Omron Healthcare Scholarship 2024-25 : ಪ್ರಿಯ ವಿದ್ಯಾರ್ಥಿಗಳೆ, ಇವತ್ತಿನ ಮಾಹಿತಿಯಲ್ಲಿ , ಓಮ್ರಾನ್ ಹೆಲ್ತ್ಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ನ ‘ಓಮ್ರಾನ್ ಹೆಲ್ತ್ಕೇರ್ ವಿದ್ಯಾರ್ಥಿವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ . ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಯಾವುವು? ಎಷ್ಟು ವಿದ್ಯಾರ್ಥಿ ವೇತನ ದೊರೆಯುತ್ತದೆ? ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು? ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ಕರೆ ಮಾಡಿ : 7892810864
ಓಮ್ರಾನ್ ಹೆಲ್ತ್ಕೇರ್ ಬಗ್ಗೆ :
ಓಮ್ರಾನ್ ಹೆಲ್ತ್ಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉತ್ತಮ ಗುಣಮಟ್ಟದ ರಕ್ತದೊತ್ತಡ ಮಾನಿಟರ್ಗಳು, ಉಸಿರಾಟದ ಚಿಕಿತ್ಸಾ ಸಾಧನಗಳು, ದೇಹದ ಕೊಬ್ಬಿನ ಮಾನಿಟರ್ಗಳು, ಡಿಜಿಟಲ್ ಥರ್ಮಾಮೀಟರ್ಗಳು, ನೋವು ನಿರ್ವಹಣಾ ಸಾಧನಗಳು ಮತ್ತು ಹೆಚ್ಚಿನವುಗಳ ಪ್ರಮುಖ ಪೂರೈಕೆದಾರರಾಗಿದ್ದಾರೆ.
ವಿದ್ಯಾರ್ಥಿವೇತನ ಮೊತ್ತದ ವಿವರ:
ಓಮ್ರಾನ್ ಹೆಲ್ತ್ಕೇರ್ ಸ್ಕಾಲರ್ಶಿಪ್ 2024-25 ಎಂಬುದು ಓಮ್ರಾನ್ ಹೆಲ್ತ್ಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಉಪಕ್ರಮವಾಗಿದ್ದು, ಅರ್ಹ ವಿದ್ಯಾರ್ಥಿನಿಯರಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ. ಈ ವಿದ್ಯಾರ್ಥಿವೇತನವು ಪ್ರಸ್ತುತ ಭಾರತದಾದ್ಯಂತ ಯಾವುದೇ ಶಾಲೆಯಲ್ಲಿ 9 ರಿಂದ 12 ನೇ ತರಗತಿಗಳಿಗೆ ದಾಖಲಾದ ಬಾಲಕಿಯರಿಗೆ ಮುಕ್ತವಾಗಿದೆ. ಆಯ್ಕೆಯಾದ ಅರ್ಜಿದಾರರು INR 20,000 ನ ಒಂದು ಬಾರಿ ವಿದ್ಯಾರ್ಥಿವೇತನ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-ಜನವರಿ-2025.
ಓಮ್ರಾನ್ ಹೆಲ್ತ್ಕೇರ್ ಸ್ಕಾಲರ್ಶಿಪ್ 2024-25′ ಗೆ ಅರ್ಜಿ ಹಾಕಲು ಅರ್ಹತೆಗಳು:-
i) 9ನೇ ತರಗತಿಯಿಂದ 12 ನೇ ತರಗತಿ ವರೆಗೆ ಯಾವುದೇ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಬಹುದು.
ii) ದೇಶದಾದ್ಯಂತದ ಯಾವುದೇ ರಾಜ್ಯದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಅರ್ಹರು.
iii)ವಿದ್ಯಾರ್ಥಿನಿಯರು ತಮ್ಮ ಹಿಂದಿನ ತರಗತಿಯಲ್ಲಿ ಕನಿಷ್ಠ ಶೇಕಡ.75 ಅಂಕಗಳನ್ನು ಗಳಿಸಿರಬೇಕು.
iv) ವಿದ್ಯಾರ್ಥಿನಿಯರ ಕುಟುಂಬದ ವಾರ್ಷಿಕ ಆದಾಯ ರೂ.8,00,000 ದೊಳಗಿರಬೇಕು.
v) ಓಮ್ರಾನ್ ಹೆಲ್ತ್ಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, Buddy4Study ಎಂಪ್ಲಾಯ್ಗಳ ಮಕ್ಕಳು ಅರ್ಜಿ ಹಾಕುವಂತಿಲ್ಲ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE- ಕ್ಲಿಕ್ ಮಾಡಿ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ಕರೆ ಮಾಡಿ : 7892810864