ಪುತ್ತೂರು: ಪ್ರತಿಬಾರಿ ವಿಶಿಷ್ಟ ಮತ್ತು ವಿನೂತನ ವಿಷಯಗಳೊಂದಿಗೆ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ನಡೆಸಿ ಮೆಚ್ಚುಗೆಗೆ ಪಾತ್ರವಾಗಿರುವ ಪುತ್ತೂರಿನ IRCMD ಶಿಕ್ಷಣ ಸಂಸ್ಥೆಯಲ್ಲಿ ಏಪ್ರಿಲ್ 3, 2025 ರಿಂದ ಹ್ಯಾಪಿ ಡೇಸ್ ಕಿಡ್ಸ್ ಸಮ್ಮರ್ ಕೂಲ್ ಕ್ಯಾಂಪ್ ನಡೆಯಲಿದೆ (ಹವಾನಿಯಂತ್ರಿತ ಕೊಠಡಿ).
IRCMD Kids Camp Includes :
ಫ್ರೂಟ್ಸ್ ಕಾರ್ವಿಂಗ್.
ವರ್ಚುವಲ್ ಝೂ ಟೂರ್( ಲರ್ನಿಂಗ್ ಬರ್ಡ್ಸ್ ಲೈಫ್)
ವಿಜ್ಞಾನ ಪ್ರಯೋಗಗಳು,
ಲ್ಯಾಂಗ್ವೇಜ್ ಲರ್ನಿಂಗ್,
ಸುಲಭ ಗಣಿತ,
ಹ್ಯಾಂಡ್ ರೈಟಿಂಗ್ ಸ್ಕಿಲ್
DIY ಕ್ರಾಫ್ಟ್ ಪ್ರಾಜೆಕ್ಟ್
ಪಝಲ್ಸ್ & ಸ್ಟಾರ್ಟಜಿ ಗೇಮ್ಸ್
ಮೆಮೊರಿ ಟೆಸ್ಟಿಂಗ್
& Many more..ಇಂದೇ ನೋಂದಾಯಿಸಿ.

ಕಿಡ್ಸ್ ಕ್ಯಾಂಪ್ ವಿವರ ಇಲ್ಲಿದೆ:
ಮೊದಲ ಬ್ಯಾಚ್ ಏಪ್ರಿಲ್ 3, 2025 ರಿಂದ ಪ್ರಾರಂಭವಾಗುತ್ತದೆ.
ಎರಡನೇ ಬ್ಯಾಚ್ ಏಪ್ರಿಲ್ 21, 2025 ರಿಂದ ಪ್ರಾರಂಭವಾಗುತ್ತದೆ.
ಒಟ್ಟು ದಿನಗಳು – 10
ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ.
ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆ ಇರುವ ತರಗತಿ ಕೊಠಡಿ, ನೈರ್ಮಲ್ಯ ಶೌಚಾಲಯಗಳು, ಶುದ್ಧೀಕರಣ ನೀರು, ತರಬೇತಿ ಪಡೆದ ಸಿಬ್ಬಂದಿ, ಚಟುವಟಿಕೆಗಳಿಗೆ ಸಂಪನ್ಮೂಲ ವ್ಯಕ್ತಿಗಳು, ಕರಕುಶಲ ಕೆಲಸಕ್ಕೆ ಗುಣಮಟ್ಟದ ವಸ್ತುಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ನೀಡಲಾಗುವುದು.(ಗಮನಿಸಿ: ಎಲ್ಲಾ ಶಿಬಿರ ಸಾಮಗ್ರಿಗಳನ್ನು ನಾವು ಒದಗಿಸುತ್ತೇವೆ.)
