LIC Golden Jubilee Scholarship Scheme- 2023 : ಭಾರತೀಯ ಜೀವ ವಿಮಾ ನಿಗಮ (LIC) ವು ವಿದ್ಯಾರ್ಥಿಗಳಿಗಾಗಿ ‘ಎಲ್ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್-2023’ ಗೆ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಹತೆ, ಅರ್ಜಿ ಸಲ್ಲಿಸಲು ಕೊನೆ ದಿನಾಂಕ, ಆನ್ಲೈನ್ ಅರ್ಜಿ ಭರ್ತಿಗೆ ಡೈರೆಕ್ಟ್ ಲಿಂಕ್ ಈ ಕೆಳಗಿನಂತೆ ನೀಡಲಾಗಿದೆ. ಇದರ ಕುರಿತು ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Vritti News (JOB NEWS) channel on WhatsApp:
Advertisement
LIC Golden Jubilee Scholarship Scheme- 2023 :
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಯಾವುವು?, ಎಷ್ಟು ವಿದ್ಯಾರ್ಥಿ ವೇತನ ದೊರೆಯುತ್ತದೆ?, ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಎಂಬುದರ ಸಂಪೂರ್ಣ ವಿವರ ಇಲ್ಲಿದೆ . ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ.
ಎಲ್ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್-2023 :-
i) ಪದವಿ ಕೋರ್ಸ್ಗಳು (BA/BCOM/BSC/BBA/BSW) – ವಾರ್ಷಿಕ ರೂ.20,000/-,
ii) ಡಿಪ್ಲೊಮಾ – ವಾರ್ಷಿಕ ರೂ.20,000/-,
iii) ಹೆಣ್ಣು ಮಗುವಿಗೆ ವಿಶೇಷ ವಿದ್ಯಾರ್ಥಿವೇತನ (HSC /ಡಿಪ್ಲೊಮಾ/10+2 ) – ವಾರ್ಷಿಕ ರೂ.15,000/-
iv) ಇಂಜಿನಿಯರಿಂಗ್ – ವಾರ್ಷಿಕ ರೂ.30,000/-,
v) ಮೆಡಿಕಲ್ – ವಾರ್ಷಿಕ ರೂ.40,000/-.
ರೆಗ್ಯುಲರ್ ಸ್ಕಾಲರ್ಶಿಪ್ ಅನ್ನು ವಿದ್ಯಾರ್ಥಿಯ ಸಂಪೂರ್ಣ ಕೋರ್ಸ್ ಮುಗಿಯುವವರೆಗೆ (UG ಕೋರ್ಸ್) ಮತ್ತು ವಿಶೇಷ ಹೆಣ್ಣು ಮಕ್ಕಳ ಸ್ಕಾಲರ್ಶಿಪ್ ಅನ್ನು 10+2 ಅಧ್ಯಯನ ಮುಗಿಯುವವರೆಗೆ ಅಂದರೆ ಎರಡು ವರ್ಷಗಳ ಕಾಲ ಮಾತ್ರ ನೀಡಲಾಗುತ್ತದೆ.
ಎಲ್ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್ ಅರ್ಹತೆಗಳು :-
i) ವಿದ್ಯಾರ್ಥಿಯು ಭಾರತೀಯ ಪ್ರಜೆಯಾಗಿರಬೇಕು
ii) ಅರ್ಜಿದಾರರು ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
iii) ಕುಟುಂಬದ ವಾರ್ಷಿಕ ಆದಾಯವು INR 2.5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:-
i) ಪಾಸ್ ಪೋರ್ಟ್ ಅಳತೆ ಭಾವಚಿತ್ರ.
ii) ಆದಾಯ ಪ್ರಮಾಣ ಪತ್ರ.
iii) ಆಧಾರ್ ಕಾರ್ಡ್.
iv) ಬ್ಯಾಂಕ್ ಖಾತೆಯ ವಿವರಗಳು.
v) ವಿದ್ಯಾರ್ಥಿಗಳ ಕಳೆದ ವರ್ಷದ ಶೈಕ್ಷಣಿಕ ಪರೀಕ್ಷೆಯ ಅಂಕಪಟ್ಟಿ.
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ :- 14.01.2024
ಅರ್ಜಿ ಸಲ್ಲಿಸುವ ಮೊದಲು ನೋಟಿಫಿಕೇಶನ್ ನಲ್ಲಿ ನೀಡಿರುವ ಸಂಪೂರ್ಣ ವಿವರಗಳನ್ನು ಓದಿ ಅರ್ಜಿ ಸಲ್ಲಿಸಿ . ನೋಟಿಫಿಕೇಶನ್ ಮತ್ತು ಡೈರೆಕ್ಟ್ ಅಪ್ಲೈ ಲಿಂಕ್ ಕೆಳಗೆ ನೀಡಲಾಗಿದೆ.
ಹೆಚ್ಚಿನ ವಿವರಗಳಿಗೆ ಹಾಗೂ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE:-
ನಿಮ್ಮ ಜವಾಬ್ದಾರಿಗಳು:-
ದಯವಿಟ್ಟು ಗಮನಿಸಿ : ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473