LIC HFL ವಿದ್ಯಾಧನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.ವರ್ಷಕ್ಕೆ ₹25,000/- ಸ್ಕಾಲರ್ ಶಿಪ್ ಪಡೆಯುವ ಅವಕಾಶ. ಸಂಪೂರ್ಣ ವಿವರ ಇಲ್ಲಿದೆ.

ಶೇರ್ ಮಾಡಿ

ಪ್ರಿಯ ವಿದ್ಯಾರ್ಥಿಗಳೆ, ಇವತ್ತಿನ ಮಾಹಿತಿಯಲ್ಲಿ , LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವಿದ್ಯಾರ್ಥಿವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ . ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಯಾವುವು?, ಎಷ್ಟು ವಿದ್ಯಾರ್ಥಿ ವೇತನ ದೊರೆಯುತ್ತದೆ?, ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು.

11 ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) ವಿದ್ಯಾಧನ್ ವಿದ್ಯಾರ್ಥಿ ವೇತನದ ಬಗ್ಗೆ
ಭಾರತದಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) ನ CSR ಉಪಕ್ರಮವಾಗಿದೆ. ವಿದ್ಯಾರ್ಥಿವೇತನ ಕಾರ್ಯಕ್ರಮವು 11 ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಅಧ್ಯಯನ ಮಾಡುತ್ತಿರುವ ಕಡಿಮೆ-ಆದಾಯದ ಗುಂಪಿನ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ, ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಮಟ್ಟಕ್ಕೆ ಅನುಗುಣವಾಗಿ ₹25,000/- ವರೆಗೆ ಹಣಕಾಸಿನ ನೆರವು ಪಡೆಯುತ್ತಾರೆ.

Advertisement

ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾಧನ್ ವಿದ್ಯಾರ್ಥಿ ವೇತನಕ್ಕೆ ಅರ್ಹತೆ.

i) ಯಾವುದೇ 11 ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ii) 10 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ 60% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು.
iii) ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು INR 3,60,000 ಕ್ಕಿಂತ ಕಡಿಮೆಯಿರಬೇಕು.
(ವರ್ಷಕ್ಕೆ ₹15,000/- ಸ್ಕಾಲರರ್ಶಿಪ್ ಪಡೆಯುವ ಅವಕಾಶ.)

ಡಿಗ್ರಿ ವಿದ್ಯಾರ್ಥಿಗಳಿಗೆ ವಿದ್ಯಾಧನ್ ವಿದ್ಯಾರ್ಥಿ ವೇತನಕ್ಕೆ ಅರ್ಹತೆ.

i) ಮೊದಲ ವರ್ಷದ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ii) 12 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ 60% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು.
iii) ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು INR 3,60,000 ಕ್ಕಿಂತ ಕಡಿಮೆಯಿರಬೇಕು.
(ವರ್ಷಕ್ಕೆ ₹25,000/- ಸ್ಕಾಲರರ್ಶಿಪ್ ಪಡೆಯುವ ಅವಕಾಶ.)

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾಧನ್ ವಿದ್ಯಾರ್ಥಿ ವೇತನಕ್ಕೆ ಅರ್ಹತೆ.

i) ಮೊದಲ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ii) ಯುಜಿ ಮಟ್ಟದ ಪರೀಕ್ಷೆಯಲ್ಲಿ 60% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು.
iii) ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು INR 3,60,000 ಕ್ಕಿಂತ ಕಡಿಮೆಯಿರಬೇಕು.
(ವರ್ಷಕ್ಕೆ ₹20,000/- ಸ್ಕಾಲರರ್ಶಿಪ್ ಪಡೆಯುವ ಅವಕಾಶ.)

ಅರ್ಜಿದಾರರು ಈ ಕೆಳಗಿನ ದಾಖಲೆಗಳನ್ನು ಲಗತ್ತಿಸಬೇಕಾಗಿದೆ –

i) ಹಿಂದಿನ ಶೈಕ್ಷಣಿಕ ಅರ್ಹತೆಯ ಮಾರ್ಕ್‌ಶೀಟ್.
ii) ವಯಸ್ಸಿನ ಪುರಾವೆ (ಜನನ ಪ್ರಮಾಣಪತ್ರ / ಆಧಾರ್ ಕಾರ್ಡ್ / 10 ನೇ ತರಗತಿ ಶಾಲೆ ಬಿಡುವ ಪ್ರಮಾಣಪತ್ರ).
iii) ಆಧಾರ್ ಕಾರ್ಡ್.
iv) ಕುಟುಂಬದ ಆದಾಯ ಪ್ರಮಾಣಪತ್ರ.
v) ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ

ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ: 30-Sep-2023

ಹೆಚ್ಚಿನ ವಿವರಗಳಿಗೆ ಹಾಗೂ ಅಪ್ಲೈ ಮಾಡಲು ಕ್ಲಿಕ್ ಮಾಡಿ.

ನಿಮ್ಮ ಜವಾಬ್ದಾರಿಗಳು
ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸಲು ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.

Related posts