Army Agniveer Rally Exam 2025 : 2025-26 ಸಾಲಿನ ಅಗ್ನಿವೀರರ ನೇಮಕಾತಿಗೆ ಸಂಬಂಧ ಆನ್ಲೈನ್ ಅರ್ಜಿ ಸ್ವೀಕಾರವು ಇಂದಿನಿಂದ (ಮಾರ್ಚ್ 12, 2025) ಆರಂಭವಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು, ಅರ್ಹತೆ ಇರುವವರು ಅರ್ಜಿ ಸಲ್ಲಿಸಿ. ಈ ಹುದ್ದೆಗಳ ವಿಶೇಷತೆ ಎಂದರೆ ನೀವು ನಾಲ್ಕು ವರ್ಷ ಭಾರತೀಯ ರಕ್ಷಣಾ ಪಡೆಗಳಲ್ಲಿ ಸೇವೆ ಮಾಡುವ ಜತೆಗೆ, ಅತ್ಯುತ್ತಮ ಸಂಬಳ ಪಡೆಯುವ ಜತೆಗೆ, ನಿಮ್ಮ ಮುಂದಿನ ಶಿಕ್ಷಣಗಳನ್ನು ಸಹ ಅಲ್ಲಿಯೇ ಮುಗಿಸಿಕೊಳ್ಳಬಹುದಾಗಿದೆ. ಅರ್ಜಿಗೆ ಬೇಕಾದ ಕಂಪ್ಲೀಟ್ ಡೀಟೇಲ್ಸ್ ಈ ಕೆಳಗಿನಂತಿದೆ ನೋಡಿ. ಈ ಹುದ್ದೆಗಳ ಕುರಿತು ವಿವರ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಅರ್ಹತೆ, ವಿದ್ಯಾರ್ಹತೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473




ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ. ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
ಭಾರತೀಯ ರಕ್ಷಣಾ ಪಡೆಗಳಲ್ಲಿ ಅಗ್ನಿಪಥ ಯೋಜನೆಯ ಅಗ್ನಿವೀರರನ್ನು ಜೆನೆರಲ್ ಡ್ಯೂಟಿ, ಟೆಕ್ನೀಷಿಯನ್, ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್, ಟ್ರೇಡ್ಸ್ಮನ್, ಮಹಿಳಾ ಅಗ್ನಿವೀರರನ್ನು ಸೇನಾ ಪೊಲೀಸ್ ಪಡೆಗಳಲ್ಲಿ, ಹೀಗೆ ಈ ಎಲ್ಲಾ ಕೆಟಗರಿಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ :-
i) ಅಗ್ನಿವೀರ್ (ಜೆನೆರಲ್ ಡ್ಯೂಟಿ)
ವಿದ್ಯಾರ್ಹತೆ: ಎಸ್ಎಸ್ಎಲ್ಸಿ / 10th ಶಿಕ್ಷಣವನ್ನು ಕನಿಷ್ಠ 45 ಶೇಕಡ ಅಂಕಗಳೊಂದಿಗೆ ಪಡೆದಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇಕಡ.33 ಅಂಕಗಳೊಂದಿಗೆ ಪಾಸ್ ಆಗಿರಬೇಕು. ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಆದ್ಯತೆ ನೀಡಲಾಗುವುದು.
ii) ಅಗ್ನಿವೀರ್ (ಟೆಕ್)
ವಿದ್ಯಾರ್ಹತೆ: ದ್ವಿತೀಯ ಪಿಯುಸಿ / 10+2 ಶಿಕ್ಷಣವನ್ನು ಭೌತಶಾಸ್ತ್ರ/ ರಸಾಯನಶಾಸ್ತ್ರ / ಗಣಿತ / ಇಂಗ್ಲಿಷ್ ವಿಷಯಗಳಲ್ಲಿ ಓದಿ, ಶೇಕಡ.50 ಅಂಕಗಳೊಂದಿಗೆ ಪಾಸ್ ಆಗಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇಕಡ.40 ಅಂಕಗಳೊಂದಿಗೆ ಪಾಸ್ ಆಗಿರಬೇಕು.
iii) ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್
ವಿದ್ಯಾರ್ಹತೆ: ಪಿಯುಸಿ ಶಿಕ್ಷಣವನ್ನು ಯಾವುದೇ ವಿಷಯಗಳಲ್ಲಿ (ಆರ್ಟ್ಸ್, ಕಾಮರ್ಸ್, ಸೈನ್ಸ್) ಶೇಕಡ.60 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಶೇಕಡ.50 ಅಂಕ ಪಡೆದಿರಬೇಕು.
iv) ಅಗ್ನಿವೀರ್ ಟ್ರೇಡ್ಸ್ಮನ್
ವಿದ್ಯಾರ್ಹತೆ: 10ನೇ ತರಗತಿ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಶೇಕಡ.33 ಅಂಕ ಪಡೆದಿರಬೇಕು.
v) ಅಗ್ನಿವೀರ್ ಟ್ರೇಡ್ಸ್ಮನ್
ವಿದ್ಯಾರ್ಹತೆ: 8ನೇ ತರಗತಿ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಶೇಕಡ.33 ಅಂಕ ಪಡೆದಿರಬೇಕು.
