ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎಚ್ಆರ್ ಮತ್ತು ಪ್ಲೇಸ್ಮೆಂಟ್ ಘಟಕ ಹಾಗೂ ವಾಣಿಜ್ಯ ಮತ್ತು ಉದ್ಯಮ ಆಡಳಿತ ವಿಭಾಗದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನಾವಳಿಗೆ ಸಂಬಂಧಿಸಿದ ಮಾಥ್ಸ್ ಶಾರ್ಟ್‌ಕಟ್ ಟ್ರಿಕ್ಸ್ ಮತ್ತು ಟಿಪ್ಸ್ ಕುರಿತು ಐ.ಆರ್.ಸಿ.ಎಂ.ಡಿ ಶಿಕ್ಶಣ ಸಂಸ್ಥೆಯಿಂದ ಕಾರ್ಯಾಗಾರ ದಿನಾಂಕ 21.09.2023 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಶಣ ಸಂಸ್ಥೆಯ ಸಿಇಓ ಶ್ರೀಮತಿ ಪ್ರಫುಲ್ಲ ಗಣೇಶ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನಾವಳಿಗೆ ಸಂಬಂಧಿಸಿದ ಗಣಿತ ಶಾರ್ಟ್‌ಕಟ್ ತಂತ್ರಗಳು ಮತ್ತು ಟಿಪ್ಸ್ ಕುರಿತು ತರಬೇತಿ ನೀಡಿದರು.
ತರಬೇತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಡಾ. ದಿನೇಶ್ ಪಿಟಿ ಇವರು ವಹಿಸಿದ್ದರು. ಎಚ್ ಆರ್ ಪ್ಲೇಸ್ಮೆಂಟ್ ಘಟಕದ ಸಂಯೋಜಕರಾದ ಶ್ರೀ ರಮಾನಾಥ್ ಸ್ವಾಗತಿಸಿದರು. ಎಚ್ ಆರ್ ಅಂಡ್ ಪ್ಲೇಸ್ಮೆಂಟ್ ಸೆಲ್ ಇದರ ವಿದ್ಯಾರ್ಥಿ ಪ್ರತಿನಿಧಿ ಯಾಗಿರುವ ಮೇಘ ವೈಎಸ್ ಅಂತಿಮ ಉದ್ಯಮ ಆಡಳಿತ ಪದವಿ ಇವರು ಅತಿಥಿಗಳ ಪರಿಚಯಗೈದರು. ಐಕ್ಯೂಎಸಿ ಸಂಯೋಜಕರಾದ ಶ್ರೀಮತಿ ಲತಾ ಬಿಟಿ, ವಾಣಿಜ್ಯ ಉದ್ಯಮಡಲಿತದ ವಿದ್ಯಾರ್ಥಿ ಪ್ರತಿನಿಧಿ ಕೌಶಿಕ್ ಕೆ ಇವರು ಉಪಸ್ಥಿತರಿದ್ದರು . ವಾಣಿಜ್ಯ ಮತ್ತು ಉದ್ಯಮ ಆಡಳಿತ ವಿಭಾಗದ ಉಪನ್ಯಾಸಕ ಉಸ್ತುವಾರಿ ಶ್ರೀಮತಿ ಅಶ್ವಿನಿ ಎಸ್ಎನ್ ವಂದಿಸಿದರು.