Army Agniveer 2024: ಅಗ್ನಿವೀರರ ನೇಮಕಾತಿಗೆ ಅರ್ಜಿ ಸ್ವೀಕಾರ ಆರಂಭವಾಗಿದೆ. ಈ ಹುದ್ದೆಗಳನ್ನು ಜೆನೆರಲ್ ಡ್ಯೂಟಿ, ಟ್ರೇಡ್ಸ್ಮನ್, ಟೆಕ್ನಿಕಲ್ ಕ್ಲರ್ಕ್, ಸ್ಟೋರ್ ಕೀಪರ್ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ. ಈ ಹುದ್ದೆಗಳ ಕುರಿತು ವಿವರ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಅರ್ಹತೆ, ವಿದ್ಯಾರ್ಹತೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ. ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
Advertisement
2024ನೇ ಸಾಲಿನ ಅಗ್ನಿವೀರರ ನೇಮಕಾತಿಗೆ ಸೇರಲು ಬಯಸುವವರು ಅರ್ಜಿ ಹಾಕಿ. ನಾಲ್ಕು ವರ್ಷದ ಈ ಹುದ್ದೆಯ ಸಂದರ್ಭದಲ್ಲಿ ಮಾಸಿಕ ವೇತನದ ಜತೆಗೆ ಆಸಕ್ತಿಯುಳ್ಳ ಡಿಗ್ರಿ ಕೋರ್ಸ್ ಅನ್ನು ಅಧ್ಯಯನ ಮಾಡಲು ಅವಕಾಶ ಸಿಗುತ್ತದೆ. ಅಲ್ಲದೇ ಹುದ್ದೆಯ ಅವಧಿ ಮುಗಿದ ನಂತರ ಅಂದರೆ ನಿವೃತ್ತಿ ಸಮಯದಲ್ಲಿ ಒಟ್ಟು 11.70 ಲಕ್ಷ ರೂ ನಿವೃತ್ತಿಯ ಪ್ಯಾಕೇಜ್ ಸಿಗಲಿದೆ. ಆಸಕ್ತಿಯುಳ್ಳವರು ವಿವಿಧ ಅರ್ಹತೆಯ ಆಧಾರದಲ್ಲಿ ಸೇವೆಯನ್ನು ಮುಂದುವರೆಸಲು ಸಹ ಅವಕಾಶ ಸಿಗುತ್ತದೆ. ಈ ಸದರಿ ಹುದ್ದೆಗಳಿಗೆ ಅರ್ಜಿ ಹಾಕಲು ಇತರೆ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿಯಿರಿ.
ಭೂಸೇನೆ ಅಗ್ನಿವೀರರನ್ನು ಜೆನೆರಲ್ ಡ್ಯೂಟಿ, ಟೆಕ್ನಿಕಲ್ (ಏವಿಯೇಷನ್ / ಅಮ್ಯುನಿಷನ್ ಎಕ್ಸಾಮಿನರ್), ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್, ಟ್ರೇಡ್ಸ್ಮನ್ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ.
ಭೂಸೇನೆ ಅಗ್ನಿವೀರರಿಗೆ ವಿಭಾಗವಾರು ವಿದ್ಯಾರ್ಹತೆ:-
i) ಅಗ್ನಿವೀರ್ ಜೆನೆರಲ್ ಡ್ಯೂಟಿ : 10 ನೇ ತರಗತಿಯನ್ನು ಕನಿಷ್ಠ ಶೇ.45 ಅಂಕಗಳೊಂದಿಗೆ, ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ii) ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ / ಅಮ್ಯುನಿಷನ್ ಎಕ್ಸಾಮಿನರ್): ವಿಜ್ಞಾನ (ಫಿಸಿಕ್ಸ್, ಮ್ಯಾಥ್ಸ್, ಕೆಮಿಸ್ಟ್ರಿ, ಇಂಗ್ಲಿಷ್ ) ದ್ವಿತೀಯ ಪಿಯು (12ನೇ ತರಗತಿ) ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.40 ಅಂಕಗಳನ್ನು ಪಡೆದಿರಬೇಕು.
iii) ಅಗ್ನಿವೀರ್ ಕ್ಲರ್ಕ್: ಯಾವುದೇ ಪಿಯುಸಿ ಅನ್ನು ಶೇ.60 ಅಂಕಗಳೊಂದಿಗೆ (ಸೈನ್ಸ್, ಕಲಾ, ಕಾಮರ್ಸ್), ಪ್ರತಿ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
iv) ಅಗ್ನಿವೀರ್ ಸ್ಟೋರ್ ಕೀಪರ್ ಟೆಕ್ನಿಕಲ್ : ಯಾವುದೇ ಪಿಯುಸಿ ಅನ್ನು ಶೇ.60 ಅಂಕಗಳೊಂದಿಗೆ (ಸೈನ್ಸ್, ಕಲಾ, ಕಾಮರ್ಸ್), ಪ್ರತಿ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
v) ಅಗ್ನಿವೀರ್ ಟ್ರೇಡ್ಸ್ಮನ್ : ಅಗ್ನಿವೀರ್ ಟ್ರೇಡ್ಸ್ಮನ್ ಹುದ್ದೆಗಳು 8ನೇ ತರಗತಿ ಪಾಸಾದವರಿಗೆ ಹಾಗೂ 10ನೇ ತರಗತಿ ಪಾಸಾದವರಿಗೆ ಇಬ್ಬರಿಗೂ ಲಭ್ಯ ಇವೆ. ಸಿಂಪಲ್ ಪಾಸ್ ಆಗಿದ್ದರೂ ಪರವಾಗಿಲ್ಲ. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳನ್ನು ಪಡೆದಿರಬೇಕು.
