ಕರ್ನಾಟಕ ಲೋಕ ಸೇವಾ ಆಯೋಗ / ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರಥಮ ದರ್ಜೆ ಸಹಾಯಕ, ಪಿಡಿಒ ಹಾಗೂ ಇತರೇ ಹುದ್ದೆಗಳಿಗೆ ತಯಾರಿ ನಡೆಸುವ ಬಗ್ಗೆ ಪುತ್ತೂರಿನ IRCMD ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಉಚಿತ ಕಾರ್ಯಾಗಾರವನ್ನು ನಡೆಸಲಿದ್ದು, ಅರ್ಹ ಅಭ್ಯರ್ಥಿಗಳು ಇಂದೇ ನೋಂದಾಯಿಸಿಕೊಳ್ಳಬಹುದಾಗಿದೆ.
ದ್ವಿತೀಯ ಪಿಯುಸಿ ಅಥವಾ ಪದವಿ ಪೂರೈಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿದ್ದು ಈ ತರಬೇತಿ ಕಾರ್ಯಾಗಾರದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿ IRCMD ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶ್ರೀ ಮತಿ ಪ್ರಫುಲ್ಲ ಗಣೇಶ್ ರವರು ತಿಳಿಸಿರುತ್ತಾರೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಕಛೇರಿಗಳಲ್ಲಿ ಪ್ರಥಮ ದರ್ಜೆ ಸಹಾಯಕರು (FDA), ದ್ವಿತೀಯ ದರ್ಜೆ ಸಹಾಯಕರು (SDA) ಹುದ್ದೆಗಳನ್ನು ಕೆಪಿಎಸ್ ಸಿ , ಕೆಇಎ ಮೂಲಕ ಭರ್ತಿ ಮಾಡಲಾಗುತ್ತದೆ. ಈ ಎರಡೂ ಹುದ್ದೆಗಳಿಗೂ ನೇಮಕಾತಿ ಪ್ರಕ್ರಿಯೆಯು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯಲಿದ್ದು, ಪರೀಕ್ಷಾ ಪಠ್ಯಕ್ರಮದ ಸಂಪೂರ್ಣ ಮಾಹಿತಿ ಮತ್ತು ತರಬೇತಿಯನ್ನು ವಿಜಾಪುರದ ಹೆಸರಾಂತ ತರಬೇತುದಾರರಾದ ಶ್ರೀಯುತ ಕೆ.ಡಿ ಸಿಂಧೆಯವರು ನಡೆಸಿಕೊಡಲಿದ್ದಾರೆ.
ಶ್ರೀಯುತ ಕೆ.ಡಿ ಸಿಂಧೆಯವರು ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಶ್ರೀಯುತರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅನೇಕರು ಸರಕಾರದ ವಿವಿಧ ಹುದ್ದೆಗಳನ್ನು ಅಲಂಕರಿಸಿರುತ್ತಾರೆ. ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮೂಲಕ ಉಚಿತ ತರಬೇತಿ ಕಾರ್ಯಾಗಾರಗಳನ್ನೂ ನೀಡುತ್ತಿರುವ ಶ್ರೀಯುತ ಕೆ.ಡಿ ಸಿಂಧೆಯವರು ಕೂಡ ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಯನ್ನು ಉತ್ತೀರ್ಣಗೊಳಿಸಿರುತ್ತಾರೆ. ಉದ್ಯೋಗಾಕಾಂಕ್ಷಿಗಳಿಗಾಗಿ “ರೈಲ್ವೆ ಜಾಬ್ ಗುರು” ಎಂಬ ಪರೀಕ್ಷಾ ಕೈಪಿಡಿಯನ್ನು ಹೊರತಂದಿರುತ್ತಾರೆ.
ಉಚಿತ ತರಬೇತಿ ಕಾರ್ಯಾಗಾರ ದಿನಾಂಕ 13-08-2023 (ಆದಿತ್ಯವಾರ) ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು, ಈ ಕಾರ್ಯಾಗಾರದ ಸಂಪೂರ್ಣ ಪ್ರಯೋಜನವನ್ನು ಪಡೆಯಲಿಚ್ಚಿಸುವವರು ಕೂಡಲೇ ನೊಂದಾಯಿಸಿಕೊಳ್ಳಿ. Ph: 9632320477