KMF ನೇಮಕಾತಿ 2025 | ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ | ವೇತನ ಶ್ರೇಣಿ ₹1,55,200ರ ವರೆಗೆ | ಅರ್ಜಿ ಲಿಂಕ್ ಇಲ್ಲಿದೆ – ವೃತ್ತಿ ನ್ಯೂಸ್.
KMF SHIMUL Recruitment 2025 : ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಇದರಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಈ ಹುದ್ದೆಗಳ ಕುರಿತು ವಿವರ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಅರ್ಹತೆ, ವಿದ್ಯಾರ್ಹತೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ.





ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ. ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
KMF SHIMUL Recruitment 2025: ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ :-
i) ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ)
ವಿದ್ಯಾರ್ಹತೆ: ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನೆ ವಿಷಯದಲ್ಲಿ (ಬಿ.ವಿ.ಎಸ್ಸಿ ಅಂಡ್ ಎಹೆಚ್) ಪದವಿಯನ್ನು ಹೊಂದಿರಬೇಕು.
ii) ಸಹಾಯಕ ವ್ಯವಸ್ಥಾಪಕರು (ಆಡಳಿತ
ವಿದ್ಯಾರ್ಹತೆ: ಮಾನವ ಸಂಪನ್ಮೂಲ ವಿಷಯದಲ್ಲಿ 02 ವರ್ಷಗಳ ಪೂರ್ಣಾವಧಿ ಎಂಬಿಎ ಜೊತೆಗೆ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಆಡಳಿತ ನಿರ್ವಹಣೆಯಲ್ಲಿ 03 ವರ್ಷಗಳ ಸೇವಾನುಭವ ಹಾಗೂ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
iii) ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್)
ವಿದ್ಯಾರ್ಹತೆ: ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ (ಕೃಷಿ) ಪದವಿ ಹೊಂದಿರಬೇಕು.
iv) ಎಂಐಎಸ್/ ಸಿಸ್ಟಂ ಆಫೀಸರ್
ವಿದ್ಯಾರ್ಹತೆ: ಬಿಇ ಕಂಪ್ಯೂಟರ್ ಸೈನ್ಸ್/ ಇನ್ ಫಾರ್ಮೇಷನ್ ಇಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು.
v) ಮಾರುಕಟ್ಟೆ ಅಧಿಕಾರಿ
ವಿದ್ಯಾರ್ಹತೆ: ಬಿ.ಕಾಂ/ ಬಿ.ಎಸ್ಸಿ/ ಬಿ.ಬಿ.ಎಂ ಪದವಿ ಜೊತೆಗೆ ಮಾರುಕಟ್ಟೆಯಲ್ಲಿ 3 ವರ್ಷಗಳ ಅನುಭವ ಹೊಂದಿರಬೇಕು.
vi) ತಾಂತ್ರಿಕ ಅಧಿಕಾರಿ (ಅಭಿಯಂತರ)
ವಿದ್ಯಾರ್ಹತೆ: ಬಿಇ ಪದವಿ ಹೊಂದಿರಬೇಕು.
vii) ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ)
ವಿದ್ಯಾರ್ಹತೆ: ಎಂ.ಎಸ್ಸಿ ಸ್ನಾತಕೋತ್ತರ ಪದವಿ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
viii) ತಾಂತ್ರಿಕ ಅಧಿಕಾರಿ (ಡಿಟಿ)
ವಿದ್ಯಾರ್ಹತೆ: ಬಿ.ಟೆಕ್ (ಡೈರಿ ಟೆಕ್ನಾಲಜಿ) ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ix) ಕೆಮಿಸ್ಟ್ ದರ್ಜೆ-1
ವಿದ್ಯಾರ್ಹತೆ: ಬಿ.ಎಸ್ಸಿ ಪದವಿ ವ್ಯಾಸಂಗ ಮಾಡಿರಬೇಕು.
x) ವಿಸ್ತರಣಾಧಿಕಾರಿ ದರ್ಜೆ-3
ವಿದ್ಯಾರ್ಹತೆ: ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
xi) ಆಡಳಿತ ಸಹಾಯಕ ದರ್ಜೆ-2
ವಿದ್ಯಾರ್ಹತೆ: ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
xii) ಲೆಕ್ಕ ಸಹಾಯಕ ದರ್ಜೆ-2
ವಿದ್ಯಾರ್ಹತೆ: ಬಿ.ಕಾಂ. ಪದವಿಯೊಂದಿಗೆ ಟ್ಯಾಲಿ ಸರ್ಟಿಫಿಕೇಟ್ ಅಥವಾ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
xiii) ಮಾರುಕಟ್ಟೆ ಸಹಾಯಕ ದರ್ಜೆ-2
ವಿದ್ಯಾರ್ಹತೆ: ಬಿಬಿಎಂ / ಬಿ.ಎಸ್ಸಿ/ ಬಿ.ಕಾಂ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
xiv) ಕಿರಿಯ ಸಿಸ್ಟಂ ಆಪರೇಟರ್
ವಿದ್ಯಾರ್ಹತೆ: ಯಾವುದೇ ಪದವಿಯೊಂದಿಗೆ ಕನಿಷ್ಠ 1 ವರ್ಷದ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಹಾಗೂ 3 ವರ್ಷಗಳ ಅನುಭವ ಹೊಂದಿರಬೇಕು.
