆ. ಈ ಹುದ್ದೆಗಳ ಕುರಿತು ವಿವರ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಅರ್ಹತೆ, ವಿದ್ಯಾರ್ಹತೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Advertisement
ರೈಲ್ವೇ ಇಲಾಖೆಯಲ್ಲಿ ಒಟ್ಟು 9144 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ (ಒಟ್ಟು 9144 ಹುದ್ದೆಗಳು):-
i) ಟೆಕ್ನೀಷಿಯನ್ ಗ್ರೇಡ್ -1 ಸಿಗ್ನಲ್ : 1092
ವಿದ್ಯಾರ್ಹತೆ: ಬಿಎಸ್ಸಿ / ಡಿಪ್ಲೊಮ / ಇಂಜಿನಿಯರಿಂಗ್ ಪಾಸ್ ಮಾಡಿರಬೇಕು.
ii) ಟೆಕ್ನೀಷಿಯನ್ ಗ್ರೇಡ್ -3 : 8052
ವಿದ್ಯಾರ್ಹತೆ: ಮೆಟ್ರಿಕ್ಯೂಲೇಷನ್ ಜತೆಗೆ ಐಟಿಐ ಪಾಸ್ ಮಾಡಿರಬೇಕು. ಎನ್ಸಿವಿಟಿ / ಎಸ್ಸಿವಿಟಿ ಪ್ರಮಾಣ ಪತ್ರ ಪಡೆದಿರಬೇಕು.
ವಯೋಮಿತಿ ವಿವರ ಈ ರೀತಿ ಇದೆ:-
ಟೆಕ್ನೀಷಿಯನ್ ಗ್ರೇಡ್ -1 ಸಿಗ್ನಲ್ : ಕನಿಷ್ಠ 18 ರಿಂದ ಗರಿಷ್ಠ 36 ವರ್ಷ.
ಟೆಕ್ನೀಷಿಯನ್ ಗ್ರೇಡ್ -3 : ಕನಿಷ್ಠ 18 ರಿಂದ ಗರಿಷ್ಠ 33 ವರ್ಷ.
ವಯಸ್ಸಿನ ಅರ್ಹತೆಯನ್ನು ದಿನಾಂಕ 01-07-2024 ಕ್ಕೆ ಪರಿಗಣಿಸಲಾಗುವುದು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:-
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪ್ರವೇಶ ಪರೀಕ್ಷಾ ಅಂಕಗಳ ಆಧಾರದಲ್ಲಿ ನೇಮಕಾತಿ ಮಾಡಲಾಗುವುದು.
ರೈಲ್ವೆ ನೇಮಕಾತಿ ಪ್ರವೇಶ ಪರೀಕ್ಷಾ ತರಬೇತಿ ಮತ್ತು ಆನ್ಲೈನ್ ಅರ್ಜಿ ಸಲ್ಲಿಸಲು ಇಂದೇ ಭೇಟಿ ಕೊಡಿ:-
IRCMD Education Center
Puttur & Sullia
Ph: 9632320477 / 9945988118
ಅರ್ಜಿ ಶುಲ್ಕ ವಿವರ:-
ಸಾಮಾನ್ಯ ಅರ್ಹತೆ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ರೂ.500. ರೂ.400 ಹಿಂದುರಿಗಿಸಲಾಗುತ್ತದೆ.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.250.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 08-ಏಪ್ರಿಲ್-2024
ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
NOTIFICATION- ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE – ಕ್ಲಿಕ್ ಮಾಡಿ
ನಿಮ್ಮ ಜವಾಬ್ದಾರಿಗಳು
ದಯವಿಟ್ಟು ಗಮನಿಸಿ : ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473