vi) ಅಗ್ನಿವೀರ್ ಜೆನೆರಲ್ ಡ್ಯೂಟಿ – ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳಾ ಅಗ್ನಿವೀರರು
ವಿದ್ಯಾರ್ಹತೆ: ಎಸ್ಎಸ್ಎಲ್ಸಿ ಶಿಕ್ಷಣವನ್ನು ಕನಿಷ್ಠ ಶೇಕಡ.45 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಶೇಕಡ.33 ಅಂಕ ಪಡೆದಿರಬೇಕು. ಲೈಟ್ ಮೋಟಾರ್ ವೆಹಿಕಲ್ ವಾಹನ ಚಾಲನ ಪರವಾನಗಿ (ಡಿಎಲ್) ಇರುವವರಿಗೆ ಆದ್ಯತೆ ನೀಡಲಾಗುವುದು.
ವೇತನ ಶ್ರೇಣಿ ಮತ್ತು ಇತರೆ ಭತ್ಯೆಗಳು:
1ನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.
2ನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.
3ನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.
4ನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು.
ಇತರೆ ಭತ್ಯೆಗಳು:-
i) ರಿಸ್ಕ್ ಅಂಡ್ ಹಾರ್ಡ್ಶಿಪ್, ರೇಷನ್, ಡ್ರೆಸ್, ಪ್ರಯಾಣ ಭತ್ಯೆಗಳನ್ನು ನೀಡಲಾಗುತ್ತದೆ.
ii) ರೂ.48 ಲಕ್ಷ ಮೊತ್ತದ ಜೀವ ವಿಮೆ ಇರುತ್ತದೆ.
iii) ಅಗ್ನಿವೀರರಿಂದ 9 ಸಾವಿರ ರೂ ಮತ್ತು ಸರ್ಕಾರದ 9 ಸಾವಿರ ರೂ ಗಳ ವಂತಿಗೆಯಿಂದ ಪ್ರತಿ ತಿಂಗಳು 18 ಸಾವಿರ ರೂ.ಗಳ ಪಿಎಫ್ ಸೌಲಭ್ಯ ಇರಲಿದೆ.
ಒಟ್ಟಾರೆ ವಾರ್ಷಿಕ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ಇದೆ. 48 ಲಕ್ಷ ರೂಪಾಯಿವರೆಗಿನ ವಿಮಾ ಸೌಲಭ್ಯ ಇರಲಿದ್ದು, ಇದಕ್ಕೆ ಸೈನಿಕರು ವಂತಿಕೆ ಕಟ್ಟಬೇಕಿಲ್ಲ.
iv) ನಿವೃತ್ತಿ ಸಮಯದಲ್ಲಿ ಒಟ್ಟು 11.70 ಲಕ್ಷ ರೂ ನಿವೃತ್ತಿಯ ಪ್ಯಾಕೇಜ್ ಸಿಗಲಿದೆ. ಆದರೆ, ಪಿಂಚಣಿ ಸೌಲಭ್ಯವಿರುವುದಿಲ್ಲ.
v) ಸೇವಾ ಸಮಯದಲ್ಲಿ ಜೀವಹಾನಿಯಾದರೆ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ಜತೆಗೆ ಉಳಿದ ಸೇವಾ ಅವಧಿಯ ಸಂಬಳ ಪ್ರಾಪ್ತವಾಗಲಿದೆ.
vi) ಒಂದು ವೇಳೆ ಸೇವೆ ಸಮಯದಲ್ಲಿ ಅಂಗವೈಕಲ್ಯವಾದರೆ ಅದರ ಗಂಭೀರತೆ ಆಧಾರದಲ್ಲಿ ಪರಿಹಾರ ಸಿಗಲಿದೆ. ಸಾಮಾನ್ಯವಾಗಿ ಇದು 44 ಲಕ್ಷ ರೂಪಾಯಿವರೆಗೆ ಇರಲಿದೆ. ಜತೆಗೆ ಸೇವೆಯ ಉಳಿದ ಭಾಗದ ಸಂಬಳ ದೊರೆಯಲಿದೆ.
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:-
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ದೈಹಿಕ ಸದೃಢತೆ ಹಾಗೂ ಅರ್ಹತಾ ಪಟ್ಟಿ ಪರೀಕ್ಷೆಯ ಮೂಲಕ ನಡೆಯಲಿರುವ ಆಯ್ಕೆ ಪ್ರಕ್ರಿಯೆ.
ಅರ್ಜಿ ಶುಲ್ಕ ವಿವರ:-
General / OBC / EWS : 250/-
SC / ST : 250/-.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10/04/2025.
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ:-
i) ಕೆಳಗಿನ ಲಿಂಕ್/ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್ಲೋಡ್ ಮಾಡಿ.
ii) ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
iii) ಕೆಳಗಿನ ಆನ್ಲೈನ್ ಅಪ್ಲಿಕೇಶನ್ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
iv) ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
v) ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
vi) ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
vii) ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
viii) ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.
ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
NOTIFICATION – ಕ್ಲಿಕ್ ಮಾಡಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE – ಕ್ಲಿಕ್ ಮಾಡಿ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473




