
The J. N. Tata Endowment loan scholarship : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..!! ಜೆ.ಎನ್. ಟಾಟಾ ಎಂಡೋಮೆಂಟ್, ಸಾಗರೋತ್ತರ ಉನ್ನತ ಶಿಕ್ಷಣ ಅಧ್ಯಯನ ನಡೆಸಲು ಯೋಜಿಸಿರುವ ಭಾರತೀಯ ವಿದ್ಯಾರ್ಥಿಗಳಿಗೆ ಲೋನ್ ಸ್ಕಾಲರ್ಶಿಪ್ ಅರ್ಜಿಗಳನ್ನು ನೀಡುತ್ತಿದೆ. ಲೋನ್ ಸ್ಕಾಲರ್ಶಿಪ್ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಬಂಧಪಟ್ಟ ಟ್ರಸ್ಟಿನ ಟ್ರಸ್ಟಿಗಳ ಸ್ವವಿವೇಚನೆಯಿಂದ ತಮ್ಮ ಸಾಗರೋತ್ತರ ಅಧ್ಯಯನದಲ್ಲಿ ಅವರ ಶೈಕ್ಷಣಿಕ ಸಾಧನೆಗೆ ಜೋಡಿಸಲಾದ ಭಾಗಶಃ ‘ಪ್ರಯಾಣಭತ್ಯೆ’ ಮತ್ತು ‘ಗಿಫ್ಟ್ ಅವಾರ್ಡ್’ಗೆ ಶಿಫಾರಸ್ಸು ಮಾಡಬಹುದು. ಜೆ.ಎನ್. ಟಾಟಾ ಎಂಡೋಮೆಂಟ್ ವಿದ್ಯಾರ್ಥಿವೇತನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ . ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಯಾವುವು? ಎಷ್ಟು ವಿದ್ಯಾರ್ಥಿ ವೇತನ ದೊರೆಯುತ್ತದೆ? ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು? ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473




ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
ಜೆ.ಎನ್.ಟಾಟಾ ಎಂಡೋಮೆಂಟ್ ಸ್ಕಾಲರ್ಶಿಪ್ ಬಗ್ಗೆ:-
1892 ರಲ್ಲಿ ಟಾಟಾ ಸಮೂಹದ ಪ್ರವರ್ತಕರಾದ ಜಮ್ಸೆಟ್ಜೀ ನುಸ್ಸರ್ವಾಂಜೀ ಅವರು ಜೆಎನ್ ಟಾಟಾ ಎಂಡೋಮೆಂಟ್ನ ಸಾಲ ವಿದ್ಯಾರ್ಥಿವೇತನವನ್ನು ಸ್ಥಾಪಿಸಿದಾಗಿನಿಂದ 5,600 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಎಂಡೋಮೆಂಟ್ ಯಾವುದೇ ಶೈಕ್ಷಣಿಕ ಸ್ಟ್ರೀಮ್ನಲ್ಲಿ ಸ್ನಾತಕೋತ್ತರ, ಪಿಎಚ್ಡಿ ಮತ್ತು ಪೋಸ್ಟ್ಡಾಕ್ಟರಲ್ ಫೆಲೋಶಿಪ್ಗಳಂತಹ ವಿದೇಶಿ ಅಧ್ಯಯನಗಳನ್ನು ಮಾತ್ರ ಬೆಂಬಲಿಸುತ್ತದೆ. ಅರ್ಹತೆಯ ಆಧಾರದ ಮೇಲೆ, ಇದು “ದೇಶಕ್ಕೆ ಶ್ರೇಷ್ಠ ಸೇವೆ ಸಲ್ಲಿಸಲು ಅತ್ಯುತ್ತಮ ಮತ್ತು ಅತ್ಯಂತ ಪ್ರತಿಭಾನ್ವಿತ” ವಿದ್ಯಾರ್ಥಿಗಳಿಗೆ ಪ್ರತಿಫಲ ನೀಡಲು ಪ್ರಯತ್ನಿಸುತ್ತದೆ. ಆಸಕ್ತರು ಅರ್ಹತೆ, ಸೌಲಭ್ಯ, ಅರ್ಜಿ ವಿಧಾನ ಕುರಿತು ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
i) ಕನಿಷ್ಠ ಒಂದು ಅಂಡರ್ ಗ್ರಾಜುಯೇಟ್ ಪದವಿಯನ್ನು ಪೂರ್ಣಗೊಳಿಸಿರುವ ಅಥವಾ ಭಾರತದ ಯಾವುದೇ ಮಾನ್ಯ ವಿಶ್ವವಿದ್ಯಾಲಯ ಅಥವಾ ಕಾಲೇಜು ಅಥವಾ ಸಂಸ್ಥೆಯಲ್ಲಿ ಯಾವುದೇ ಅಂಡರ್ ಗ್ರ್ಯಾಜುಯೇಟ್ ಕಾರ್ಯಕ್ರಮದ ಕೊನೆಯ ವರ್ಷದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಲಭ್ಯವಿದೆ.
