ಅಂಚೆ ಇಲಾಖೆ ನೇಮಕಾತಿ 2026 | ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾದವರಿಂದ ಅರ್ಜಿ ಆಹ್ವಾನ | ವೇತನ ಶ್ರೇಣಿ: ಮಾಸಿಕ ರೂ. 19,900 ರಿಂದ ರೂ. 63,200 ರವರೆಗೆ | ಅರ್ಜಿ ಲಿಂಕ್ ಇಲ್ಲಿದೆ – ವೃತ್ತಿ ನ್ಯೂಸ್.
India Post recruitment 2026: ಭಾರತೀಯ ಅಂಚೆ ಇಲಾಖೆಯ ಮೇಲ್ ಮೋಟರ್ ಸರ್ವಿಸ್ (MMS) ಬೆಂಗಳೂರು ವಿಭಾಗದಲ್ಲಿ ಖಾಲಿ ಇರುವ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದು, ಚಾಲನಾ ವೃತ್ತಿಯಲ್ಲಿ ಆಸಕ್ತಿ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಹಾಗೂ ಸುವರ್ಣ ಅವಕಾಶವಾಗಿದೆ. ಈ ಹುದ್ದೆಗಳ ಕುರಿತು ವಿವರ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಅರ್ಹತೆ, ವಿದ್ಯಾರ್ಹತೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ.







ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ. ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
ಅಂಚೆ ಇಲಾಖೆ ನೇಮಕಾತಿ 2026: 11 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಸ್ಪೀಡ್ ಪೋಸ್ಟ್ (Speed Post) ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ :-
ಮೈಲ್ ಮೋಟರ್ ಸರ್ವಿಸ್ (MMS) ಬೆಂಗಳೂರು.
ಮೈಲ್ ಮೋಟರ್ ಸರ್ವಿಸ್ (MMS) ಸಬ್ ಡಿಪೋ ಮೈಸೂರು.
ವಿದ್ಯಾರ್ಹತೆ
i) ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10ನೇ ತರಗತಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ii) ಲಘು ಮತ್ತು ಭಾರಿ ಮೋಟಾರು ವಾಹನಗಳನ್ನು (LMV & HMV) ಚಲಾಯಿಸಲು ಮಾನ್ಯತೆ ಹೊಂದಿರುವ ಚಾಲನಾ ಪರವಾನಗಿ (Driving License) ಕಡ್ಡಾಯವಾಗಿ ಹೊಂದಿರಬೇಕು.
iii) ಮೋಟಾರ್ ಯಾಂತ್ರಿಕತೆಯ (Motor Mechanism) ಜ್ಞಾನ ಇರಬೇಕು (ವಾಹನದಲ್ಲಿನ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಲು ತಿಳಿದಿರಬೇಕು).
ಲಘು ಮತ್ತು ಭಾರಿ ಮೋಟಾರು ವಾಹನಗಳನ್ನು ಚಾಲನೆ ಮಾಡಿದ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.
iv) ಹೋಮ್ ಗಾರ್ಡ್ ಅಥವಾ ಸಿವಿಲ್ ಸ್ವಯಂಸೇವಕರಾಗಿ 3 ವರ್ಷಗಳ ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು (ಇದು ಐಚ್ಛಿಕ ಅರ್ಹತೆ).
v) ಪ್ರಸ್ತುತ ಅಂಚೆ ಇಲಾಖೆಯಲ್ಲಿ ಅಥವಾ ಕೇಂದ್ರ ಸರ್ಕಾರದ ಇತರ ಸಚಿವಾಲಯಗಳಲ್ಲಿ ನಿಯಮಿತ ಡಿಸ್ಪ್ಯಾಚ್ ರೈಡರ್ ಅಥವಾ ಎಂಟಿಎಸ್ (MTS) ಆಗಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಅವಕಾಶ
ವೇತನಶ್ರೇಣಿ
i) ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ (7th CPC) ಪೇ ಮ್ಯಾಟ್ರಿಕ್ಸ್ ಲೆವೆಲ್-2 ರಂತೆ ಮಾಸಿಕ ರೂ. 19,900 ರಿಂದ ರೂ. 63,200 ರವರೆಗೆ ವೇತನ ಶ್ರೇಣಿ ಸಿಗಲಿದೆ.
ii) ಇದರೊಂದಿಗೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಸಿಗುವ ಇತರೆ ಭತ್ಯೆಗಳು (DA, HRA ಇತ್ಯಾದಿ) ಹೆಚ್ಚುವರಿಯಾಗಿ ದೊರೆಯಲಿವೆ.
