ವೃತ್ತಿ ನ್ಯೂಸ್ ಮಕ್ಕಳ ಅಂಗಳ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ -2023 | ಇಲ್ಲಿದೆ ವಿಜೇತರ ಪಟ್ಟಿ.

ಶೇರ್ ಮಾಡಿ

ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯನ್ನು ವೃತ್ತಿ ನ್ಯೂಸ್ ಆಯೋಜಿಸಿತ್ತು. ರಾಜ್ಯದ ಅನೇಕ ಜಿಲ್ಲೆಗಳಿಂದ 3 ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪೋಷಕರು ತಮ್ಮ ಮಕ್ಕಳು ರಚಿಸಿದ ಚಿತ್ರಗಳನ್ನು ಕಳುಹಿಸಿದ್ದು, ವೃತ್ತಿ ನ್ಯೂಸ್ ಕಚೇರಿಯಲ್ಲಿ ಮಕ್ಕಳ ಕಲಾತ್ಮಕತೆಯ ಚಿತ್ರಗಳನ್ನು ನೋಡುತ್ತಾ ಆನಂದವನ್ನು ಸವಿಯುವಂತೆ ಮಾಡಿದ ಎಲ್ಲಾ ಮಕ್ಕಳಿಗೆ ಕೃತಜ್ಞತೆಯನ್ನು ಈ ಮೂಲಕ ವ್ಯಕ್ತ ಪಡಿಸುತ್ತಿದ್ದೇವೆ. ರಾಜ್ಯದಾದ್ಯಂತ ಇರುವ ಪುಟ್ಟ ಸ್ನೇಹಿತರಿಂದ ಒಟ್ಟು 514 ಚಿತ್ರಗಳನ್ನು ಸ್ವೀಕರಿಸಲಾಗಿದ್ದು ಅದರಲ್ಲಿ ಕೇವಲ 388 ಚಿತ್ರಗಳು ಸ್ಪರ್ಧೆಗೆ ಆಯ್ಕೆ ಗೊಂಡಿತ್ತು.

ಕೆಲವು ಚಿತ್ರಗಳು ತಿರಸೃತ ಗೊಂಡಿದ್ದು ಅಂದರೆ ಸರಿಯಾದ ದಾಖಲೆಗಳನ್ನು ಒದಗಿಸದೆ ಇರುವಂತಹ ಚಿತ್ರಗಳು, ಚಾಟ್ ಡಿಸ್ಅಪೀಯರಿಂಗ್ ಮಾಡಿದ ಮೊಬೈಲ್ ನಿಂದ ಕಳುಹಿಸಿದ ಚಿತ್ರಗಳು, ಸಂದೇಹ ಎಂದೆನಿಸುವ ಕೆಲವು ಚಿತ್ರಗಳು ಸೇರಿರುತ್ತವೆ.

ಸ್ಪರ್ಧಿಗಳ ಚಿತ್ರಗಳನ್ನು ಈ ಕೆಳಕಂಡ ಮಾನದಂಡಗಳ ಮೇಲೆ ಮೂವರು ತೀರ್ಪುಗಾರರ ಮುಖಾಂತರ ನಿರ್ಣಯಿಸಲಾಯಿತು.
i) ಆರ್ಟಿಸ್ಟಿಕ್ ಮೆರಿಟ್ ( ಬಣ್ಣಗಳ ಸಂಯೋಜನೆ, ಪರಿಕಲ್ಪನೆ)
ii) ಪೋಸ್ಟ್ ನ ಗುಣಮಟ್ಟ (ವಿವರವಾದ ವಿವರಣೆ, ಸಂದೇಶದ ಪ್ರಸ್ತುತಿ , ಶೀರ್ಷಿಕೆ, ಪ್ರಯತ್ನ)
iii) ಹೊಸತನ