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:-
ಲಿಖಿತ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಇರುತ್ತವೆ.
ವೇತನ ಶ್ರೇಣಿ:
ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.
ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.
ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.
ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು.
ಸೇವಾ ನಿಧಿ ಪ್ಯಾಕೇಜ್, ಇತರೆ ಭತ್ಯೆಗಳು:-
i) ರಿಸ್ಕ್ ಅಂಡ್ ಹಾರ್ಡ್ಶಿಪ್, ರೇಷನ್, ಡ್ರೆಸ್, ಪ್ರಯಾಣ ಭತ್ಯೆಗಳನ್ನು ನೀಡಲಾಗುತ್ತದೆ.
ii) ರೂ.48 ಲಕ್ಷ ಮೊತ್ತದ ಜೀವ ವಿಮೆ ಇರುತ್ತದೆ.
iii) ಅಗ್ನಿವೀರರಿಂದ 9 ಸಾವಿರ ರೂ ಮತ್ತು ಸರ್ಕಾರದ 9 ಸಾವಿರ ರೂ ಗಳ ವಂತಿಗೆಯಿಂದ ಪ್ರತಿ ತಿಂಗಳು 18 ಸಾವಿರ ರೂ.ಗಳ ಪಿಎಫ್ ಸೌಲಭ್ಯ ಇರಲಿದೆ.
iv) ಒಟ್ಟಾರೆ ವಾರ್ಷಿಕ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ಇದೆ. 48 ಲಕ್ಷ ರೂಪಾಯಿವರೆಗಿನ ವಿಮಾ ಸೌಲಭ್ಯ ಇರಲಿದ್ದು, ಇದಕ್ಕೆ ಸೈನಿಕರು ವಂತಿಕೆ ಕಟ್ಟಬೇಕಿಲ್ಲ.
v) ನಿವೃತ್ತಿ ಸಮಯದಲ್ಲಿ ಒಟ್ಟು 11.70 ಲಕ್ಷ ರೂ ನಿವೃತ್ತಿಯ ಪ್ಯಾಕೇಜ್ ಸಿಗಲಿದೆ. ಆದರೆ, ಪಿಂಚಣಿ ಸೌಲಭ್ಯವಿರುವುದಿಲ್ಲ.
vi) ಸೇವಾ ಸಮಯದಲ್ಲಿ ಜೀವಹಾನಿಯಾದರೆ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ಜತೆಗೆ ಉಳಿದ ಸೇವಾ ಅವಧಿಯ ಸಂಬಳ ಪ್ರಾಪ್ತವಾಗಲಿದೆ.
vii) ಒಂದು ವೇಳೆ ಸೇವೆ ಸಮಯದಲ್ಲಿ ಅಂಗವೈಕಲ್ಯವಾದರೆ ಅದರ ಗಂಭೀರತೆ ಆಧಾರದಲ್ಲಿ ಪರಿಹಾರ ಸಿಗಲಿದೆ. ಸಾಮಾನ್ಯವಾಗಿ ಇದು 44 ಲಕ್ಷ ರೂಪಾಯಿವರೆಗೆ ಇರಲಿದೆ. ಜತೆಗೆ ಸೇವೆಯ ಉಳಿದ ಭಾಗದ ಸಂಬಳ ದೊರೆಯಲಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 22-03-2024
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
APPLY ONLINE
https://joinindianarmy.nic.in/
ನಿಮ್ಮ ಜವಾಬ್ದಾರಿಗಳು
ದಯವಿಟ್ಟು ಗಮನಿಸಿ : ವೃತ್ತಿ ನ್ಯೂಸ್ ನಿಂದ ಯಾವುದೇ ಕರೆಯನ್ನು ಮಾಡುವುದಿಲ್ಲ. 8088962473 ಇದು ಮಾತ್ರ ವೃತ್ತಿ ನ್ಯೂಸ್ ದೂರವಾಣಿ ಸಂಖ್ಯೆಯಾಗಿದೆ.
ಆನ್ಲೈನ್/ಆಫ್ಲೈನ್ ಮೂಲಕ ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ಅವರ ವೆಬ್ಸೈಟ್ನಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಇಲ್ಲಿ ಪ್ರಕಟಿಸಲಾಗಿದೆ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ನೀವು ತಪ್ಪಾಗಿ ಓದುವ ಮೂಲಕ ಅಥವಾ ಮಾಹಿತಿಯನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗಿರುವುದಿಲ್ಲ.
ವೃತ್ತಿ ನ್ಯೂಸ್ ನಲ್ಲಿ ಜಾಹೀರಾತು ನೀಡಲು ವಾಟ್ಸಪ್ಪ್ ಮಾಡಿ : 8088962473