Hassan District Court Recruitment 2023: 10ನೇ ತರಗತಿ ಪಾಸ್ ಮಾಡಿದವರಿಗೆ ಗುಡ್ ನ್ಯೂಸ್. ₹17000 ದಿಂದ ₹ 37,900 ವರೆಗೆ ಮಾಸಿಕ ವೇತನ ಪಡೆಯಬಹುದಾದ ಕೋರ್ಟ್‌ನಲ್ಲಿನ ಸೇವಕ ಮತ್ತು ಆದೇಶ ಜಾರಿಕಾರರು ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಹತೆ, ಇತರೆ ಮಾಹಿತಿ ಇಲ್ಲಿದೆ. ಈ ಹುದ್ದೆಗಳ ಸಂಪೂರ್ಣ ವಿವರ ಇಲ್ಲಿದೆ.
ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ ಈ ರೀತಿ ಇದೆ :-
i) ಸೇವಕರು : 32
ವೇತನ ಶ್ರೇಣಿ : Rs.17000-28950.
ii) ಆದೇಶ ಜಾರಿಕಾರರು: 11
ವೇತನ ಶ್ರೇಣಿ : Rs.19,950-37900.
Advertisement
ವಿದ್ಯಾರ್ಹತೆ ವಿವರ ಈ ರೀತಿ ಇದೆ :-
- ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಪಾಸ್ ಮಾಡಿರಬೇಕು. ಜೊತೆಗೆ ನಿಗದಿಪಡಿಸಿದ ಇತರೆ ಅಗತ್ಯ ಅರ್ಹತೆಗಳನ್ನು ಹೊಂದಿರಬೇಕು.
- ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಪರಿಣತಿ ಅಪೇಕ್ಷಣೀಯ. ಆದೇಶ ಜಾರಿಕಾರರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲಘು ಮತ್ತು ಭಾರೀ ವಾಹನ ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯ.
- ಅಭ್ಯರ್ಥಿಗಳಿಗೆ ಸ್ಥಳೀಯ ಭಾಷೆ ಕನ್ನಡದಲ್ಲಿ ಓದಲು, ಬರೆಯಲು ಮತ್ತು ವ್ಯವಹರಿಸುವ ಜ್ಞಾನ ಇರಬೇಕು.
- ಸೇವಕರ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು. ಕನ್ನಡ ಓದಲು, ಬರೆಯಲು ಗೊತ್ತಿರಬೇಕು.
Advertisement
ವಯೋಮಿತಿ ವಿವರ ಈ ರೀತಿ ಇದೆ:-
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು, ಗರಿಷ್ಠ 35 ವರ್ಷ ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.
ಆದೇಶ ಜಾರಿಕಾರರ ಹುದ್ದೆಯ ಆಯ್ಕೆ ವಿಧಾನ: –
ವಿದ್ಯಾರ್ಹತೆಯ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ 1:25 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಕನ್ನಡ ಓದಲು ಹಾಗೂ ಬರೆಯಲು ಹಾಗೂ ಸಾಮಾನ್ಯ ಜ್ಞಾನದ ಬಗ್ಗೆ ಪರೀಕ್ಷೆ 10 ಅಂಕಗಳಿಗೆ ನಡೆಸಲಾಗುವುದು.
ಸೇವಕ ಹುದ್ದೆಯ ಆಯ್ಕೆ ವಿಧಾನ:-
ನ್ಯಾಯಾಲಯಗಳಲ್ಲಿನ ಸೇವಕ (Peon) ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಅರ್ಹತೆಯ ಆಧಾರದ ಮೇಲೆ 1:10 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
-ಕನ್ನಡ ಓದಲು ಹಾಗೂ ಬರೆಯಲು ಹಾಗೂ ಸಾಮಾನ್ಯ ಜ್ಞಾನದ ಬಗ್ಗೆ ಪರೀಕ್ಷೆ 10 ಅಂಕಗಳಿಗೆ ನಡೆಸಲಾಗುವುದು.
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 03-10-2023 ರ ರಾತ್ರಿ 11-59 ಗಂಟೆವರೆಗೆ.
ಅರ್ಜಿ ಶುಲ್ಕದ ವಿವರ ಈ ರೀತಿ ಇದೆ:-
ಸಾಮಾನ್ಯ / ಒಬಿಸಿ / EWS ಕೆಟಗರಿಯವರಿಗೆ ರೂ.200/-
ಎಸ್‌ಸಿ / ಎಸ್‌ಟಿ /ಪ್ರವರ್ಗ-೧ / ಅಂಗವಿಕಲದವರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಧಿಕೃತ ವೆಬ್‌ಸೈಟ್ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ನಿಮ್ಮ ಜವಾಬ್ದಾರಿಗಳು
ಆನ್‌ಲೈನ್/ಆಫ್‌ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.