Karnataka Forest Department: ಕರ್ನಾಟಕ ಅರಣ್ಯ ಇಲಾಖೆಯು 540 ಫಾರೆಸ್ಟ್ ಗಾರ್ಡ್ (ಪುರುಷ ಮತ್ತು ಮಹಿಳಾ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವವರ ಅನುಕೂಲಕ್ಕಾಗಿ ಆಯ್ಕೆ ಪ್ರಕ್ರಿಯೆ ಕುರಿತು ಸಂಪೂರ್ಣ ಡೀಟೇಲ್ಸ್ ಅನ್ನು ಇಲ್ಲಿ ತಿಳಿಸಲಾಗಿದೆ. ಯಾವೆಲ್ಲ ಪರೀಕ್ಷೆಗಳು ಇರುತ್ತವೆ, ಅರ್ಹತೆ, ಇತರೆ ಸಂಪೂರ್ಣ ವಿವರ ಇಲ್ಲಿದೆ- ವೃತ್ತಿ ನ್ಯೂಸ್.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Vritti News (JOB NEWS) channel on WhatsApp:
Advertisement
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 (506 ಸರ್ಕಾರವು ಅನುಮತಿಸಿದ ಹುದ್ದೆ +34 ಹಿಂದಿನ ಅಧಿಸೂಚನೆಯಲ್ಲಿನ ಹಿಂಬಾಕಿ ಹುದ್ದೆಗಳು) ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ ‘ಅರಣ್ಯ ರಕ್ಷಕ) ಗ್ರೂಪ್ ‘ಸಿ’ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ದ್ವಿತೀಯ ಪಿಯುಸಿ
ವೇತನ ಶ್ರೇಣಿ: ಅರಣ್ಯ ರಕ್ಷಕ ಹುದ್ದೆಗಳಿಗೆ ವೇತನ ಶ್ರೇಣಿ ರೂ.18,600 – 32,600 ವರೆಗೆ ನೀಡಲಾಗುತ್ತದೆ. ಅಲ್ಲದೇ ಪಿಂಚಣಿ ಸೌಲಭ್ಯ, ವಿಶೇಷ ಭತ್ಯೆಗಳನ್ನು ನೀಡಲಾಗುತ್ತದೆ.
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:-
ಅರಣ್ಯ ರಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದವರ ವಿದ್ಯಾರ್ಹತೆ ಅಂಕಗಳ ಆಧಾರದಲ್ಲಿ ಮೀಸಲಾತಿಗೆ ಅನುಗುಣವಾಗಿ ಮತ್ತು ವೃತ್ತವಾರು ಹುದ್ದೆಗಳಿಗೆ ಅನುಗುಣವಾಗಿ 1:20 ಅನುಪಾತದಲ್ಲಿ ದೇಹದಾರ್ಢ್ಯತೆ, ದೈಹಿಕ ತಾಳ್ವಿಕೆ ಮತ್ತು ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗಳಿಗೆ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.
ಅರಣ್ಯ ರಕ್ಷಕರ ಹುದ್ದೆಗೆ ದೇಹದಾರ್ಢ್ಯತೆ ಪರೀಕ್ಷೆ ಮತ್ತು ಶಾರೀರಿಕ ಮಾನದಂಡಗಳು:-
ಪುರುಷ ಅಭ್ಯರ್ಥಿಗೆ :-
ಎತ್ತರ – ಕನಿಷ್ಠ 163 ಸೆಂ.ಮೀ.
ಎದೆ ಸುತ್ತಳತೆ (ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ) – 79 ಸೆಂ.ಮೀ (ಕನಿಷ್ಠ ಹಿಗ್ಗುವಿಕೆ – 5 ಸೆಂ.ಮೀ)
ಮಹಿಳಾ ಅಭ್ಯರ್ಥಿಗಳಿಗೆ :-
ಎತ್ತರ – ಕನಿಷ್ಠ 150 ಸೆಂ.ಮೀ.
ಕನಿಷ್ಠ ತೂಕ – 40 ಕೆ.ಜಿ.
ಈ ದೈಹಿಕ ಮಾನದಂಡಗಳನ್ನು ಕಡ್ಡಾಯವಾಗಿ ಹೊಂದಿರುವವರು ಮಾತ್ರ ದೈಹಿಕ ತಾಳ್ವಿಕೆ ಪರೀಕ್ಷೆಗೆ ಪರಿಗಣಿಸಲಾಗುತ್ತದೆ.
ದೈಹಿಕ ತಾಳ್ವಿಕೆ ಪರೀಕ್ಷೆ:-
ಪುರುಷ ಅಭ್ಯರ್ಥಿಗಳು: 7 ನಿಮಿಷದಲ್ಲಿ 1600 ಮೀಟರ್ ಓಟ ಕ್ರಮಿಸಬೇಕು.
ಮಹಿಳಾ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು – 6 ನಿಮಿಷದಲ್ಲಿ 1000 ಮೀಟರ್ ಓಟ ಕ್ರಮಿಸಬೇಕು.
