ಸುಳ್ಯ: ROTARY EDUCATIONAL INSTITUTIONS – SULLIA ಇಲ್ಲಿ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಪ್ರಫುಲ್ಲ ಗಣೇಶ್ ಇವರಿಂದ ಅಬಾಕಸ್ ತರಗತಿಗಳು ಪ್ರಾರಂಭಗೊಂಡಿತು. ಗಣಿತದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವ ಅಬಾಕಸ್ ಮತ್ತು ವೇದ ಗಣಿತ ಅತಿ ಮುಖ್ಯ ಎಂದು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಅಬಾಕಸ್ ಅಂದರೆ ಏನು? ಅಬಾಕಸ್ ಯಾತಕ್ಕಾಗಿ? ಅಬಾಕಸ್ನಿಂದ ಆಗುವ ಪ್ರಯೋಜನ?
ಹೆಚ್ಚಿನ ಪೋಷಕರಿಗೆ ಅಬಾಕಸ್ ಅಂದರೆ ಏನು?, ಅಬಾಕಸ್ ಯಾತಕ್ಕಾಗಿ?, ಅಬಾಕಸ್ನಿಂದ ಆಗುವ ಪ್ರಯೋಜನದ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಮಕ್ಕಳಿಗೆ ಗಣಿತದಲ್ಲಿ ಆಸಕ್ತಿಯನ್ನು ಉಂಟು ಮಾಡುವ ಏಕೈಕ ತರಬೇತಿಯೇ ಅಬಾಕಸ್. ಅಬಾಕಸ್ ಕಲಿತ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ 6 ಪಟ್ಟು ಹೆಚ್ಚು ವೇಗದಲ್ಲಿ ಸಂಖ್ಯೆಗಳನ್ನು ಗುರುತಿಸುತ್ತಾರೆ. ಜೊತೆಗೆ ಫೋಟಾಗ್ರಾಫಿಕ್ ಮೆಮೊರಿಯನ್ನು ಕೂಡ ಅಳವಡಿಸಿಕೊಂಡಿರುತ್ತಾರೆ.
ಅಬಾಕಸ್ ಕೇವಲ ಗಣಿತಕ್ಕೆ ಸಂಬಂಧಿಸಿದ ಕಲಿಕೆಯಲ್ಲ ಇದೊಂದು ರೈಟ್ ಬ್ರಾಂಡ್ ಡೆವಲಪ್ಮೆಂಟ್ ಪ್ರೋಗ್ರಾಮ್. ಇದರಲ್ಲಿರುವ ಬೀಡ್ನಲ್ಲಿ ವಾಲ್ಯೂ ಇರುತ್ತದೆ. ಮಕ್ಕಳು ಎರಡೂ ಕೈಗಳನ್ನು ಬಳಸಿ ಬೀಡ್ಸ್ ಮೂವ್ ಮಾಡಿ Addition, Subtraction, Multiplication, Division ಮಾಡುತ್ತಾರೆ.


ಪ್ರಯೋಜನಗಳು (ನೈಸರ್ಗಿಕ ಸಾಮರ್ಥ್ಯ)
i) ಮಗುವಿನ ನೈಸರ್ಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ii) ಚಿಕ್ಕ ಮಕ್ಕಳು ತುಂಬಾ ಖುಷಿಯಿಂದ ನಂಬರ್ ಗಳನ್ನೂ ಕಲಿಯುತ್ತಾರೆ.
iii) ಇದು ಮಗುವಿಗೆ ಏಕಾಗ್ರತೆ (Concentration), ಆಲಿಸುವಿಕೆ(Listening), ನಿಖರತೆ (Accuracy), ಗ್ರಹಿಕೆ ಛಾಯಾಗ್ರಹಣ (Peruption photography) ಇತ್ಯಾದಿಗಳಿಗೆ ಅನುವು ಮಾಡಿಕೊಡುತ್ತದೆ.
