State Bank of India Probationary Officers Recruitment: ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಪ್ರೋಬೇಷನರಿ ಆಫೀಸರ್ ಹುದ್ದೆಗಳ ಭರ್ತಿ ಸ್ಟೇಟ್ ಬ್ಯಾಂಕ್ ಇಂಡಿಯಾ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.ಈ ಹುದ್ದೆಗಳ ಕುರಿತು ವಿವರ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಅರ್ಹತೆ, ವಿದ್ಯಾರ್ಹತೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ. ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ಕರೆ ಮಾಡಿ : 7892810864
ಭಾರತೀಯ ಸ್ಟೇಟ್ ಬ್ಯಾಂಕ್ ಪ್ರೊಬೇಷನರಿ ಆಫೀಸರ್ ಪೋಸ್ಟ್ಗಳನ್ನು ಭರ್ತಿ ಮಾಡಲು ಇದೀಗ 2025ನೇ ಸಾಲಿನ ನೇಮಕಾತಿ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಸರ್ಕಾರಿ ಉದ್ಯೋಗದ ರೀತಿಯೇ ಎಲ್ಲ ಸೌಲಭ್ಯವನ್ನು ಈ ಹುದ್ದೆಗೆ ಸೇರುವವರಿಗೆ ನೀಡಲಾಗುತ್ತದೆ. ಹುದ್ದೆಗಳ ವಿವರ, ಅರ್ಹತೆ, ಪರೀಕ್ಷೆ ದಿನಾಂಕ, ಇತರೆ ಡೀಟೇಲ್ಸ್ ಕೆಳಗಿನಂತೆ ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ :-
ಪ್ರೊಬೇಷನರಿ ಆಫೀಸರ್ / ಪಿಒ – 600.
ವೇತನ ಶ್ರೇಣಿ : ₹ 48480 – 85920
ವಿದ್ಯಾರ್ಹತೆ: ಯಾವುದೇ ಪದವಿ, ಅಂತಿಮ ಪದವಿಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
( ಒಟ್ಟು 600 ಎಸ್ಬಿಐ ಪಿಒ ಹುದ್ದೆಗಳ ಪೈಕಿ ಎಸ್ಸಿ -87, ಎಸ್ಟಿ – 57, ಒಬಿಸಿ-158, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ – 58, ಜೆನೆರಲ್ ಕೆಟಗರಿ ಅಭ್ಯರ್ಥಿಗಳಿಗೆ- 240 ಹುದ್ದೆಗಳು ಮೀಸಲಿವೆ.)
ವಯೋಮಿತಿ ವಿವರ ಈ ರೀತಿ ಇದೆ:-
ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರಬೇಕು.ಗರಿಷ್ಠ 30 ವರ್ಷ ವಯಸ್ಸು ಮೀರದವರು ಅರ್ಜಿ ಸಲ್ಲಿಸಬಹುದು. ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ವಯಸ್ಸಿನ ಸಡಿಲಿಕೆ ಈ ಕೆಳಗಿನಂತಿದೆ ನೋಡಿ.
i) ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ii) ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
iii) ವಿಶೇಷ ಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನಿಯಮ ಇರುತ್ತದೆ.
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:-
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷಾ ಅಂಕಗಳ ಮತ್ತು ಸಂದರ್ಶನದ ಆಧಾರದಲ್ಲಿ ನೇಮಕಾತಿ ಮಾಡಲಾಗುವುದು.ಪರೀಕ್ಷೆಯ ರಚನೆ ಈ ರೀತಿ ಇದೆ:-
i) Reasoning Ability
ii) Quantitative Aptitude
iii) Test of General Awareness
iv) Computer Knowledge
v) English Language
VI) General/ Economy/ Banking Awareness.
ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಮತ್ತು ಆನ್ಲೈನ್ ಅರ್ಜಿ ಸಲ್ಲಿಸಲು ಇಂದೇ ಭೇಟಿ ಕೊಡಿ:-
IRCMD Education Center
Puttur & Sullia
Ph: 9945988118
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳ ವಿವರ:
ಮಂಗಳೂರು, ಬೆಳಗಾವಿ, ಬೆಂಗಳೂರು, ಧಾರವಾಡ/ ಹುಬ್ಬಳ್ಳಿ, ಗುಲ್ಬರ್ಗ, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.
ಅರ್ಜಿ ಶುಲ್ಕ ವಿವರ:-
General / OBC / EWS : 750/-
SC / ST / PH: 0/-.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16.01.2025.
(ಆನ್ಲೈನ್ ಪ್ರಿಲಿಮ್ಸ್ ಪ್ರವೇಶ ಪರೀಕ್ಷಾ ದಿನಾಂಕ : 2025 ರ ಮಾರ್ಚ್ 8-15 ರ ನಡುವೆ. ನಿಖರವಾದ ಪ್ರಿಲಿಮ್ಸ್ ಪ್ರವೇಶ ಪರೀಕ್ಷಾ ದಿನಾಂಕ ಚೆಕ್ ಮಾಡಲು https://sbi.co.in/ ಗೆ ಭೇಟಿ ಕೊಡಿ)
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ:-
i) ಕೆಳಗಿನ ಲಿಂಕ್/ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್ಲೋಡ್ ಮಾಡಿ.
ii) ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
iii) ಕೆಳಗಿನ ಆನ್ಲೈನ್ ಅಪ್ಲಿಕೇಶನ್ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
iv) ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
v) ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
vi) ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
vii) ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
viii) ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆನ್ಲೈನ್ ಡೈರೆಕ್ಟ್ ಲಿಂಕ್ ಅನ್ನು ಕೆಳಗಿನಂತೆ ಕ್ಲಿಕ್ ಮಾಡಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE- ಕ್ಲಿಕ್ ಮಾಡಿ
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ಕರೆ ಮಾಡಿ : 7892810864