ಭಾರತೀಯ ಅಂಚೆ ಇಲಾಖೆಯಿಂದ 30,041 ಹುದ್ದೆಗಳಿಗೆ ನೇರ ನೇಮಕಾತಿ. ಸಂಪೂರ್ಣ ವಿವರ ಇಲ್ಲಿದೆ.

ಶೇರ್ ಮಾಡಿ

ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ 30,041 ಜಿಡಿಎಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ವೃತ್ತದಲ್ಲಿ ಈ ಎಲ್ಲಾ ಕಡೆಗಳಲ್ಲಿ ಆಯ್ಕೆ ಹೇಗೆ ನಡೆಸಲಾಗುತ್ತದೆ.
ಪುತ್ತೂರು, ಮಂಗಳೂರು, ಕೊಡಗು, ಬಾಗಲಕೋಟೆ, ಚಿಕ್ಕೋಡಿ, ಕಾರವಾರ, ಬಳ್ಳಾರಿ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಪೂರ್ವ, ಧಾರವಾಡ, ಮಂಡ್ಯ, ಸಿರ್ಸಿ, ಬೆಂಗಳೂರು ದಕ್ಷಿಣ, ಗದಗ, ತುಮಕೂರು, ಬೆಂಗಳೂರು ಪಶ್ಚಿಮ, ಗೋಕಾಕ್, ಮೈಸೂರು, ಉಡುಪಿ, ಬೀದರ್,ಹಾಸನ, ನಂಜನಗೂಡು, ವಿಜಯಪುರ, ಚನ್ನಪಟ್ಟಣ, ಹಾವೇರಿ, ಯಾದಗಿರಿ, ಚಿಕ್ಕಮಗಳೂರು, ಕಲಬುರಗಿ ಮತ್ತು ರಾಯಚೂರು.

ಹುದ್ದೆಗಳ ವಿವರ ಈ ರೀತಿ ಇದೆ
. ಗ್ರಾಮೀಣ ಡಾಕ್ ಸೇವಕ್,
. ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌,
. ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್‌.
(ಕರ್ನಾಟಕದಲ್ಲಿ 1,678 ಹುದ್ದೆಗಳಿವೆ )

ಅಂಚೆ ಇಲಾಖೆ ಹುದ್ದೆಗಳ ವೇತನ ಮಾಹಿತಿ:
. ಬ್ರ್ಯಾಂಚ್‌ ಪೋಸ್ಟ್‌ಮಾಸ್ಟರ್‌ (BPM) : Rs.12,000-29,380 ವರೆಗೆ.
. ಅಸಿಸ್ಟಂಟ್ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್ (ABPM) : Rs.10,000-24,470.
. ಡಾಕ್ ಸೇವಕ್‌ : Rs.10,000-24,470.

Advertise

ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆಗೆ ವಿದ್ಯಾರ್ಹತೆ:
. ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಪಾಸಾಗಿರಬೇಕು.
. ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು.
. ಜತೆಗೆ ಬೇಸಿಕ್ ಕಂಪ್ಯೂಟರ್ ಪ್ರಮಾಣ ಪತ್ರ ಪಡೆದಿರಬೇಕು.

ವಯೋಮಿತಿ ವಿವರ ಈ ರೀತಿ ಇದೆ:
ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆ ದಿನಾಂಕ 23-08-2023 ಕ್ಕೆ ಸರಿಯಾಗಿ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು.
ಗರಿಷ್ಠ 40 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದವರಿಗೆ 5 ವರ್ಷ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 3 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿವೆ.

ಗ್ರಾಮೀಣ ಡಾಕ್‌ ಸೇವಕ್‌ ಆಯ್ಕೆ ಪ್ರಕ್ರಿಯೆ:
ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ನಿಯಮಾನುಸಾರ ಸ್ವಯಂಚಾಲಿತ ಮೆರಿಟ್ ಪಟ್ಟಿ ತಯಾರು ಮಾಡುವ ಮೂಲಕ, ಶಾರ್ಟ್‌ ಲಿಸ್ಟ್‌ ಆದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ, ನೇಮಕಾತಿ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಮೊದಲ ಅರ್ಹತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಹುದ್ದೆಗೆ ವರದಿ ಮಾಡಿಕೊಳ್ಳದಿದ್ದಲ್ಲಿ, ಮತ್ತೆ ಎರಡನೇ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
23-08-2023

ಆನ್ಲೈನ್ ಅರ್ಜಿ ಸಲ್ಲಿಸಲು ಲಿಂಕ್ ಕ್ಲಿಕ್ ಮಾಡಿ

ಅರ್ಜಿ ಶುಲ್ಕದ ವಿವರ ಈ ರೀತಿ ಇದೆ.
ಅರ್ಜಿ ಶುಲ್ಕ ರೂ.100.

ನಿಮ್ಮ ಜವಾಬ್ದಾರಿಗಳು
ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸಲು ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.

Related posts