Mandya DCC Bank: ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಗಮವು ಖಾಲಿ ಇರುವ ವಿವಿಧ ವೃಂದದ 93 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳಿಂದ ಕಿರಿಯ ಸಹಾಯಕ, ವಾಹನ ಚಾಲಕ, ಅಟೆಂಡರ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳ ಕುರಿತು ವಿವರ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಅರ್ಹತೆ, ವಿದ್ಯಾರ್ಹತೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
Advertisement
ಪಿಯುಸಿ /ಎಸ್ಎಸ್ಎಲ್ಸಿ ಪಾಸಾದವರು ಬ್ಯಾಂಕ್ ಉದ್ಯೋಗಕ್ಕೆ ಸೇರಲು ಆಕಾಂಕ್ಷಿಗಳಾಗಿದ್ದಲ್ಲಿ ಇಂದೇ ಅರ್ಜಿ ಸಲ್ಲಿಸಿ. ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಗಮವು ಖಾಲಿ ಇರುವ ಅಸಿಸ್ಟಂಟ್, ಚಾಲಕ, ಅಟೆಂಡರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ :-
i) ಕಿರಿಯ ಸಹಾಯಕರು : 70
ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಪಾಸ್ ಮಾಡಿರಬೇಕು. ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಬರಬೇಕು. ಕಂಪ್ಯೂಟರ್ ಅಪರೇಷನ್ಸ್ ಮತ್ತು ಅಪ್ಲಿಕೇಷನ್ ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ: Rs.30,350-58,250.
ii) ವಾಹನ ಚಾಲಕರು : 2
ವಿದ್ಯಾರ್ಹತೆ: ಎಸ್ಎಸ್ಎಲ್ಸಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. ಕಾನೂನುಬದ್ಧ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು
ವೇತನ ಶ್ರೇಣಿ: Rs.27,650-52,650.
iii) ಅಟೆಂಡರ್ : 21
ವಿದ್ಯಾರ್ಹತೆ: ಎಸ್ಎಸ್ಎಲ್ಸಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
ವೇತನ ಶ್ರೇಣಿ: Rs.23,500-47,650.
ವಯೋಮಿತಿ ವಿವರ ಈ ರೀತಿ ಇದೆ:-
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ವರ್ಗದವರಿಗೆ 35 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ, ಎಸ್ಸಿ / ಎಸ್ಟಿ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯಸ್ಸಿನ ಅರ್ಹತೆ ನಿಗದಿಪಡಿಸಲಾಗಿದೆ.
ಇದನ್ನು ಕೂಡ ಓದಿ:- ಕೋಟಕ್ ಮಹೀಂದ್ರಾ ಬ್ಯಾಂಕ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. ಕ್ಲಿಕ್ ಮಾಡಿ
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:-
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷಾ ಅಂಕಗಳ ಆಧಾರದಲ್ಲಿ ನೇಮಕಾತಿ ಮಾಡಲಾಗುವುದು.
ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಮತ್ತು ಆನ್ಲೈನ್ ಅರ್ಜಿ ಸಲ್ಲಿಸಲು ಇಂದೇ ಭೇಟಿ ಕೊಡಿ:-
IRCMD Education Center
Puttur & Sullia
Ph: 9632320477 / 9945988118
ಅರ್ಜಿ ಶುಲ್ಕ ವಿವರ:-
ಸಾಮಾನ್ಯ ಅರ್ಹತೆ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.1500.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.750.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16-02-2024
ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
NOTIFICATION
MANDYA DCC BANK ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಲು ಕ್ಲಿಕ್ ಮಾಡಿ .
WEBSITE
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE
ನಿಮ್ಮ ಜವಾಬ್ದಾರಿಗಳು
ದಯವಿಟ್ಟು ಗಮನಿಸಿ : ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473