ಕಾರ್ಮಿಕ ಸಚಿವಾಲಯದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ । 1 ರಿಂದ 10ನೇ ಕ್ಲಾಸ್‌ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸ್ಕಾಲರರ್ಶಿಪ್ ಪಡೆಯುವ ಅವಕಾಶ – ವೃತ್ತಿ ನ್ಯೂಸ್

ಶೇರ್ ಮಾಡಿ

ಪ್ರಿಯ ವಿದ್ಯಾರ್ಥಿಗಳೆ, ಇವತ್ತಿನ ಮಾಹಿತಿಯಲ್ಲಿ ಭಾರತ ಸರ್ಕಾರ ಅಧೀನದ ಲೇಬರ್ ಮತ್ತು ಎಂಪ್ಲಾಯ್ಮೆಂಟ್ ಮಿನಿಸ್ಟ್ರಿ ಅಡಿಯಲ್ಲಿ ಮೆಟ್ರಿಕ್ ಪೂರ್ವ ಮತ್ತು ಯಾವುದೇ ಮೆಟ್ರಿಕ್ ನಂತರದ ಕೋರ್ಸ್‌ ಓದುವವರು, ಕಾರ್ಮಿಕ ಇಲಾಖೆಯ ಆರ್ಥಿಕ ನೆರವು ಪಡೆಯಲು ಈಗಲೇ ಅರ್ಜಿ ಸಲ್ಲಿಸಿ. ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ವಿವರಗಳು ಇಲ್ಲಿವೆ ನೋಡಿ.

ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಇದೇ ರೀತಿಯ ಎಲ್ಲಾ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ಪ್ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
WhatsApp group link:

Vritti News (JOB NEWS) channel on WhatsApp:

Advertisement

ಸೂಚನೆ
ಬೀಡಿ / ಐಓಎಂಸಿ / ಎಲ್‌ಎಸ್‌ಡಿ / ಸಿನಿ ಕಾರ್ಮಿಕರ ಮಕ್ಕಳು ಮಾತ್ರ ಕಾರ್ಮಿಕ ಸಚಿವಾಲಯದಡಿ ನೀಡುವ ಈ ಆರ್ಥಿಕ ನೆರವಿಗೆ ಅರ್ಜಿ ಸಲ್ಲಿಸಬಹುದುಅರ್ಜಿ ಸಲ್ಲಿಸುವವರು ಆಧಾರ್‌ ದೃಢೀಕೃತ ಡೈರೆಕ್ಟ್‌ ಬೆನಿಫಿಟ್‌ ಟ್ರಾನ್ಸ್‌ಫರ್ ಸ್ಕೀಮ್ ಅಥವಾ ನ್ಯಾಷನಲ್ ಸ್ಕಾಲರ್‌ಶಿಪ್‌ ಪೋರ್ಟಲ್‌ನಲ್ಲಿ ಆನ್‌ಲೈನ್‌ ಪ್ರಕ್ರಿಯೆಯ ಎನ್‌ಇಎಫ್‌ಟಿ ಮೂಲಕ ಡಿಬಿಟಿಯಲ್ಲಿ ಆರ್ಥಿಕ ನೆರವನ್ನು ನೇರವಾಗಿ ಪಡೆಯಬಹುದು.

ಆರ್ಥಿಕ ನೆರವಿನ ವಿವರಗಳು:-
1 ರಿಂದ 4 ನೇ ಕ್ಲಾಸ್ ವರೆಗೆ : ರೂ.1000.
5 ರಿಂದ 8 ನೇ ಕ್ಲಾಸ್ ವರೆಗೆ : ರೂ.1500.
9 ರಿಂದ 10 ನೇ ಕ್ಲಾಸ್ ವರೆಗೆ : ರೂ.2000.
11 ರಿಂದ 12ನೇ ತರಗತಿಯವರೆಗೆ: ರೂ.3000.
ಪದವಿ / ಸ್ನಾತಕೋತ್ತರ / ಡಿಪ್ಲೊಮ ಕೋರ್ಸ್‌ಗಳು: ರೂ.6000.
ಐಟಿಐ/ಪಾಲಿಟೆಕ್ನಿಕ್ ನವರಿಗೆ : ರೂ.6000.
ವೃತ್ತಿಪರ ಪದವಿ ಕೋರ್ಸ್‌ನವರಿಗೆ : ರೂ.25000.

ಅಪ್ಲಿಕೇಶನ್‌ ಸಲ್ಲಿಸುವ ವಿಧಾನ:-
ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (ಎನ್‌ಎಸ್‌ಪಿ) ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.
ಕ್ಲಿಕ್ ಮಾಡಿ :
https://scholarships.gov.in

ಗಮನಿಸಿ :-
ಎನ್‌ಎಸ್‌ಪಿ ಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಮತ್ತು ಅರ್ಜಿಗಳ ಪರಿಶೀಲನೆಗೆ ಸಂಬಂಧಿಸಿದಂತೆ ಟೆಕ್ನಿಕಲ್ ಸಮಸ್ಯೆಗಳಿದ್ದಲ್ಲಿ ಇ-ಮೇಲ್ ಐಡಿ [email protected] ಗೆ ಸಂಪರ್ಕಿಸಿ ಅಥವಾ ಸಹಾಯವಾಣಿ ಸಂಖ್ಯೆ 0120-6619540 ಗೆ ಕರೆ ಮಾಡಬಹುದು.

ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30-11-2023.
ಮೆಟ್ರಕ್‌ ನಂತರದ ವಿದ್ಯಾರ್ಥಿಗಳು ಆರ್ಥಿಕ ನೆರವಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31-12-2023.

ನಿಮ್ಮ ಜವಾಬ್ದಾರಿಗಳು:-
ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.

ವೃತ್ತಿ ನ್ಯೂಸ್ ನಲ್ಲಿ ಜಾಹಿರಾತು ನೀಡಲು ವಾಟ್ಸಪ್ಪ್ ಮಾಡಿ : 8088962473

Related posts