AI Airport Services Limited : ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವೀಸೆಸ್ ಲಿಮಿಟೆಡ್ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಹ್ಯಾಂಡಿಮೆನ್, ಹ್ಯಾಂಡಿವೂಮೆನ್ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಿದ್ದು, ಈ ಹುದ್ದೆಗಳ ಕುರಿತು ವಿವರ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಅರ್ಹತೆ, ವಿದ್ಯಾರ್ಹತೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ. ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ಕರೆ ಮಾಡಿ : 7892810864
ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವೀಸೆಸ್ ಲಿಮಿಟೆಡ್ (ಎಐಎಟಿಎಸ್ಎಲ್) ಅಥವಾ ಎಐ ಏರ್ಪೋರ್ಟ್ ಸರ್ವೀಸೆಸ್ ಲಿಮಿಟೆಡ್ ನಿಗದಿತ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಿದ್ದು, ಹುದ್ದೆಗಳ ವಿವರಗಳು ಕೆಳಗಿನಂತಿವೆ ನೋಡಿ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ನೇರ ಸಂದರ್ಶನಕ್ಕೆ ಹಾಜರಾಗಿ.
ಹುದ್ದೆಗಳ ವಿವರ :-
i) ಹ್ಯಾಂಡಿಮ್ಯಾನ್ – 111
ii) ಹ್ಯಾಂಡಿವೂಮೆನ್ – 31
ವಿದ್ಯಾರ್ಹತೆ : ಎಸ್ಎಸ್ಎಲ್ಸಿ ಪಾಸಾಗಿರಬೇಕು.
ವಯೋಮಿತಿ ವಿವರ ಈ ರೀತಿ ಇದೆ:-
ಸಾಮಾನ್ಯ ವರ್ಗದವರಿಗೆ ಗರಿಷ್ಠ 28 ವರ್ಷ ಮೀರಿರಬಾರದು.
ಒಬಿಸಿ ವರ್ಗದವರಿಗೆ 31 ವರ್ಷ, ಎಸ್ಸಿ / ಎಸ್ಟಿ ವರ್ಗದವರಿಗೆ 33 ವರ್ಗ ಮೀರಿರಬಾರದು.
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:-
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
i) ಹ್ಯಾಂಡಿಮ್ಯಾನ್ ಸಂದರ್ಶನ ದಿನಾಂಕ: 04/ 05-11-2024
ii) ಹ್ಯಾಂಡಿವೂಮೆನ್ ಸಂದರ್ಶನ ದಿನಾಂಕ: 06-11-2024.
ಅರ್ಜಿ ಶುಲ್ಕ ವಿವರ:-
i) ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ ರೂ.500.
ii) ಎಸ್ಸಿ / ಎಸ್ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ನೇರ ಸಂದರ್ಶನಕ್ಕೆ ಹಾಜರಾಗುವವರು ತಮ್ಮ ವಿದ್ಯಾರ್ಹತೆ ದಾಖಲೆಗಳು, ಕಾರ್ಯಾನುಭವ ದಾಖಲೆಗಳು, ಆಧಾರ್ ಕಾರ್ಡ್, ಅಪ್ಡೇಟ್ ಮಾಡಲಾದ ಇತ್ತೀಚಿನ ಬಯೋಡಾಟಾ, ಅರ್ಜಿ ಶುಲ್ಕ ಪಾವತಿಸಿದ ಡಿಡಿ ರಶೀದಿ ತೆಗೆದುಕೊಂಡು ಹೋಗಬೇಕು.
ಸಂದರ್ಶನ ವಿಳಾಸ: RTO Circle Play Ground, Opposite Collector Office, Beside Ashraye Inn hotel, Ahmedabad 380027.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ಕರೆ ಮಾಡಿ : 7892810864