ಕಿಡ್ಸ್ ಕ್ಯಾಂಪ್ 2024ರ ವಿಡಿಯೋ ಇಲ್ಲಿದೆ 👇
ಕಿಡ್ಸ್ ಕ್ಯಾಂಪ್ ಯಾತಕ್ಕಾಗಿ:-
ಬೇರೆ ಬೇರೆ ಕಡೆಗಳಿಂದ ಬಂದ ಹೊಸ ಮುಖಗಳ ಪರಿಚಯ ನಿಮ್ಮ ಮಕ್ಕಳಿಗಾಗುತ್ತದೆ. ಪ್ರತಿ ದಿನ ಅದೇ ಶಾಲೆ ಅದೇ ಸ್ನೇಹಿತರನ್ನು ಹೊಂದಿದ್ದ ಮಗುವುಗೆ ಇಲ್ಲಿ ಹೊಸ ಸ್ನೇಹಿತರು ದೊರಕುತ್ತಾರೆ. ಹೊಸ ವಿಚಾರಗಳು ತಿಳಿಯುತ್ತವೆ. ಯಾರೊಂದಿಗೂ ಮಾತನಾಡದೇ ತಮ್ಮ ಪಾಡಿಗೆ ತಾನಾಗೇ ಇರುವ ಮಕ್ಕಳೂ ಕೂಡ, ಶಿಬಿರಗಳಲ್ಲಿ ತಮ್ಮ ಚಿಪ್ಪಿನಿಂದ ಹೊರಬಂದು ಸಮಾಜದಲ್ಲಿ ಎಲ್ಲರೊಂದಿಗೆ ಹೇಗೆ ಬದುಕಬೇಕು ಎನ್ನುವ ಕಲೆಯನ್ನು ಕಲಿಯುತ್ತಾರೆ. ಭಾಷಾ ಬೆಳವಣಿಗೆ ಮಾಡುವುದರಲ್ಲಿ, ಧೈರ್ಯ ಹೆಚ್ಚಿಸುವಿಕೆಯಲ್ಲಿ ,ಎಲ್ಲರ ಜೊತೆ ಪಾಳ್ಗೊಳ್ಳುವಿಕೆಯಲ್ಲಿ, ಕರ್ತವ್ಯ ಪ್ರಜ್ಞೆ ಮತ್ತು ನಂಬಿಕೆ ಬೆಳೆಸುವುದರಲ್ಲಿ ಕ್ಯಾಂಪ್ಗಳ ಮಹತ್ವ ಹೆಚ್ಚಿನದು. ಇಲ್ಲಿ ನಡೆಸುವ ಚಟುವಟಿಕೆಗಳಲ್ಲಿ ಯಾವುದೇ ಬೇಧಭಾವ ಇರುವುದಿಲ್ಲ. ಮಕ್ಕಳು ಇಲ್ಲಿ ಎಲ್ಲರೊಂದಿಗೆ ಸಮಾನವಾಗಿ ವರ್ತಿಸುವುದನ್ನು ಕಲಿತುಕೊಳ್ಳುತ್ತಾರೆ. ಶಿಬಿರಗಳು ಮಕ್ಕಳ ಮನಸ್ಸಿನ ಭಾರವನ್ನು ಇಳಿಸುತ್ತವೆ. ಪರೀಕ್ಷೆಗಳ
ಜಂಜಡಗಳಿಂದ ಬಳಲಿದ ಮಕ್ಕಳ ಮನಸ್ಸಿಗೆ ಮುದವನ್ನು ನೀಡುತ್ತದೆ. ಕಲೆ, ವಿಶಿಷ್ಟ ರೀತಿಯ ಶಿಕ್ಷಣ, ವೈಜ್ಞಾನಿಕ ಪ್ರಯೋಗಗಳು, ಆಟೋಟ ಇತ್ಯಾದಿ ಚಟುವಟಿಕೆಗಳು ಮಕ್ಕಳಿಗೆ ಹೊಸ ನೆಲೆಗಟ್ಟನ್ನು ಒದಗಿಸುತ್ತದೆ.
ಕಿಡ್ಸ್ ಕ್ಯಾಂಪ್ ಯಾವ ವಯಸ್ಸಿನ ಮಕ್ಕಳಿಗಾಗಿ:-
5 ರಿಂದ13 ವರ್ಷ ವಯಸ್ಸಿನ ಎಲ್ಲಾ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬಹುದು.
ಕಿಡ್ಸ್ ಕ್ಯಾಂಪ್ ನಡೆಯುವ ದಿನಾಂಕ, ಸಮಯ ಮತ್ತು ಸ್ಥಳ:-
ಮೊದಲ ಬ್ಯಾಚ್ ಏಪ್ರಿಲ್ 3, 2025 ರಿಂದ ಪ್ರಾರಂಭವಾಗುತ್ತದೆ.
ಎರಡನೇ ಬ್ಯಾಚ್ ಏಪ್ರಿಲ್ 21, 2025 ರಿಂದ ಪ್ರಾರಂಭವಾಗುತ್ತದೆ.
ಒಟ್ಟು ದಿನಗಳು – 10
ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ.
Address: IRCMD Education Center, Swagath Complex, Puttur.9945988118
ನೋಂದಾವಣೆಗಾಗಿ:-
5 ವರ್ಷದಿಂದ 13ವರ್ಷದ ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ಪ್ರವೇಶವನ್ನು ಪಡೆಯಲಿಚ್ಛಿಸುವವರು 9945988118 ಅಥವಾ 9632320477 ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಪ್ರಫುಲ್ಲ ಗಣೇಶ್ ಅವರು ತಿಳಿಸಿರುತ್ತಾರೆ.