Computer Teacher Training Course: ಕಂಪ್ಯೂಟರ್ ಭೋದನಾ ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೀವನವನ್ನು ಮಾಡಲು ಬಯಸುವವರಿಗೆ ಒಂದು ಸುವರ್ಣಾವಕಾಶ . 2010 ರಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ IRCMD ಕಂಪ್ಯೂಟರ್ ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಸಂಸ್ಥೆಯಲ್ಲಿ 2024-25 ನೇ ಸಾಲಿನ ಉಚಿತ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ತರಬೇತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಗುಣಮಟ್ಟದ ತರಬೇತಿಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ IRCMD ಶಿಕ್ಷಣ ಸಂಸ್ಥೆಯು ಈ ಉಚಿತ ತರಬೇತಿಯನ್ನು ಆಯ್ದ ಅರ್ಹ ಅಭ್ಯರ್ಥಿಗಳಿಗೆ ನೀಡುತ್ತಾ ಬಂದಿರುತ್ತದೆ. ಪ್ರಸಕ್ತ 2024-25 ನೇ ಸಾಲಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಈ ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಒಂದು ವರುಷದ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ತರಬೇತಿಯನ್ನು ಪೂರ್ಣಗೊಳಿಸಿದವರಿಗೆ ಸರ್ಕಾರೀ ಕಾಪಿ ರೈಟೆಡ್ ಸರ್ಟಿಫಿಕೇಟ್ ನೀಡಲಾಗುವುದು. ಈ ಪ್ರಮಾಣ ಪತ್ರವನ್ನು ಪಡೆದ ವಿದ್ಯಾರ್ಥಿಗಳು ಯಾವುದೇ ಸರ್ಕಾರೀ ಮತ್ತು ಖಾಸಗಿ ಉದ್ಯೋಗವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಉಚಿತ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ತರಬೇತಿಗೆ ಅರ್ಹತೆಗಳು :-
1) ಯಾವುದೇ ಪದವಿಯನ್ನು ಕಡ್ಡಾಯವಾಗಿ ಪಡೆದಿರಬೇಕು.
2) ವಯಸ್ಸಿನ ಗರಿಷ್ಠ ಮಿತಿ – 23 ವರ್ಷ.
3) ಮಹಿಳಾ ಅಭ್ಯರ್ಥಿಗಳು ಮಾತ್ರ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-01-2024.
ಸೀಮಿತ ಸೀಟುಗಳು ಮಾತ್ರ ಇರುವುದರಿಂದ, ಆಸಕ್ತ ಅಭ್ಯರ್ಥಿಗಳು ದಿನಾಂಕ 17-01-2024 ರ ಮೊದಲು IRCMD ಶಿಕ್ಷಣ ಸಂಸ್ಥೆಯ ಪುತ್ತೂರಿನ ಪ್ರಧಾನ ಕಚೇರಿಯಲ್ಲಿ ಅಥವಾ ಸುಳ್ಯ ಶಾಖೆಯಲ್ಲೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9945988118 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯು ಪ್ರಕಟಣೆ ನೀಡಿದೆ.