Vritti News: ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಆನ್ಲೈನ್ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ. ಮೂರು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದೆ. ಪೋಷಕರು ಅಥವಾ ಪಾಲಕರು ತಮ್ಮ ಮಕ್ಕಳ ಪರವಾಗಿ ನೋಂದಣಿ ಮಾಡಬಹುದು. ಕಳೆದ ವರ್ಷ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪೋಷಕರು ತಮ್ಮ ಮಕ್ಕಳು ರಚಿಸಿದ ಚಿತ್ರಗಳನ್ನು ಕಳುಹಿಸಿದ್ದು ಈ ವರ್ಷ ಕೂಡ ನಿಮ್ಮಿಂದ ಇನ್ನು ಹೆಚ್ಚಿನ ಮಕ್ಕಳ ಕಲಾತ್ಮಕತೆಯ ಚಿತ್ರಗಳನ್ನು ಕಳಿಸಿ ಕೊಡಬೇಕಾಗಿ ವೃತ್ತಿ ನ್ಯೂಸ್ ತಂಡದ ವಿನಂತಿ.
ಸ್ಪರ್ಧಾ ವಿವರ ಹೀಗೆ ಇದೆ:-
ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆಗಳು :-
i) ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
ii) ವಿಭಾಗವಾರು ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪ್ರಮಾಣ ಪತ್ರ ವಿತರಿಸಲಾಗುವುದು.
iii) A3 ಡ್ರಾಯಿಂಗ್ ಹಾಳೆಯಲ್ಲಿ ನಿಮಗೆ ತಿಳಿಸಿದ ವಿಷಯಗಳಲ್ಲಿ ಚಿತ್ರ ರಚಿಸಿ ವಾಟ್ಸಪ್ ಮೂಲಕ ಕಳುಹಿಸಿಕೊಡಿ.
iv) ವಿದ್ಯಾರ್ಥಿಯ ಹೆಸರು, ತರಗತಿ ಮತ್ತು ಶಾಲೆಯ ಹೆಸರನ್ನು ನಮೂದಿಸಿರಬೇಕು.
v) ಚಿತ್ರದ ಜೊತೆಗೆ ಮಕ್ಕಳ ಫೋಟೋ, ಜನನ ಪ್ರಮಾಣ ಪತ್ರ, ವಾಟ್ಸಪ್ ನಂಬರ್ ಮತ್ತು ಸಂಪೂರ್ಣ ವಿಳಾಸವನ್ನು ಕಳುಹಿಸಬೇಕು.
vi) ನಕಾರಾತ್ಮಕ ತಂತ್ರಗಳಿಗೆ ಅವಕಾಶ ಕೊಡದೆ, ಮಕ್ಕಳೇ ಚಿತ್ರವನ್ನು ರಚಿಸಿರುವುದಾಗಿ ಹೆತ್ತವರೇ ದೃಢಿಕರಿಸಿರಬೇಕು.
vii) ಕಲಾಕೃತಿಯನ್ನು ವಾಟ್ಸಪ್ ಮೂಲಕ ಕಳುಹಿಸಲು ಕೊನೆಯ ದಿನಾಂಕ 07-11-2024
viii) ತೀರ್ಪುಗಾರರ ತೀರ್ಮಾನವೇ ಅಂತಿಮ.
ix) ಫಲಿತಾಂಶವನ್ನು ವಿಜೇತರ ಕಲಾಕೃತಿಗಳ ಜೊತೆಗೆ ದಿನಾಂಕ 14-11-2023 ರಂದು ವೃತ್ತಿ ನ್ಯೂಸ್ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.
ಕಲಾಕೃತಿಯನ್ನು ಕಳುಹಿಸಬೇಕಾದ ವಾಟ್ಸಾಪ್ ನಂಬರ್ : 8088962473 (ವೃತ್ತಿ ನ್ಯೂಸ್) ಯಾವುದೇ ಕರೆಗಳಿಗೆ ಅವಕಾಶವಿಲ್ಲ.
ಗಮನಿಸಿ :
ಸರಿಯಾದ ದಾಖಲೆಗಳನ್ನು ಒದಗಿಸದೆ ಇರುವಂತಹ ಚಿತ್ರಗಳು, ಚಾಟ್ ಡಿಸ್ಅಪೀಯರಿಂಗ್ ಮಾಡಿದ ಮೊಬೈಲ್ ನಿಂದ ಕಳುಹಿಸಿದ ಚಿತ್ರಗಳು, ಸಂದೇಹ ಎಂದೆನಿಸುವ ಕೆಲವು ಚಿತ್ರಗಳು ತಿರಸೃತಗೊಳ್ಳುತ್ತವೆ . ನಮ್ಮ ಗೌರವಾನ್ವಿತ ತೀರ್ಪುಗಾರರು ಫಲಿತಾಂಶವನ್ನು ಅಂತಿಮಗೊಳಿಸಿದ ನಂತರ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ತೀರ್ಪುಗಾರರ ತೀರ್ಮಾನವೇ ಅಂತಿಮ ಯಾವುದೇ ಚರ್ಚೆಗೆ ಅವಕಾಶವಿಲ್ಲಾ.