xv) ಶೀಘ್ರಲಿಪಿಗಾರರು ದರ್ಜೆ-2
ವಿದ್ಯಾರ್ಹತೆ: ಯಾವುದೇ ಪದವಿಯೊಂದಿಗೆ ಸೀನಿಯರ್ ಇಂಗ್ಲೀಷ್ ಮತ್ತು ಕನ್ನಡ ಶಾರ್ಟ್ ಹ್ಯಾಂಡ್ ನೊಂದಿಗೆ ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಿರ್ವಹಣೆ ಜ್ಞಾನ ಹೊಂದಿರಬೇಕು.
xvi) ಕಿರಿಯ ತಾಂತ್ರಿಕರು
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಯೊಂದಿಗೆ ಡೈರೆಕ್ಟೋರೇಟ್ ಜನರಲ್ ಆಫ್ ಎಂಪ್ಲಾಯ್ಮೆಂಟ್ ಅಂಡ್ ಟ್ರೈನಿಂಗ್ ಇವರಿಂದ ಆಯಾ ಟ್ರೇಡ್ ನಲ್ಲಿ ತೇರ್ಗಡೆ ಹೊಂದಿ ಕಡ್ಡಾಯವಾಗಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಅಥವಾ ಎನ್.ಸಿ.ವಿ.ಟಿ ಸರ್ಟಿಫಿಕೇಟ್ ಹೊಂದಿರತಕ್ಕದ್ದು.
ವೇತನ ಶೇಣಿ :
i) ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) ರೂ. 83,700 – ರೂ. 1,55,200
ii) ಸಹಾಯಕ ವ್ಯವಸ್ಥಾಪಕರು (ಆಡಳಿತ) ರೂ. 83,700 – ರೂ. 1,55,200
iii) ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) ರೂ. 83,700 – ರೂ. 1,55,200
iv) ಎಂಐಎಸ್/ ಸಿಸ್ಟಂ ಆಫೀಸರ್ ರೂ. 69,250 – ರೂ. 1,34,200
v) ಮಾರುಕಟ್ಟೆ ಅಧಿಕಾರಿ ರೂ. 69,250 – ರೂ. 1,34,200
vi) ತಾಂತ್ರಿಕ ಅಧಿಕಾರಿ (ಅಭಿಯಂತರ) ರೂ. 69,250 – ರೂ. 1,34,200
vii) ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) ರೂ. 69,250 – ರೂ. 1,34,200
viii) ತಾಂತ್ರಿಕ ಅಧಿಕಾರಿ (ಡಿಟಿ) ರೂ. 69,250 – ರೂ. 1,34,200
ix) ಕೆಮಿಸ್ಟ್ ದರ್ಜೆ-1 ರೂ. 54,175 – ರೂ. 99,400
x) ವಿಸ್ತರಣಾಧಿಕಾರಿ ದರ್ಜೆ-3 ರೂ. 54,175 – ರೂ. 99,400
xi) ಆಡಳಿತ ಸಹಾಯಕ ದರ್ಜೆ-2 ರೂ. 44,425 – ರೂ. 83,700
xii) ಲೆಕ್ಕ ಸಹಾಯಕ ದರ್ಜೆ-2 ರೂ. 44,425 – ರೂ. 83,700
xiii) ಮಾರುಕಟ್ಟೆ ಸಹಾಯಕ ದರ್ಜೆ-2 ರೂ. 44,425 – ರೂ. 83,700
xiv) ಕೆಮಿಸ್ಟ್ ದರ್ಜೆ-2 ರೂ. 44,425 – ರೂ. 83,700
xv) ಕಿರಿಯ ಸಿಸ್ಟಂ ಆಪರೇಟರ್ ರೂ. 44,425 – ರೂ. 83,700
xvi) ಶೀಘ್ರಲಿಪಿಗಾರರು ದರ್ಜೆ-2 ರೂ. 44,425 – ರೂ. 83,700
xvii) ಕಿರಿಯ ತಾಂತ್ರಿಕರು ರೂ. 34,100 – ರೂ. 67,600.

ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:-
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷಾ ಅಂಕಗಳ ಆಧಾರದಲ್ಲಿ ನೇಮಕಾತಿ ಮಾಡಲಾಗುವುದು.
ಸ್ಪರ್ಧಾತ್ಮಕ ಪ್ರವೇಶ ಪರೀಕ್ಷಾ ತರಬೇತಿ ಮತ್ತು ಆನ್ಲೈನ್ ಅರ್ಜಿ ಸಲ್ಲಿಸಲು ಇಂದೇ ಭೇಟಿ ಕೊಡಿ:-
IRCMD Education Center
Puttur & Sullia
Ph: 9945988118
ಅರ್ಜಿ ಶುಲ್ಕ ವಿವರ:-
i) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು – ರೂ. 500
ii) ಇತರೆ ವರ್ಗದ ಅಭ್ಯರ್ಥಿಗಳು – ರೂ. 1000.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಡಿಸೆಂಬರ್ 14, 2025
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ:-
i) ಕೆಳಗಿನ ಲಿಂಕ್/ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್ಲೋಡ್ ಮಾಡಿ.
ii) ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
iii) ಕೆಳಗಿನ ಆನ್ಲೈನ್ ಅಪ್ಲಿಕೇಶನ್ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
iv) ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
v) ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
vi) ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
vii) ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
viii) ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.
ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
NOTIFICATION – ಕ್ಲಿಕ್ ಮಾಡಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE – ಕ್ಲಿಕ್ ಮಾಡಿ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473




