SSC Constable GD Recruitment : ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಇರುವವರು ಈಗಲೇ ಅರ್ಜಿ ಹಾಕಿ. ಎಸ್ಎಸ್ಸಿ ಜಿಡಿ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಸಾಮಾನ್ಯ ಪರೀಕ್ಷೆ ಪ್ರಕ್ರಿಯೆಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. 35612 ಪುರುಷ ಅಭ್ಯರ್ಥಿಗಳಿಗೆ ಮೀಸಲಾದ ಹುದ್ದೆಗಳಿದ್ದು, 3869 ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರುವ ಹುದ್ದೆಗಳಾಗಿವೆ. ಈ ಹುದ್ದೆಗಳ ಕುರಿತು ವಿವರ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಅರ್ಹತೆ, ವಿದ್ಯಾರ್ಹತೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ. ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
Advertisement
SSC Constable GD Recruitment.
39,481 ಕಾನ್ಸ್ಟೇಬಲ್ ಹುದ್ದೆಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗ ಪರೀಕ್ಷಾ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಕಾನ್ಸ್ಟೇಬಲ್ (ಜೆನೆರಲ್ ಡ್ಯೂಟಿ) ಹುದ್ದೆಗಳನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs), ಎಸ್ಎಸ್ಎಫ್, ರೈಫಲ್ಮ್ಯಾನ್ (ಜಿಡಿ) ಇನ್ ಅಸ್ಸಾಂ ರೈಫಲ್ಸ್ ನಲ್ಲಿ ಹಾಗೂ ಇದೇ ಪರೀಕ್ಷೆ ಮೂಲಕ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೊದ ಸಿಪಾಯಿ ಹುದ್ದೆಗಳಿಗೂ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ :-
ಕೇಂದ್ರ ಮೀಸಲು ಪೊಲೀಸ್ ಪಡೆ – 7145
ಕೇಂದ್ರ ಕೈಗಾರಿಕಾ ಭದ್ರತಾ ಪಡೆ – 11541
ಸಶಸ್ತ್ರ ಸೀಮಾ ಬಲ್ – 819
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ – 3017
ಅಸ್ಸಾಂ ರೈಫಲ್ಸ್ – 1248
ಸೆಕ್ರೇಟರಿಯಟ್ ಸೆಕ್ಯೂರಿಟಿ ಫೋರ್ಸ್ – 35
ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ – 22.
ಶೈಕ್ಷಣಿಕ ಅರ್ಹತೆಗಳು:-
ಕೇಂದ್ರ / ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಉತ್ತೀರ್ಣರಾಗಿರಬೇಕು.
ವಯೋಮಿತಿ ವಿವರ ಈ ರೀತಿ ಇದೆ:-
ಅಪ್ಲಿಕೇಶನ್ ಸಲ್ಲಿಸಲು ಕನಿಷ್ಠ ವಯಸ್ಸು: 18 ವರ್ಷ.
ಅಪ್ಲಿಕೇಶನ್ ಸಲ್ಲಿಸಲು ಗರಿಷ್ಠ ವಯಸ್ಸು: 23 ವರ್ಷ.
ಈ ವಯಸ್ಸಿನ ಅರ್ಹತೆಗಳನ್ನು 01-01-2025 ಕ್ಕೆ ಪರಿಗಣಿಸಲಾಗುತ್ತದೆ.
ಇತರೆ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಮಾಜಿ ಸೈನಿಕರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:-
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಸಿಬಿಟಿ೦, ಪಿಎಸ್ಟಿ, ಪಿಇಟಿ, ದಾಖಲೆಗಳ ಪರಿಶೀಲನೆ, ಮೆಡಿಕಲ್ ಟೆಸ್ಟ್ ಆಯ್ಕೆ ಪ್ರಕ್ರಿಯೆಯಲ್ಲಿ ಇರುತ್ತವೆ. ಲಿಖಿತ ಪರೀಕ್ಷೆ ಹಿಂದಿ, ಇಂಗ್ಲಿಷ್, ಕನ್ನಡ ಸೇರಿದಂತೆ ಒಟ್ಟು 15 ಭಾಷೆಗಳಲ್ಲಿ ಇರುತ್ತದೆ.
ಪ್ರವೇಶ ಪರೀಕ್ಷಾ ತರಬೇತಿ ಮತ್ತು ಆನ್ಲೈನ್ ಅರ್ಜಿ ಸಲ್ಲಿಸಲು ಇಂದೇ ಭೇಟಿ ಕೊಡಿ:-
IRCMD Education Center
Puttur & Sullia
Ph: 9945988118
ಅರ್ಜಿ ಶುಲ್ಕ ವಿವರ:-
ಸಾಮಾನ್ಯ ಅರ್ಹತೆ / ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.100.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 14-10-2024 ರ ರಾತ್ರಿ 11 ಗಂಟೆವರೆಗೆ.
ಟೈಯರ್-1 ಸಿಬಿಟಿ ಪರೀಕ್ಷೆ ಸಂಭಾವ್ಯ ದಿನಾಂಕವು ಜನವರಿ/ ಫೆಬ್ರುವರಿ 2025 ರಲ್ಲಿ ಇರುತ್ತದೆ. ನಿಖರವಾದ ದಿನಾಂಕಕ್ಕಾಗಿ ವೆಬ್ಸೈಟ್ (https://ssc.gov.in/) ಅನ್ನು ಪರಿಶೀಲಿಸಿ.
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ:-
i) ಕೆಳಗಿನ ಲಿಂಕ್/ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್ಲೋಡ್ ಮಾಡಿ.
ii) ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
iii) ಕೆಳಗಿನ ಆನ್ಲೈನ್ ಅಪ್ಲಿಕೇಶನ್ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
iv) ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
v) ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
vi) ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
vii) ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
viii) ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.
ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
NOTIFICATION – ಕ್ಲಿಕ್ ಮಾಡಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE – ಕ್ಲಿಕ್ ಮಾಡಿ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473