Mahindra EmpowerHer Scholarship Program 2025-26: ಪ್ರಿಯ ವಿದ್ಯಾರ್ಥಿಗಳೆ, ಇವತ್ತಿನ ಮಾಹಿತಿಯಲ್ಲಿ, ಮಹೀಂದ್ರಾ ಎಂಪವರ್ಹರ್ ವಿದ್ಯಾರ್ಥಿವೇತನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ . ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಯಾವುವು? ಎಷ್ಟು ವಿದ್ಯಾರ್ಥಿ ವೇತನ ದೊರೆಯುತ್ತದೆ? ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು? ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ.
ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ.





ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
ಮಹೀಂದ್ರಾ ಎಂಪವರ್ಹರ್ ಸ್ಕಾಲರ್ಶಿಪ್ ಬಗ್ಗೆ:-
ಭಾರತದಲ್ಲಿ ಮಹಿಳಾ ಶಿಕ್ಷಣದ ಪ್ರಾಧಾನ್ಯತೆ ವರ್ಷದಿಂದ ವರ್ಷಕ್ಕೇ ಹೆಚ್ಚುತ್ತಿದೆ. ಆರ್ಥಿಕ, ಸಾಮಾಜಿಕ ಮತ್ತು ಕುಟುಂಬೇತರ ಅಡ್ಡಿ-ತಡೆಗಳಿಂದ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಗಿರುವ ಅನೇಕ ಹುಡುಗಿಯರಿಗೆ ನೆರವಾಗಿ ಮುನ್ನಡೆಸುವ ಉದ್ದೇಶದಿಂದ Mahindra & Mahindra Limited ಸಂಸ್ಥೆ ಪ್ರತಿ ವರ್ಷ EmpowerHer Scholarship ಅನ್ನು ಘೋಷಿಸುತ್ತದೆ. ಈ ಯೋಜನೆ ಸರ್ವತ್ರ ಮಹಿಳಾ ವಿದ್ಯಾಭ್ಯಾಸವನ್ನು ಶಕ್ತಿಮಂತರನ್ನಾಗಿಸುವ ಒಂದು ಪ್ರಮುಖ ಹಂತವಾಗಿದೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ, 9 ರಿಂದ ಸ್ನಾತಕೋತ್ತರ ಕೋರ್ಸ್ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನವನ್ನು ಪಡೆಯುವ ಅವಕಾಶವನ್ನು ಹೊಂದಿರುತ್ತಾರೆ. ಆಸಕ್ತರು ಅರ್ಹತೆ, ಸೌಲಭ್ಯ, ಅರ್ಜಿ ವಿಧಾನ ಕುರಿತು ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ಮಹೀಂದ್ರಾ ಎಂಪವರ್ಹರ್ ವಿದ್ಯಾರ್ಥಿವೇತನ ಮೊತ್ತದ ವಿವರ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಮ್ಮೆ ಮಾತ್ರ ನೀಡಲಾಗುವ ಮೊತ್ತ: 👉 ₹ 5,500/-.
ಮಹೀಂದ್ರಾ ಎಂಪವರ್ಹರ್ ವಿದ್ಯಾರ್ಥಿವೇತನಕ್ಕೆ ಅರ್ಹತೆಗಳು :-
i) ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಅಭ್ಯರ್ಥಿಯು ಕೆಳಗಿನ ಷರತ್ತುಗಳನ್ನು ಪೂರೈಸಬೇಕು:
ii) ಅರ್ಜಿದಾರ್ತಿ ಮಹಿಳೆ ಆಗಿರಬೇಕು ಈ ಯೋಜನೆ ವಿಶೇಷವಾಗಿ ಗರ್ಲ್ ಸ್ಟೂಡೆಂಟ್ಸ್ಗೆ ಮೀಸಲಾಗಿದೆ.
iii) ತರಗತಿ 9 ರಿಂದ 12ವರೆಗೆ ಓದುತ್ತಿರಬೇಕು ಮತ್ತು/ಅಥವಾ
ಬ್ಯಾಚುಲರ್ಸ್ (Undergraduate) ಕೋರ್ಸ್ ಮಾಡುತ್ತಿರಬೇಕು ಉದಾ: BA BSc BCom BBA BCA ಇತ್ಯಾದಿ
iv) ಹಿಂದಿನ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳು
ಕುಟುಂಬದ ವಾರ್ಷಿಕ ಆದಾಯ ₹4,00,000ಕ್ಕಿಂತ ಕಡಿಮೆ
v) ಕೆಳಗಿನವರು ಅರ್ಹರಲ್ಲ: Mahindra ಅಥವಾ Buddy4Study ಉದ್ಯೋಗಿಗಳ ಪುತ್ರಿಯರು ಈ ಷರತ್ತುಗಳನ್ನು ಪೂರೈಸುವ ಪ್ರತಿಯೊಬ್ಬ ಹುಡುಗಿಯೂ ಭಾರತದೆಲ್ಲೆಡೆಯಿಂದ ಅರ್ಜಿ ಹಾಕಬಹುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:-
i) ಪಾಸ್ ಪೋರ್ಟ್ ಅಳತೆ ಭಾವಚಿತ್ರ.
ii) ಆದಾಯ ಪ್ರಮಾಣ ಪತ್ರ.
iii) ಆಧಾರ್ ಕಾರ್ಡ್.
iv) ಬ್ಯಾಂಕ್ ಖಾತೆಯ ವಿವರಗಳು.
v) ವಿದ್ಯಾರ್ಥಿಗಳ ಕಳೆದ ವರ್ಷದ ಶೈಕ್ಷಣಿಕ ಪರೀಕ್ಷೆಯ ಅಂಕಪಟ್ಟಿ.
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ :- 15-Nov-2025.
ಹೆಚ್ಚಿನ ವಿವರಗಳಿಗೆ ಹಾಗೂ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE:- Click here
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473