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:-
i) ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳನ್ನು ಚಾಲನಾ ಪರೀಕ್ಷೆಗೆ (Driving Test / Trade Test) ಕರೆಯಲಾಗುವುದು.
ii) ವಾಹನ ಚಾಲನೆ ಮಾಡುವ ಕೌಶಲ್ಯ ಹಾಗೂ ಮೋಟಾರ್ ಯಾಂತ್ರಿಕತೆಯ ಜ್ಞಾನವನ್ನು ಮೌಲ್ಯಮಾಪನ ಮಾಡುವ ಆಧಾರದ ಮೇಲೆ ಅಭ್ಯರ್ಥಿಗಳ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅರ್ಜಿ ಶುಲ್ಕ ವಿವರ:-
ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (ಉಚಿತ ಅರ್ಜಿ ಪ್ರಕ್ರಿಯೆ).
ಅರ್ಜಿ ಸಲ್ಲಿಸುವ ಬಗೆ: ಆಫ್ಲೈನ್ (ಸ್ಪೀಡ್ ಪೋಸ್ಟ್ ಮೂಲಕ ಮಾತ್ರ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಧಿಸೂಚನೆ ಪ್ರಕಟಣೆಯಾದ 60 ದಿನಗಳ ಒಳಗೆ (ಅಧಿಸೂಚನೆ ಹೊರಡಿಸಿದ ದಿನಾಂಕ 01 ಆಗಸ್ಟ್ 2026)
ಆಫ್ಲೈನ್ ಅರ್ಜಿ ಸಲ್ಲಿಸುವ ವಿಧಾನ:-
i) ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ನಿಂದ ನಿಗದಿತ ಅರ್ಜಿ ನಮೂನೆ (Annexure-I) ಅನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು.
ii) ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು (ಹೆಸರು, ಜನ್ಮ ದಿನಾಂಕ, ಸೇವಾ ವಿವರಗಳು, ವಿದ್ಯಾರ್ಹತೆ, ಡ್ರೈವಿಂಗ್ ಲೈಸೆನ್ಸ್ ವಿವರ) ಸರಿಯಾಗಿ ಭರ್ತಿ ಮಾಡಿ, ನಿಮ್ಮ ಸಹಿ ಮಾಡಿ.
iii) ಅಗತ್ಯವಿರುವ ದಾಖಲೆಗಳ ದೃಢೀಕೃತ ಪ್ರತಿಗಳನ್ನು (SSLC ಅಂಕಪಟ್ಟಿ, ವಯಸ್ಸಿನ ಪುರಾವೆ, DL, ಚಾಲನಾ ಅನುಭವ ಪ್ರಮಾಣಪತ್ರ, ಸೇವಾ ದಾಖಲೆಗಳು ಇತ್ಯಾದಿ) ಲಗತ್ತಿಸಬೇಕು.
iv) ನಿಮ್ಮ ಪ್ರಸ್ತುತ ಇಲಾಖೆಯ ಮುಖ್ಯಾಧಿಕಾರಿ/ಮಂಜೂರಾತಿ ಅಧಿಕಾರಿಯಿಂದ ಅನೆಕ್ಸರ್-2 (Annexure-II) ಮತ್ತು ಇತರ ಅಗತ್ಯ ಪ್ರಮಾಣಪತ್ರಗಳನ್ನು (ವಿಜಿಲೆನ್ಸ್ ಕ್ಲಿಯರೆನ್ಸ್, ಇಂಟೆಗ್ರಿಟಿ ಸರ್ಟಿಫಿಕೇಟ್, ಕಳೆದ 5 ವರ್ಷಗಳ APAR ಪ್ರತಿಗಳು) ಪಡೆಯಬೇಕು.
v) ಭರ್ತಿ ಮಾಡಿದ ಸಂಪೂರ್ಣ ಅರ್ಜಿಯನ್ನು ಸಂಬಂಧಪಟ್ಟ ಪ್ರಾಧಿಕಾರದ ಮೂಲಕ (Proper Channel) “ದಿ ಮ್ಯಾನೇಜರ್, ಮೈಲ್ ಮೋಟರ್ ಸರ್ವಿಸ್, ನಂ. 4, ಬಸವೇಶ್ವರ ರಸ್ತೆ, ವಸಂತನಗರ, ಬೆಂಗಳೂರು – 560001” ಈ ವಿಳಾಸಕ್ಕೆ ಕೇವಲ ಸ್ಪೀಡ್ ಪೋಸ್ಟ್ (Speed Post) ಮೂಲಕ ಕಳುಹಿಸಬೇಕು.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473