iv) ಇವಾಗಿನ ಮಕ್ಕಳು ಬೆರಳ ತುದಿಯಲ್ಲಿ ಮೊಬೈಲ್ ಸ್ಕ್ರೀನ್ ಟಚ್ ಮಾಡ್ತಾ ಇರುವಾಗ, ಅಬಾಕಸ್ ಕಲಿತ ಮಕ್ಕಳ ಬೆರಳ ತುದಿಯಲ್ಲಿ ಅನುಕ್ರಮ ಸಂಖ್ಯೆಗಳ Addition, Substraction ಒಟ್ಟೊಟ್ಟಿಗೆ ಮಾಡ್ತಾ ಹೋಗ್ತಾರೆ.
v) ಇಲ್ಲಿ ಮುಖ್ಯವಾಗಿ ಮಗುವಿನ ಬ್ರೈನ್ ಡೆವಲಪ್ಮೆಂಟ್ ಆಗ್ತದೆ. ಲೆಫ್ಟ್ ಬ್ರೈನ್ ನಂಬರ್ಸ್ ತಗೊಂಡು ಹೋದ ಹಾಗೆ, ರೈಟ್ ಹ್ಯಾಂಡ್ ಬೀಡ್ಸ್ ವ್ಯಾಲ್ಯೂ ಮಾಡ್ತಾ ಹೋಗುತ್ತಾರೆ.
vi) ಲೆಫ್ಟ್ ಬ್ರೈನ್ – ಡಿಜಿಟಲ್ ಬ್ರೈನ್.
vii) ರೈಟ್ ಬ್ರೈನ್ – ಅನಲಾಗ್ ಬ್ರೈನ್.
ಲೆಫ್ಟ್ ಬ್ರೈನ್ – ರೀಡಿಂಗ್ , ರೈಟಿಂಗ್ , ಕ್ಯಾಲ್ಕ್ಯುಲೇಷನ್.
ರೈಟ್ ಬ್ರೈನ್ – ಸೃಜನಶೀಲತೆ , ಸುಸ್ಥಿರತೆ, ಸಮರ್ಥತೆ.
ಹಾಗಾಗಿ ಅಬಾಕಸ್ನಿಂದ ಒಂದು ಮಗುವಿನ ಸಂಪೂರ್ಣ ಮೆದುಳಿನ ಬೆಳವಣಿಗೆಯು ಜೊತೆಗೆ, ಆತ್ಮವಿಶ್ವಾಸ, ಇತರರೊಂದಿಗೆ ಸವಾಲು ಹಾಕುವ ಧೈರ್ಯ ಮತ್ತು ಸ್ವತಃ ಆಲ್ರೌಂಡರ್ ಆಗಿ ಯೋಚಿಸುತ್ತಾರೆ.
Vedic Mathematic: ಗಣಿತದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು, ವೇಗ ಮತ್ತು ನಿಖರತೆಯನ್ನು ಬೆಳೆಸಿಕೊಳ್ಳಲು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವ ವೇದಿಕ್ ಮಾಥ್ಸ್ ತುಂಬಾ ಪರಿಣಾಮಕಾರಿ. ಮಕ್ಕಳು ವೇದ ಗಣಿತದಿಂದ ಕಲಿಯುವುದರಿಂದ ಅತ್ಯುತ್ತಮ ಲೆಕ್ಕಾಚಾರದ ಕೌಶಲ್ಯಗಳನ್ನು ಹೊಂದಿ ಗಣಿತದಲ್ಲಿ ಉತ್ತಮವಾಗಿ ಸಿದ್ಧರಾಗುತ್ತಾರೆ. ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮತ್ತು ಹೆಚ್ಚಿನ ಲೆಕ್ಕಾಚಾರಗಳ ಬಳಕೆಯ ಅಗತ್ಯವಿರುತ್ತದೆ. ವೇದ ಗಣಿತದ ಮೂಲಕ ಅತ್ಯಂತ ವೇಗವಾಗಿ ಮತ್ತು ನಿಖರತೆಯೊಂದಿಗೆ, ಮಕ್ಕಳು ಉತ್ತರಿಸುತ್ತಾರೆ. ಶಾಲೆಯಲ್ಲಿ ಗಣಿತದಲ್ಲಿ ಉತ್ತಮವಾಗಿ ಸಿದ್ಧರಾಗುತ್ತಾರೆ ಮತ್ತು ಹೆಚ್ಚು ಆತ್ಮವಿಶ್ವಾಸ ಹೊಂದುತ್ತಾರೆ. ಇದು ಗಣಿತದಲ್ಲಿ ಪ್ರತಿಭಾನ್ವಿತರಾಗಲು ಸಹಾಯ ಮಾಡುತ್ತದೆ. ಗಣಿತದ ಭಯವನ್ನು ಹೋಗಲಾಡಿಸುತ್ತದೆ ಮತ್ತು ಮಕ್ಕಳನ್ನು ಗಣಿತದ ಬಗ್ಗೆ ಪ್ರೀತಿಯಲ್ಲಿ ಬೀಳಿಸುತ್ತದೆ.
