Tata Capital Scholarship Programme : ಟಾಟಾ ಕ್ಯಾಪಿಟಲ್ ಲಿಮಿಟೆಡ್ ಟಾಟಾ ಗ್ರೂಪ್ನ ಹೆಸರಾಂತ ಹಣಕಾಸು ಸೇವಾ ಕಂಪನಿಯಾಗಿದೆ. ತನ್ನ CSR (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ಉಪಕ್ರಮದ ಭಾಗವಾಗಿ, ಅರ್ಹ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಕಂಪನಿಯು ಈ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪರಿಚಯಿಸಿದೆ. ಇದರ ಕುರಿತು ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
Advertisement
ಟಾಟಾ ಕ್ಯಾಪಿಟಲ್ ಲಿಮಿಟೆಡ್ ಕಂಪನಿಯು ಭಾರತೀಯ ಪಿಯುಸಿ, ಪದವಿ, ಡಿಪ್ಲೊಮಾ/ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ನೀಡಲಾಗುವ ‘ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್ ಪ್ರೋಗ್ರಾಮ್’ ಅನ್ನು ಜಾರಿ ಮಾಡಿದೆ. ಆಸಕ್ತರು ಅರ್ಹತೆ, ಸೌಲಭ್ಯ, ಪ್ರಮುಖ ದಿನಾಂಕ, ಅರ್ಜಿ ವಿಧಾನ ಕುರಿತು ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ. ಈ ಸ್ಕಾಲರ್ಶಿಪ್ ಅನ್ನು ಟಾಟಾ ಕ್ಯಾಪಿಟಲ್ ಲಿಮಿಟೆಡ್ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ಆರ್) ಉಪಕ್ರಮವಾಗಿ ನೀಡುತ್ತಿದೆ.
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಯಾವುವು?, ಎಷ್ಟು ವಿದ್ಯಾರ್ಥಿ ವೇತನ ದೊರೆಯುತ್ತದೆ?, ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಎಂಬುದರ ಸಂಪೂರ್ಣ ವಿವರ ಇಲ್ಲಿದೆ . ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ.
ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ:-
i) 11 ಮತ್ತು 12 ವಿದ್ಯಾರ್ಥಿಗಳಿಗೆ ಪಾವತಿಸಿದ ಶುಲ್ಕದ 80% ವರೆಗೆ ಅಥವಾ ₹10,000 ವರೆಗೆ (ಯಾವುದು ಕಡಿಮೆಯೋ ಅದು).
ii) ಪ್ರಸ್ತುತ ಪದವಿಪೂರ್ವ ಪದವಿ ಕಾರ್ಯಕ್ರಮಗಳಾದ ಬಿಕಾಂ, ಬಿಎಸ್ಸಿ, ಬಿಎ, ಇತ್ಯಾದಿ ಅಥವಾ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಡಿಪ್ಲೊಮಾ/ಪಾಲಿಟೆಕ್ನಿಕ್ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ಪಾವತಿಸಿದ ಶುಲ್ಕದ 80% ವರೆಗೆ ಅಥವಾ ₹12,000 ವರೆಗೆ (ಯಾವುದು ಕಡಿಮೆಯೋ ಅದು).
ಇದನ್ನು ಕೂಡ ಓದಿ:- ಕೋಟಕ್ ಮಹೀಂದ್ರಾ ಬ್ಯಾಂಕ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. Click here.
ಟಾಟಾ ಕ್ಯಾಪಿಟಲ್ ವಿದ್ಯಾರ್ಥಿವೇತನಕ್ಕೆ ಅರ್ಹತೆಗಳು :-
i) ವಿದ್ಯಾರ್ಥಿಯು ಭಾರತೀಯ ಪ್ರಜೆಯಾಗಿರಬೇಕು
ii) ಅರ್ಜಿದಾರರು ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
iii) ಕುಟುಂಬದ ವಾರ್ಷಿಕ ಆದಾಯವು ₹2.5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.
iv) Tata Capital & Buddy4Study ಉದ್ಯೋಗಿಗಳ ಮಕ್ಕಳು ಅರ್ಹರಲ್ಲ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:-
i) ಪಾಸ್ ಪೋರ್ಟ್ ಅಳತೆ ಭಾವಚಿತ್ರ.
ii) ಆದಾಯ ಪ್ರಮಾಣ ಪತ್ರ.
iii) ಆಧಾರ್ ಕಾರ್ಡ್.
iv) ಬ್ಯಾಂಕ್ ಖಾತೆಯ ವಿವರಗಳು.
v) ವಿದ್ಯಾರ್ಥಿಗಳ ಕಳೆದ ವರ್ಷದ ಶೈಕ್ಷಣಿಕ ಪರೀಕ್ಷೆಯ ಅಂಕಪಟ್ಟಿ.
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ :- 10 – ಮಾರ್ಚ್ – 2024
ಹೆಚ್ಚಿನ ವಿವರಗಳಿಗೆ ಹಾಗೂ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE:- Click here
ನಿಮ್ಮ ಜವಾಬ್ದಾರಿಗಳು:-
ದಯವಿಟ್ಟು ಗಮನಿಸಿ : ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473