ನಾವು ಸ್ವೀಕರಿಸಿರುವಂತಹ ಎಲ್ಲಾ ಚಿತ್ರಗಳು ಒಂದಕ್ಕೊಂದು ಸುಂದರವಾಗಿದ್ದು, ಆದರೆ ನಿಮ್ಮೆಲ್ಲರಿಗೂ ಬಹುಮಾನ ನೀಡಲು ಸಾಧ್ಯವಾಗದ ಕಾರಣ ಪ್ರಥಮ, ದ್ವಿತೀಯ, ತೃತೀಯ ಮತ್ತು ಎರಡು ಹೆಚ್ಚುವರಿ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನವನ್ನು ವಿತರಿಸಲಾಗುವುದು. ಮಾತ್ರವಲ್ಲದೆ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಗೌರವಾನ್ವಿತ ಪ್ರಶಂಸಾ ಪತ್ರವನ್ನು ನೀಡಲು ನಿರ್ಧರಿಸಿದ್ದೇವೆ.

ನಮ್ಮ ಗೌರವಾನ್ವಿತ ತೀರ್ಪುಗಾರರು ಫಲಿತಾಂಶವನ್ನು ಅಂತಿಮಗೊಳಿಸಿದ ನಂತರ ವಿಜೇತರನ್ನು ಆಯ್ಕೆ ಮಾಡಲಾಗಿದ್ದು, ಬಹುಮಾನವನ್ನು ಪಡೆಯದೇ ಇರುವ ಮಕ್ಕಳು ನಿರಾಶರಾಗದೆ ತಮ್ಮ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿಕೊಂಡು ಮುಂದಿನ ವರ್ಷದ ಸ್ಪರ್ಧೆಗೆ ತಯಾರಾಗುವುದು. ಮತ್ತೊಮ್ಮೆ ವೃತ್ತಿ ನ್ಯೂಸ್ ತಂಡವು ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಅವರ ಉಜ್ವಲ ಭವಿಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಹಾರೈಸುತ್ತದೆ. ನಿಮ್ಮ ಉತ್ಸಾಹ ಎಂದಿಗೂ ಕುಗ್ಗದಿರಲಿ.

ವೃತ್ತಿ ನ್ಯೂಸ್ ಮಕ್ಕಳ ಅಂಗಳ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ -2023 ರ ಅಡಿಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಂಸಾ ಪತ್ರವನ್ನು ಪಡೆಯಲಿರುವ 373 ಮಕ್ಕಳ ಪಟ್ಟಿ ಇಲ್ಲಿದೆ.

ಕ್ಲಿಕ್ ಮಾಡಿ : https://drive.google.com/file/d/1okzuqGzwmMK0RxWJB0romMm9SWGHFGPx/view?usp=sharing

ವೃತ್ತಿ ನ್ಯೂಸ್ ಮಕ್ಕಳ ಅಂಗಳ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ -2023 ರ ಅಡಿಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯ ವಿಜೇತರ ಹೆಸರುಗಳು:-

ವಿಜೇತರಿಗೆ ಮತ್ತೊಮ್ಮೆ ಅಭಿನಂದನೆಗಳು, ಪ್ರಶಂಸಾ ಪತ್ರವನ್ನು ನಾವು ತಿಳಿಸುವ ವಿಳಾಸಗಳಲ್ಲಿ ನೀವು ಮುಂದಿನ ದಿನಗಳಲ್ಲಿ ಪಡೆಯಬಹುದಾಗಿದ್ದು ಶೀಘ್ರವೇ ದಿನಾಂಕವನ್ನು ಪ್ರಕಟಿಸಲಿದ್ದೇವೆ.

ಪೋಷಕರು ವಿಚಲಿತರಾಗದೆ ದಯವಿಟ್ಟು ಸಮಯಕ್ಕೆ ಪ್ರಾಶಸ್ತ್ಯ ವನ್ನು ನೀಡಿ ತಮ್ಮ ಮಕ್ಕಳಿಗೆ ಶುಭವನ್ನು ಹಾರೈಸುವಿರಿ ಎಂಬ ವಿಶ್ವಾಸದೊಂದಿಗೆ ನಿಮ್ಮ ಪ್ರೀತಿಯ.
ವೃತ್ತಿ ನ್ಯೂಸ್.

Related posts