ಇಂದೇ ನೋಂದಾಯಿಸಿ:-
ವೇದ ಗಣಿತ ಮತ್ತು ಅಬಾಕಸ್ ನಲ್ಲಿ ಉನ್ನತ ಸಾಧನೆಯನ್ನು ಗುರುತಿಸಿ ಜಾಗತಿಕ ಅತ್ಯುತ್ತಮ ಮಹಿಳಾ ಶಿಕ್ಷಕಿ ಅವಾರ್ಡ್ -2025 ಅನ್ನು IMRF ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ ಇಂಡಿಯಾ, ವಿಜಯವಾಡ ಇವರಿಂದ ಪಡೆದ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಪ್ರಫುಲ್ಲ ಗಣೇಶ್ ಅವರ ವೇದಿಕ್ ಮಾಥ್ಸ್ ಮತ್ತು ಅಬಾಕಸ್ ತರಬೇತಿಗೆ ಇಂದೇ ನೋಂದಾಯಿಸಿ . Ph: 9945988118.

ವೈದಿಕ ಗಣಿತದ ಪ್ರಯೋಜನಗಳು:-
ವೈದಿಕ ಗಣಿತದ ಮಹತ್ವವನ್ನು ವಿವಿಧ ರೀತಿಯಲ್ಲಿ ವಿವರಿಸಬಹುದು. ಸಂಖ್ಯಾತ್ಮಕ ಸಮಸ್ಯೆಗಳ ಸರಳೀಕರಣದಲ್ಲಿ ವೈದಿಕ ಗಣಿತದ ಅನ್ವಯವು ಆಧುನಿಕ ಲೆಕ್ಕಾಚಾರದ ವಿಧಾನಗಳಿಗಿಂತ ಹಲವು ಪಟ್ಟು ವೇಗವಾಗಿರುತ್ತದೆ. ಕೆಲವೊಮ್ಮೆ, ಸಂಖ್ಯಾತ್ಮಕ ಲೆಕ್ಕಾಚಾರಗಳನ್ನು ಸರಳಗೊಳಿಸುವ ಈ ವಿಧಾನಕ್ಕೆ ಕಾಗದ ಮತ್ತು ಪೆನ್ನು ಕೂಡ ಅಗತ್ಯವಿರುವುದಿಲ್ಲ. ಹೀಗಾಗಿ, ವೈದಿಕ ಗಣಿತವನ್ನು ಕಲಿಯುವುದರಿಂದ ಸಮಯವನ್ನು ಉಳಿಸುತ್ತದೆ ಮತ್ತು ಗಣಿತದ ಹೆಚ್ಚಿನ ಅನ್ವಯಿಕೆಗಳನ್ನು ಕಲಿಯುವ ಆಸಕ್ತಿಯನ್ನು ಸುಧಾರಿಸುತ್ತದೆ. ವೈದಿಕ ಗಣಿತ ಸೂತ್ರಗಳ ಕೆಲವು ಪ್ರಯೋಜನಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:
i) ಲೆಕ್ಕಾಚಾರಗಳು ಸುಲಭ ಮತ್ತು ಚಿಕ್ಕದಾಗುತ್ತವೆ.
ii) ಸರಳೀಕರಣಗಳನ್ನು ಕಡಿಮೆ ಸಮಯದಲ್ಲಿ ಮಾಡಬಹುದು.
