Free Computer Course: ಕರ್ನಾಟಕ ಎಜ್ಯುಕೇಷನಲ್ ಪ್ರಶಸ್ತಿ ಪಡೆದು ಉದ್ಯೋಗಕಾಂಕ್ಷಿಗಳ ಬದುಕಲ್ಲಿ ಹೊಸ ಭರವಸೆ ಮೂಡಿಸಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಮತ್ತೊಂದು ಸುವರ್ಣಾವಕಾಶದೊಂದಿಗೆ ನಿಮ್ಮ ಮುಂದಿದೆ. ಹೌದು, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ಉಚಿತ ಕಂಪ್ಯೂಟರ್ ತರಬೇತಿಗೆ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ವತಿಯಿಂದ ಅರ್ಜಿ ಅಹ್ವಾನಿಸಲಾಗಿದೆ.
ಗುಣಮಟ್ಟದ ತರಬೇತಿಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು ಈ ಉಚಿತ ತರಬೇತಿಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ನೀಡುತ್ತಾ ಬಂದಿರುತ್ತದೆ. ಪ್ರಸಕ್ತ 2024ನೇ ಸಾಲಿಗೆ ಅರ್ಜಿಯನ್ನು ಆಹ್ವಾನಿಸಿದೆ.
![](https://vrittinews.com/wp-content/uploads/2024/04/Free_Course_2024-840x554.jpg)
ಈ ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಯಾವುದೇ ಪ್ರೌಢಶಾಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು, ಸೀಮಿತ ಸೀಟುಗಳು ಮಾತ್ರ ಇರುವುದರಿಂದ, ಆಸಕ್ತ ಅಭ್ಯರ್ಥಿಗಳು ದಿನಾಂಕ 04-005-2024 ರ ಮೊದಲು ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಪುತ್ತೂರಿನ ಪ್ರಧಾನ ಕಚೇರಿಯಲ್ಲಿ ಅಥವಾ ಸುಳ್ಯ ಶಾಖೆಯಲ್ಲೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9945988118 / 9632320477 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯು ಪ್ರಕಟಣೆ ನೀಡಿದೆ.
![](https://vrittinews.com/wp-content/uploads/2023/11/E-Accountant-840x840.jpg)
![](https://vrittinews.com/wp-content/uploads/2024/02/MBA-2024-840x840.jpg)
![](https://vrittinews.com/wp-content/uploads/2024/01/IRCMD_POSTER-560x840.jpg)
![](https://vrittinews.com/wp-content/uploads/2023/12/Online_Training-2023-840x560.jpg)