ಈ ಟೆಸ್ಟ್‌ಗಳಲ್ಲಿ ಅರ್ಹತೆ ಗಿಟ್ಟಿಸಿದವರು ಮುಂದಿನ ಅರ್ಹತಾ ಪರೀಕ್ಷೆ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗೆ ಹಾಜರಾಗಬಹುದು
ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ:-
ಪುರುಷ ಅಭ್ಯರ್ಥಿಗಳು ಅರ್ಹತೆ ಗಿಟ್ಟಿಸಬೇಕಾದ ಪರೀಕ್ಷೆಗಳ ವಿವರ:-
100 ಮೀಟರ್ ಓಟ – 15 ಸೆಕೆಂಡುಗಳು
ಎತ್ತರ ಜಿಗಿತ (3 ಅವಕಾಶಗಳು ಮಾತ್ರ) – 1.20 ಮೀಟರ್
ಉದ್ದ ಜಿಗಿತ (3 ಅವಕಾಶಗಳು ಮಾತ್ರ) – 3.80 ಮೀಟರ್
ಶಾಟ್‌ಪುಟ್ (3 ಅವಕಾಶಗಳು ಮಾತ್ರ) – 5.60 ಮೀಟರ್
800 ಮೀಟರ್ ಓಟ – 2 ನಿಮಿಷ 50 ಸೆಕೆಂಡುಗಳು
ಮಹಿಳಾ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು ಅರ್ಹತೆ ಗಿಟ್ಟಿಸಬೇಕಾದ ದೈಹಿಕ ಕಾರ್ಯ ಸಮರ್ಥತೆ ಈ ಕೆಳಗಿನಂತಿದೆ.:-
100 ಮೀಟರ್ ಓಟ – 18.5 ಸೆಕೆಂಡುಗಳು
ಎತ್ತರ ಜಿಗಿತ (3 ಅವಕಾಶಗಳು ಮಾತ್ರ) – 0.90 ಮೀಟರ್
ಉದ್ದ ಜಿಗಿತ (3 ಅವಕಾಶಗಳು ಮಾತ್ರ) – 2.50 ಮೀಟರ್
ಶಾಟ್‌ಪುಟ್ (3 ಅವಕಾಶಗಳು ಮಾತ್ರ) – 3.76 ಮೀಟರ್
200 ಮೀಟರ್ ಓಟ – 40 ಸೆಕೆಂಡುಗಳು
ಈ ಮೇಲಿನ ಮೂರು ಪರೀಕ್ಷೆಗಳಲ್ಲಿ ಅರ್ಹತೆ ಪಡೆದವರು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಬರೆಯಲು ಅರ್ಹರು.
ಅರಣ್ಯ ರಕ್ಷಕ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮಾದರಿ:-
ಅರಣ್ಯ ರಕ್ಷಕ ಹುದ್ದೆಗೆ ಲಿಖಿತ ಪರೀಕ್ಷೆಯನ್ನು ಅಧಿಸೂಚಿಸಿರುವ ವೃತ್ತವಾರು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಪ್ರಶ್ನೆ ಪತ್ರಿಕೆ ನಿಗದಿಪಡಿಸಿದ ದ್ವಿತೀಯ ಪಿಯುಸಿ ಪಠ್ಯಕ್ರಮ ಮಟ್ಟದಲ್ಲಿದ್ದು ಬಹು ಆಯ್ಕೆ ಮಾದರಿಯದ್ದು.
ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. 40 ಅಂಕಗಳಿಗೆ ಗಣಿತ, 60 ಅಂಕಗಳಿಗೆ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಸಲಾಗುತ್ತದೆ.
ಸಾಮಾನ್ಯ ಜ್ಞಾನ ಪ್ರಶ್ನೆಗಳ ಪಠ್ಯಕ್ರಮ:
ಸಾಮಾನ್ಯ ಜ್ಞಾನ ಪ್ರಶ್ನೆಗಳು ಭಾರತದ ಸ್ವಾತಂತ್ರ್ಯ ಹೋರಾಟ, ಭಾರತದ ಪ್ರಾಚೀನ ನಾಗರಿಕತೆಗಳು, ಇತಿಹಾಸ, ಸಂವಿಧಾನ, ಅರ್ಥನೀತಿ, ಭೂಗೋಳ ಮತ್ತು ನೈಸರ್ಗಿಕ ಸಂಪನ್ಮೂಲಗಳು, ರಾಜನೀತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರಚಲಿತ ವಿದ್ಯಮಾನಗಳು ಹಾಗೂ ಕ್ರೀಡೆ ಕುರಿತು ಇರುತ್ತವೆ.
ಲಿಖಿತ ಪರೀಕ್ಷೆಯ ನಂತರ ಶಾರ್ಟ್ ಲಿಸ್ಟ್ ಆದವರು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಪಡೆಯುತ್ತಾರೆ.
ಪ್ರವೇಶ ಪರೀಕ್ಷಾ ತರಬೇತಿ ಮತ್ತು ಆನ್ಲೈನ್ ಅರ್ಜಿ ಸಲ್ಲಿಸಲು ಇಂದೇ ಭೇಟಿ ಕೊಡಿ:-
IRCMD Education Center
Puttur & Sullia
Ph: 9632320477 / 9945988118
ವಯೋಮಿತಿ ವಿವರ ಈ ರೀತಿ ಇದೆ:-
ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ SC / ST / CAT-1 ಅಭ್ಯರ್ಥಿಗಳಿಗೆ 32 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 30 ವರ್ಷ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 27 ವರ್ಷ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ ವಿವರ:-
ಸಾಮಾನ್ಯ ಪುರುಷ ಅಭ್ಯರ್ಥಿಗಳಿಗೆ — 220
ಸಾಮಾನ್ಯ ಮಹಿಳಾ ಅಭ್ಯರ್ಥಿಗಳಿಗೆ — 120
SC/ST/CAT-I ಪುರುಷ ಅಭ್ಯರ್ಥಿಗಳಿಗೆ — 120
SC/ST/CAT-I ಮಹಿಳಾ ಅಭ್ಯರ್ಥಿಗಳಿಗೆ — 70
ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30-12-2023
ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
NOTIFICATION
ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಲು ಕ್ಲಿಕ್ ಮಾಡಿ .
WEBSITE
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE
ನಿಮ್ಮ ಜವಾಬ್ದಾರಿಗಳು
ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473