ii) ಅಭ್ಯರ್ಥಿಗಳು ವಿದೇಶದಲ್ಲಿ ಸ್ನಾತಕೋತ್ತರ/ ಡಾಕ್ಟರಲ್/ ಪೋಸ್ಟ್ ಡಾಕ್ಟರಲ್ ಅಧ್ಯಯನವನ್ನು ಮುಂದುವರಿಸುವ ಇಚ್ಛೆ ಉಳ್ಳವರಾಗಿರಬೇಕು.
iii) ಅಭ್ಯರ್ಥಿಗಳು ದಾಖಲಾಗಿರುವ ಕೋರ್ಸುಗಳು ಗ್ರಾಜುಯೇಟ್ ಪ್ರೋಗ್ರಾಮ್ (ಭಾರತೀಯ ಪರಿಭಾಷೆಯಲ್ಲಿ ಪೋಸ್ಟ್-ಗ್ರಾಜುಯೇಟ್ ಪ್ರೋಗ್ರಾಮ್) ಎಂದು ಮಾನ್ಯವಾದವು ಆಗಿರಬೇಕು.
iv) ಈ ಹಿಂದಿನ ವರ್ಷ/ಈ ಮೊದಲು ಜೆ.ಎನ್. ಟಾಟಾ ಎಂಡೋಮೆಂಟ್ ಲೋನ್ ಸ್ಕಾಲರ್ಶಿಪ್ ಗೆ ಆಯ್ಕೆಯಾಗಿರದ ಅಭ್ಯರ್ಥಿಗಳು ಮತ್ತು ತಾವು ಆಯ್ಕೆಯಾಗಿದ್ದರೂ ಸ್ಕಾಲರ್ಶಿಪ್ ಪಡೆದುಕೊಳ್ಳಲು ಅರ್ಹರಾಗಿರದ ಅಭ್ಯರ್ಥಿಗಳಿಗೂ ಹೊಸ ಅರ್ಜಿ ಸಲ್ಲಿಸುವ ಅವಕಾಶವಿದೆ.
v) ಈಗಾಗಲೇ ಸಾಗರೋತ್ತರ ಪೋಸ್ಟ್ ಗ್ರಾಜುಯೇಟ್ ಅಧ್ಯಯನ ನಡೆಸುತ್ತಿರುವ, ತಮ್ಮ ಒಂದನೇ ವರ್ಷದ ಕೊನೆಯಲ್ಲಿರುವ ಅಥವಾ ಎರಡನೇ ವರ್ಷದ ಪ್ರಾರಂಭದಲ್ಲಿರುವಂತಹ, ಲೋನ್ ಸ್ಕಾಲರ್ಶಿಪ್ ನೀಡುವ ಸಮಯದಲ್ಲಿ ಸಾಮಾನ್ಯವಾಗಿ ಯಾವುದೇ ಕ್ಯಾಲೆಂಡರ್ ವರ್ಷದ ಜುಲೈ ಅಲ್ಲಿ ಕನಿಷ್ಠ ಒಂದು ಸಂಪೂರ್ಣ ಶೈಕ್ಷಣಿಕ ವರ್ಷ (12 ತಿಂಗಳು) ಪೂರ್ಣಗೊಳ್ಳಲು ಬಾಕಿ ಉಳಿದಿರುವಂತಹ ಅರ್ಜಿದಾರರು ಅರ್ಹರಾಗಿರುತ್ತಾರೆ.
vi) ಆರ್ಚಿದಾರರು ತಮ್ಮ ಅಂಡರ್ ಗ್ರಾಜುಯೇಟ್ ಅಥವಾ ಪೋಸ್ಟ್ ಗ್ರಾಜುಯೇಟ್ ಅಧ್ಯಯನದಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು.
vii) ಅಭ್ಯರ್ಥಿಗಳು 2025ರ ಜೂನ್ 30ಕ್ಕೆ 45ಕ್ಕಿಂತ ಹೆಚ್ಚು ವರ್ಷ ವಯಸ್ಸಿನವರಾಗಿರಬಾರದು.
viii) ರೂ.10 ಲಕ್ಷದವರೆಗಿನ ಲೋನ್ ಸ್ಕಾಲರ್ಶಿಪ್ ನೀಡಲಾಗುವುದು.
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ :- ಮಾರ್ಚ್ 7, 2025.
ಹೆಚ್ಚಿನ ವಿವರಗಳಿಗೆ ಹಾಗೂ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE:- Click here
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473