iii) ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತಾರೆ.
iv) ಸೂತ್ರ ಆಧಾರಿತ ವಿಧಾನಗಳಿಂದ ಪಡೆದ ಫಲಿತಾಂಶಗಳನ್ನು ಸಾಮಾನ್ಯ ಕಾರ್ಯವಿಧಾನಗಳೊಂದಿಗೆ ಸುಲಭವಾಗಿ ಪರಿಶೀಲಿಸಬಹುದು.
v) ಈ ಸೂತ್ರಗಳನ್ನು ಬಳಸುವಾಗ ವಿದ್ಯಾರ್ಥಿಗಳು ತಪ್ಪುಗಳನ್ನು ಮಾಡುವ ಸಾಧ್ಯತೆ ತೀರಾ ಕಡಿಮೆ.
vi) ಸೂತ್ರಗಳ ಬಳಕೆಯು ವಿದ್ಯಾರ್ಥಿಗಳಿಗೆ ಗಣಿತದ ವಿಷಯದಲ್ಲಿ ತಮ್ಮ ಜ್ಞಾನ ಮತ್ತು ಆಸಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
vii) ಮಾನಸಿಕ ಲೆಕ್ಕಾಚಾರಗಳನ್ನು ಬಳಸಿಕೊಂಡು ಕಠಿಣ ಸಮಸ್ಯೆಗಳನ್ನು ಪರಿಹರಿಸಲು ವೈದಿಕ ಗಣಿತವು ಸಹಾಯ ಮಾಡುತ್ತದೆ.
ವೈದಿಕ ಗಣಿತ ಏಕೆ?
i) ಇದು ಒಬ್ಬ ವ್ಯಕ್ತಿಗೆ 10 ರಿಂದ-15 ಪಟ್ಟು ವೇಗವಾಗಿ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.
ii) ಕೋಷ್ಟಕದ (Tables) ಹೊರೆಯನ್ನು ಕಡಿಮೆ ಮಾಡುತ್ತದೆ (ಒಂಬತ್ತರವರೆಗೆ ಮಾತ್ರ ಕೋಷ್ಟಕಗಳನ್ನು ಕಲಿತರೆ ಸಾಕು)
iii) ಇದು ಒಂದು ಸಾಲಿನ ಉತ್ತರವನ್ನು ಒದಗಿಸುತ್ತದೆ.
iv) ಇದು ಬೆರಳು ಎಣಿಕೆಯನ್ನು ಕಡಿಮೆ ಮಾಡುವ ಒಂದು ಸರಳ ವಿಧಾನವಾಗಿದೆ.
v) ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
vi) ಉಳಿಸಿದ ಸಮಯವನ್ನು ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ಬಳಸಬಹುದು.
vii) ಏಕಾಗ್ರತೆಯನ್ನು ಸುಧಾರಿಸುತ್ತದೆ.
viii) ತಾರ್ಕಿಕ ಚಿಂತನೆಯ ಪ್ರಕ್ರಿಯೆಯನ್ನು ವರ್ಧಿಸುತ್ತದೆ.
ಇಂದೇ ನೋಂದಾಯಿಸಿ:-
ವೇದ ಗಣಿತ ಮತ್ತು ಅಬಾಕಸ್ ನಲ್ಲಿ ಉನ್ನತ ಸಾಧನೆಯನ್ನು ಗುರುತಿಸಿ ಜಾಗತಿಕ ಅತ್ಯುತ್ತಮ ಮಹಿಳಾ ಶಿಕ್ಷಕಿ ಅವಾರ್ಡ್ -2025 ಅನ್ನು IMRF ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ ಇಂಡಿಯಾ, ವಿಜಯವಾಡ ಇವರಿಂದ ಪಡೆದ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಪ್ರಫುಲ್ಲ ಗಣೇಶ್ ಅವರ ವೇದಿಕ್ ಮಾಥ್ಸ್ ಮತ್ತು ಅಬಾಕಸ್ ತರಬೇತಿಗೆ ಇಂದೇ ನೋಂದಾಯಿಸಿ . Ph: 9945988118.

