INDIAN AIR FORCE, Agniveer Jobs 2024: ಭಾರತೀಯ ವಾಯುಪಡೆಯ ಅಗ್ನಿವೀರ್ ವಾಯು ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳ ಕುರಿತು ವಿವರ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಅರ್ಹತೆ, ವಿದ್ಯಾರ್ಹತೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
Advertisement
ಗಮನಿಸಿ:- ಭಾರತೀಯ ವಾಯುಪಡೆಯಿಂದ ಅಗ್ನಿಪಥ ಯೋಜನೆಯಡಿ ಅಗ್ನಿವೀರವಾಯು ಹುದ್ದೆಗಳಿಗೆ ಆನಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆವಾರು ಅರ್ಹತೆ, ಅರ್ಜಿಗೆ ವೆಬ್ಸೈಟ್ ವಿಳಾಸ, ಪ್ರಮುಖ ದಿನಾಂಕಗಳ ಕುರಿತು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗದ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ. ದೇಶದ ಅವಿವಾಹಿತ ಯುವಕ-ಯುವತಿಯರು ನಿಗದಿತ ಅರ್ಹತೆಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ಕೇವಲ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಜನವರಿ 17 ರಂದು ಅರ್ಜಿಗೆ ಆನ್ಲೈನ್ ಲಿಂಕ್ ಆಕ್ಟಿವೇಟ್ ಮಾಡಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ನೇಮಕಾತಿ ಪರೀಕ್ಷೆಗಳು ಆರಂಭವಾಗಲಿವೆ. ಆಸಕ್ತರು ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ :-
ಅಗ್ನಿವೀರ್ ವಾಯು
ವಿದ್ಯಾರ್ಹತೆ:
12ನೇ ತರಗತಿಯಲ್ಲಿ ಗಣಿತ, ಭೌತಶಾಸ್ತ್ರ, ಇಂಗ್ಲಿಷ್ ಓದಿದ್ದು, ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇಂಗ್ಲಿಷ್ನಲ್ಲಿ ಶೇ.50 ಅಂಕ ಗಳಿಸಿರಬೇಕು. ಅಥವಾ
2 ವರ್ಷದ ವೃತ್ತಿಪರ ಕೋರ್ಸ್ಗಳನ್ನು ಓದಿರಬೇಕು. ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
ವಿಜ್ಞಾನ ವಿಭಾಗ ಹೊರತುಪಡಿಸಿ ಇತರೆ ಯಾವುದೇ ಸ್ಟ್ರೀಮ್ನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದವರು ಕನಿಷ್ಠ ಶೇಕಡ. 50 ಅಂಕ ಪಡೆದಿರಬೇಕು. ಇಂಗ್ಲಿಷ್ನಲ್ಲಿ ಶೇ.50 ಅಂಕ ಗಳಿಸಿರಬೇಕು.
ವೇತನ ಶ್ರೇಣಿ:
ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆ.
ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆ.
ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆ.
ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆ.
ಅಗ್ನಿವೀರ್ ಹುದ್ದೆಯಿಂದ ನಿವೃತ್ತಿ ಪಡೆದ ಸಂದರ್ಭದಲ್ಲಿ ಸೇವಾನಿಧಿ ಪ್ಯಾಕೇಜ್ – 10.04 ಲಕ್ಷ ರೂ ಅನ್ನು ಅಭ್ಯರ್ಥಿಗೆ ನೀಡಲಾಗುತ್ತದೆ.
ಇತರೆ ಭತ್ಯೆಗಳ ವಿವರ:-
ರೂ.48 ಲಕ್ಷ ಮೊತ್ತದ ಜೀವ ವಿಮೆ ಇರುತ್ತದೆ. ರಿಸ್ಕ್ ಅಂಡ್ ಹಾರ್ಡ್ಶಿಪ್, ರೇಷನ್, ಡ್ರೆಸ್, ಪ್ರಯಾಣ ಭತ್ಯೆಗಳನ್ನು ನೀಡಲಾಗುತ್ತದೆ.
ಅಗ್ನಿವೀರರಿಂದ 9 ಸಾವಿರ ರೂ ಮತ್ತು ಸರ್ಕಾರದ 9 ಸಾವಿರ ರೂ ಗಳ ವಂತಿಗೆಯಿಂದ ಪ್ರತಿ ತಿಂಗಳು 18 ಸಾವಿರ ರೂ.ಗಳ ಪಿಎಫ್ ಸೌಲಭ್ಯ ಇರಲಿದೆ.
ಸೇವಾ ಸಮಯದಲ್ಲಿ ಜೀವಹಾನಿಯಾದರೆ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ಜತೆಗೆ ಉಳಿದ ಸೇವಾ ಅವಧಿಯ ಸಂಬಳ ಪ್ರಾಪ್ತವಾಗಲಿದೆ. – ಒಂದು ವೇಳೆ ಸೇವೆ ಸಮಯದಲ್ಲಿ ಅಂಗವೈಕಲ್ಯವಾದರೆ ಅದರ ಗಂಭೀರತೆ ಆಧಾರದಲ್ಲಿ ಪರಿಹಾರ ಸಿಗಲಿದೆ. ಸಾಮಾನ್ಯವಾಗಿ ಇದು 44 ಲಕ್ಷ ರೂಪಾಯಿವರೆಗೆ ಇರಲಿದೆ. ಜತೆಗೆ ಸೇವೆಯ ಉಳಿದ ಭಾಗದ ಸಂಬಳ ದೊರೆಯಲಿದೆ.
ವಯೋಮಿತಿ ವಿವರ ಈ ರೀತಿ ಇದೆ:-
ಅರ್ಜಿ ಸಲ್ಲಿಸಲು ಬಯಸುವ ಅವಿವಾಹಿತ ಪುರುಷ -ಮಹಿಳೆಯರು 02 ಜನವರಿ 2004 ಮತ್ತು 02 ಜುಲೈ 2007 ರ ನಡುವೆ ಜನಿಸಿರಬೇಕು.
ಇದನ್ನು ಕೂಡ ಓದಿ:- ಕೋಟಕ್ ಮಹೀಂದ್ರಾ ಬ್ಯಾಂಕ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:–
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆಗಳನ್ನು ನಡೆಸುವ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಆಯ್ಕೆ ಪರೀಕ್ಷೆಗಳು 2024ರ ಮಾರ್ಚ್ 17 ರಿಂದ ಆರಂಭವಾಗಲಿವೆ.
ಅರ್ಜಿ ಶುಲ್ಕ ವಿವರ:-Rs 550 ರೂ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 06-02-2024 ರ ರಾತ್ರಿ 11-00 ಗಂಟೆವರೆಗೆ.
ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳನ್ನು ನೋಟಿಫಿಕೇಶನ್ ಮೂಲಕ ಓದಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
NOTIFICATION
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE
ನಿಮ್ಮ ಜವಾಬ್ದಾರಿಗಳು
ದಯವಿಟ್ಟು ಗಮನಿಸಿ : ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473